
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಇವರ ವತಿಯಿಂದ ಹಾದ್ರಿಪುರ ಗ್ರಾಮಪಂಚಾಯತಿ ವ್ಯಾಪ್ತಿಯ ರಾಮೇಶ್ವರ ಕೆರೆ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ರಾಮೇಶ್ವರ ಗ್ರಾಮದ ರಾಮೇಶ್ವರ ಕೆರೆ ಹೂಳೆತ್ತುವ ಕಾಮಗಾರಿ ಮುಕ್ತಾಯ ಆಗಿದ್ದು ಇಂದು ನಾಮಫಲಕ ಅನಾವರಣ, ಬಾಗಿನ ಅರ್ಪಣೆ, ಕೆರೆ ಹಸ್ತಾಂತರ ಕಾರ್ಯಕ್ರಮ ನಡೆಯಿತು
ದೊಡ್ಡಬಳ್ಳಾಪುರ ತಾಲ್ಲೂಕು ಶಾಸಕರಾದ ಧೀರಜ್ ಮುನಿರಾಜು ನಾಮಫಲಕ ಅನಾವರಣ ಮಾಡುವ ಮೂಲಕ ಶುಭ ಹಾರೈಸಿದರು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕೆರೆ ಹೂಳೆತ್ತುವ ಕಾರ್ಯಕ್ರಮ ವಿಶೇಷ ಕಾರ್ಯಕ್ರಮ ಆಗಿದ್ದು ರಾಮೇಶ್ವರ ಕೆರೆಯ ಕಾಮಗಾರಿಯು ಉತ್ತಮ ರೀತಿಯಲ್ಲಿ ನೆಡೆದಿದೆ ಎಂದರು.
ನಮ್ಮ ತಾಲ್ಲೂಕು ಮಳೆಯಾಶ್ರಿತ ಪ್ರದೇಶವಾಗಿದ್ದು ನಮ್ಮಲ್ಲಿ ನದಿ ಮೂಲಗಳು ಇಲ್ಲದ ಕಾರಣ ಸಿಹಿ ನೀರಿಗೆ ಅಭಾವವಿದ್ದು ,ಕೇವಲ ಬೊರ್ವೆಲ್ ಗಳ ಮೇಲೆ ಅವಲಂಬಿತಾರಾಗಿ ನೀರನ್ನು ಬಳಸಿ ಕೃಷಿ ಮಾಡುತ್ತಿರುವ ನಮ್ಮ ತಾಲ್ಲೂಕಿನಲ್ಲಿ ಬೇಸಿಗೆ ಸಂದರ್ಭಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗುತ್ತದೆ , ನೀರಿಗೆ ಅಭಾವವಾಗುತ್ತಿದೆ ಈ ರೀತಿಯ ಸಮಸ್ಯೆಗೆ ಕೆರೆ ಹೂಳೆತ್ತುವ ಕಾಮಗಾರಿ ಅತ್ಯಂತ ಸಹಕರಿಯಾಗಿದೆ ಎಂದರು.
ತಾಲೂಕಿನಲ್ಲಿ ರಾಗಿ ಬೆಳೆ ಹೆಚ್ಚಾಗಿ ಬೆಳೆಯುತ್ತಿದ್ದು ನೀರಿಗೆ ಸಮಸ್ಯೆ ಆಗುವ ಮೊದಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೂಲಕ ಹೆಚ್ಚಿನ ಕೆರೆ ಹೂಳೆತ್ತುವ ಕಾರ್ಯಕ್ರಮ ಹಮ್ಮಿಕೊಂಡು ಮತ್ತಷ್ಟು ಕೆರೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ತಿಳಿಸಿದರು.
ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಮಾತನಾಡಿ ತಾಲೂಕಿನಲ್ಲಿ 10 ಕೆರೆಗಳನ್ನು ಹೂಳೆತ್ತಲಾಗಿದ್ದು ವಾರ್ಷಿಕ 1ರಿಂದ 2 ಕೆರೆ ಹೂಳೆತ್ತುವ ಕಾರ್ಯಕ್ರಮ ಮಾಡಲಾಗುವುದು.ರಾಮೇಶ್ವರ ಕೆರೆಗೆ ಯಾವುದೇ ಗಲೀಜು ನೀರು ಬರದಂತೆ ತಡೆಯಬೇಕು,ಕಸ ಇತ್ಯಾದಿ ಗಳನ್ನು ಕೆರೆಗೆ ಹಾಕುವುದನ್ನು ನಿಷೇಧಿಸಬೇಕೆಂದು ಗ್ರಾಮಪಂಚಾಯತಿ ಸಿಬ್ಬಂದಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಸುಧಾ ಬಾಸ್ಕರ್,ಕೆರೆ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸತೀಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವನಂದ್,ಪಂಚಾಯತ್ ಸಧಸ್ಯರಾದ ಮುನಿಲಕ್ಷಮ್ಮ,ಡೈರಿ ಅಧ್ಯಕ್ಷರಾದ ಅಶ್ವತ್ ನಾರಾಯಣ, ತಾಲೂಕಿನ ಕೃಷಿ ಮೇಲ್ವಿಚಾರಕರಾದ ಲೋಹಿತ್,ವಲಯ ಮೇಲ್ವಿಚಾರಕರಾದ ಅನ್ನಪೂರ್ಣ, ನೋಡೆಲ್ ರೇಣುಕಾ ಪ್ರಸಾದ್,ಗ್ರಾಮದ ಹಿರಿಯರಾದ ಕೃಷ್ಣಪ್ಪ, ಶಿವಣ್ಣ , ಮುನಿ ಲಕ್ಷ್ಮಮ್ಮ, ಗಂಗರಾಜು, ಪ್ರಕಾಶ್ ಸೇವಾಪ್ರತಿನಿಧಿಗಳಾದ ಸಾಕಮ್ಮ,ಅನುಸೂಯ, ನಾಗರತ್ನ ಹಾಗೂ ಸಂಘದ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.