ದೊಡ್ಡಬಳ್ಳಾಪುರ : ತಾಲ್ಲೂಕಿನಲ್ಲಿ ರಸ್ತೆ ಅಪಘಾತಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಗೌರಿಬಿದನೂರು ಮಾರ್ಗದಲ್ಲಿರುವ ಎ ಪಿ ಎಂ ಸಿ ಮಾರುಕಟ್ಟೆ ಮುಂಭಾಗದ ರಸ್ತೆಯನ್ನು ದಿನಕ್ಕೊಂದು ಅವಘಡ ಸಂಭವಿಸುತ್ತಿದ್ದು. ಸಂಬಂಧಪಟ್ಟ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ವೇಗ ನಿಯಂತ್ರಣಕ್ಕೆ ಸ್ಪೀಡ್ ಬ್ರೇಕರ್ಸ್ ಗಳನ್ನು ಹಾಕಬೇಕು ಇಲ್ಲವೇ ಸ್ಥಳೀಯ ಸಾರ್ವಜನಿಕರಿಂದ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯ ಮುಖಂಡ ಅಧಿಲ್ ಪಾಷಾ ತಿಳಿಸಿದರು.
ಇಂದು ಬೆಳ್ಳಿಗೆ ಕೆಎಸ್ ಆರ್ ಟಿಸಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಪಾಲನಜೋಗಿಹಳ್ಳಿ ನಿವಾಸಿ ಪುರುಷೋತ್ತಮ (30)ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಈ ಕುರಿತು ರಸ್ತೆಯಲ್ಲಿ ವಾಹನಗಳ ಮಿತಿ ನಿಯಂತ್ರಿಸುವ ಸ್ಪೀಡ್ ಬ್ರೇಕರ್ಸ್ ಗಳನ್ನು ಅಳವಡಿಸುವಂತೆ ಕೋರಿ ಸ್ಥಳೀಯ ಮುಖಂಡರಾದ ಅಧಿಲ್ ಪಾಷಾ ಅವರ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಅವರಿಗೆ ಮನವಿ ಸಲ್ಲಿಸಿದರು

ಈ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಾಲನಜೋಗಿನಹಳ್ಳಿ ಮುಖ್ಯ ರಸ್ತೆಯಲ್ಲಿ ಎರಡು ಮುಖ್ಯ ಯು ಟರ್ನ್ ಗಳಿದ್ದು, ಈ ಯು ಟರ್ನ್ ಗಳ ಬಳಿ ಯಾವುದೇ ಸ್ಪೀಡ್ ಬ್ರೇಕರ್ಸ್, ಜೀಬ್ರಾ ಕ್ರಾಸಿಂಗ್ ಗಳಿಲ್ಲ ಈ ಕಾರಣಕ್ಕೆ ಬರುವ ವಾಹನಗಳು ಅತಿ ವೇಗವಾಗಿ ಬರುತ್ತಿದ್ದು ಸಾರ್ವಜನಿಕರು ವೃದ್ಧರು ಕೃಷಿಕರು ವಿದ್ಯಾರ್ಥಿಗಳು ರಸ್ತೆ ದಾಟಲು ಹರಸಾಹಸ ಪಡಬೇಕಾಗಿದೆ. ಅಲ್ಲದೆ ಇದೇ ಮಾರ್ಗವಾಗಿ ಎಪಿಎಂಸಿ ಮಾರುಕಟ್ಟೆ ಇರುವ ಕಾರಣ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುವುದು ಸರ್ವೇ ಸಾಮಾನ್ಯ ಅತಿಯಾದ ವೇಗದಲ್ಲಿ ಬರುವ ವಾಹನಗಳಿಂದ ಪ್ರತಿನಿತ್ಯ ಸಾವು ನೋವುಗಳು ಸಂಭವಿಸುತ್ತಿದ್ದು ಸಂಬಂಧಪಟ್ಟ ಇಲಾಖೆಯವರು ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಬೆಳಿಗ್ಗೆ ಮತ್ತು ಸಂಜೆ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸುವ ಮೂಲಕ ರಕ್ಷಣೆ ನೀಡಬೇಕೆಂದು ಮನವಿ ಮಾಡಿದರು.
ರಸ್ತೆಯಲ್ಲಿ ಕೂಡಲೇ ವೇಗ ನಿಯಂತ್ರಣಕ್ಕೆ ಹುಬ್ಬುಗಳು,ಹಾಗೂ ಜೀಬ್ರಾ ಕ್ರಾಸಿಂಗ್ , ಹಾಗೂ ಸೂಚನಾ ಫಲಕಗಳನ್ನು ಅಳವಡಿಸಬೇಕು ಇಲ್ಲವಾದಲ್ಲಿ ಸ್ಥಳೀಯ ಸಾರ್ವಜನಿಕರು ರಸ್ತೆ ತಡೆ ಮಾಡುವ ಮೂಲಕ ಟೋಲ್ ವ್ಯವಸ್ಥಾಪಕರಿಗೆ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
