
ದೊಡ್ಡಬಳ್ಳಾಪುರ : ನಮ್ಮ ಸುತ್ತಮುತ್ತಲೂ ಅನ್ಯಾಯಕ್ಕೆ ಒಳಗಾಗಿ ನೋವಿನಲ್ಲಿ ಜೀವನ ಸಾಗಿಸುತ್ತಿರುವ ಏಷ್ಟೋ ಕುಟುಂಬಗಳಿದ್ದು ಅಂತಹ ಕುಟುಂಬಗಳ ಸಹಾಯಕ್ಕೆಂದೆ ನಮ್ಮ ಕರ್ನಾಟಕ ಯುವ ರಕ್ಷಣಾ ವೇದಿಕೆ ಸ್ಥಾಪಿಸಲಾಗಿದೆ ಕನ್ನಡತನದ ಉಳಿವಿಗಾಗಿ ನ್ಯಾಯಪರ ಹೋರಾಟಕ್ಕಾಗಿ ನಮ್ಮ ನೆಡೆ ಎಂದು ಕರುನಾಡು ಯುವ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಹುಸ್ಕೂರು ಆನಂದ್ ತಿಳಿಸಿದರು
ಅಯೋಧ್ಯೆ ರಾಮ ಪ್ರಾಣ ಪ್ರತಿಷ್ಠಪನಾ ಕಾರ್ಯಕ್ರಮದ ಅಂಗವಾಗಿ ಕರುನಾಡು ಯುವ ರಕ್ಷಣಾ ವೇದಿಕೆಯ ವತಿಯಿಂದ ರಾಮೋತ್ಸವ ಹಾಗೂ ಸಂಘದ ಪದಾಧಿಕಾರಿಗಳಿಗೆ ಗುರುತಿನ ಚೀಟಿ (ಐಡಿ ಕಾರ್ಡ್ ) ವಿತರಣಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ಟೇಪ್ ಕತ್ತರಿಸಿ ದೀಪ ಬೆಳಗುವ ಮೂಲಕ ಹುಸ್ಕೂರು ಆನಂದ್ ಉದ್ಘಾಟಿಸಿದರು
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯುವಕರಲ್ಲಿ ನವ ಚೈತನ್ಯ ತುಂಬುವ ಶಕ್ತಿ ಸಂಘಟನೆಗೆ ಇದೆ .ಸಮಾಜಕ್ಕೆ ಒಳಿತನ್ನು ಮಾಡಬಯಸುವ ಪ್ರತಿಯೊಬ್ಬರಿಗೂ ಈ ನಮ್ಮ ಸಂಘಟನೆಯಲ್ಲಿ ಮುಕ್ತ ಅವಕಾಶ ನೀಡಲಾಗಿದೆ .ಕನ್ನಡ ಪರ ದ್ವನಿಯಾಗಿ ನಮ್ಮ ಸಂಘಟನೆ ಸದಾ ಶ್ರಮಿಸಲಿದೆ . ಅನ್ಯಾಯ ಅಕ್ರಮಗಳ ವಿರುದ್ಧ ನಮ್ಮ ಹೋರಾಟ ನೊಂದವರ ನೆರವಿಗೆ ನಾವು ಸದಾ ನಿಲ್ಲುತ್ತೇವೆ ಎಂದರು ಹಾಗೂ ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ಮೂರ್ತಿಗೆ ಪ್ರಾಣಪ್ರತಿಷ್ಠಪನೆ ನಡೆಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಗುರುತಿನ ಚೀಟಿಯನ್ನು ವಿತರಣೆ ಮಾಡುತ್ತಿರುವುದು ಸಂತಸ ತಂದಿದೆ .ರಾಮರ ಆಶೀರ್ವಾದದಿಂದ ಸಂಘಟನೆಗೆ ಒಳಿತಾಗಲಿ ಎಂದು ಹಾರೈಸಿದರು
ತಾಲ್ಲೂಕು ಘಟಕದ ಅಧ್ಯಕ್ಷ ಚೇತನ್ ಮಾತನಾಡಿ ಕನ್ನಡ ಮನಸ್ಸುಗಳ ಒಗ್ಗೂಡಿವಿಕೆಯಿಂದ ಈ ಸಂಘಟನೆ ರಚನೆಯಾಗಿದ್ದು ಇಂದಿನ ಶುಭ ಘಳಿಗೆ ನಮ್ಮ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಹುಸ್ಕೂರು ಆನಂದ್ ರವರ ಅಮೃತಹಸ್ತದಿಂದ ಸಂಘದ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಐ ಡಿ ಕಾರ್ಡ್ ಗಳ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಗ್ರಾಮೀಣಾ ಪ್ರತಿಭೆ ರಾಕೇಶ್ ರಾಮೇಗೌಡ ಮಾತನಾಡಿ ಸ್ಥಳೀಯ ಯುವಕರ ಪ್ರಬಲ ಸಂಘಟನೆ ಇದಾಗಿದ್ದು .ಯಾವುದೇ ಅಪೇಕ್ಷೆ ಇಲ್ಲದೆ ಶ್ರಮಿಸುವ ತಂಡ ರಚನೆಯಾಗಿದ್ದು ಅಯೋಧ್ಯ ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠಾಪನೆಯಾಗಲಿರುವ ಈ ಸುಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಿಗೆ ಐ ಡಿ ಕಾರ್ಡ್ ಗಳ ವಿತರಣೆ ಶುಭಾಸುಚಕವಾಗಿದೆ ಎಲ್ಲರಿಗೂ ಶುಭವಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಶಂಕರ್,ತಾಲ್ಲೂಕು ಘಟಕದ ಅಧ್ಯಕ್ಷ ಚೇತನ್ , ಉಪಾಧ್ಯಕ್ಷ ಅರುಣ್ ಮತ್ತಿತರು ಉಪಸ್ಥಿತರಿದ್ದರು