
ದೊಡ್ಡಬಳ್ಳಾಪುರ: ನಗರದ ತಲಕ್ ವೆಂಕಟರಮಣಪ್ಪ ಗರಡಿ ಮನೆಯ ಹಿರಿಯ ಪೈಲ್ವಾನ್ ಕೃಷ್ಣಮೂರ್ತಿ ಉರುಫ್ ಪೈಲ್ವಾನ್ ಮರಿಯಪ್ಪ ನವರು ದೈವಾದೀನರಾಗಿದ್ದಾರೆ.
ನಗರದ ಮಾರುತಿನಗರದಲ್ಲಿ ವಾಸವಾಗಿದ್ದ ಇವರು ಇಂದು ವಯೋಸಹಜ ಸಾವನ್ನಪ್ಪಿದ್ದಾರೆ. ಮೃತರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.
ತಲಾಕ್ ದೊಡ್ಡವೆಂಕಟರಮನಪ್ಪ ನವರ ಗರಡಿಮನೆಯ ಹಿರಿಯ ಪೈಲ್ವಾನ್ ಆಗಿದ್ದ ಇವರು ತಮ್ಮ ಇಳಿವಯಸ್ಸಿನಲ್ಲೂ ಯುವ ಪೀಳಿಗೆಗೆ ಕುಸ್ತಿ ಕಲಿಸುತ್ತಿದ್ದರು , ಇವರು ಕುಸ್ತಿಯಲ್ಲಿ ಡಾಬು ಗಿರ್ರ ಎಂಬ ಪಟ್ಟಿನಲ್ಲಿ ವಿಶೇಷತೆಯನ್ನು ಹೊಂದಿದ್ದು,ಸರಕಾರ ಗೌರವಧನವನ್ನು ಸಹ ಪಡೆಯುತ್ತಿದ್ದ ಅವರು ತಲಕ್ ವೆಂಕಟರಮಣಪ್ಪ ಗರಡಿ ಮತ್ತು ವ್ಯಾಯಾಮ ಶಾಲಾ ಟ್ರಸ್ಟ್ ನ ಗೌರವ ಅಧ್ಯಕ್ಷರು ಆಗಿ ಸೇವೆ ಸಲ್ಲಿಸುತ್ತಿದ್ದರು ,ತಾಲ್ಲೂಕಿನ ಕೋಟೆ ಗರಡಿ ಮನೆ ಸೇರಿದಂತೆ ಹಲವೆಡೆ ಪಂದ್ಯಗಳನ್ನು ಗೆದ್ದು ಹೆಸರುವಾಸಿಯಾಗಿದ್ದರು, ನಮ್ಮೆಲ್ಲರಿಗೂ ಸದಾ ಮಾರ್ಗದರ್ಶಕರಾಗಿ ದೇಸಿ ಕಲೆ ಕುಸ್ತಿಯ ಉಳಿವಿಗಾಗಿ ಸದಾ ಶ್ರಮಿಸುತ್ತಿದ್ದರು ಎಂದು ರಾಜಘಟ್ಟ ಗಣೇಶ್ ಸಂತಾಪ ವ್ಯಕ್ತಪಡಿಸಿದ್ದಾರೆ .
ಮೃತ ಪೈಲ್ವಾನ್ ಮರಿಯಪ್ಪನವರಸಾವಿನ ಸುದ್ದಿ ತಿಳಿದ ಅವರ ಗರಡಿ ಮನೆಯ ಆಡಳಿತ ಮಂಡಳಿ ಮತ್ತು ಶಿಷ್ಯ ಬಳಗ ಮತ್ತು ಸಾರ್ವಜನಿಕರು ಕಂಬನಿ ಮಿಡಿದ್ದಿದ್ದು ಇಂದು ಸಂಜೆ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.