ಬಾಬು ಜಗಜೀವನ ರಾಮ್ ಜಯಂತಿ ಪ್ರಯುಕ್ತ ತೂಬಗೆರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Spread the love

ದೊಡ್ಡಬಳ್ಳಾಪುರ : ಬಾಬು ಜಗಜೀವನ ರಾಮ್ ಜಯಂತಿ ಪ್ರಯುಕ್ತ ಏಪ್ರಿಲ್ 5 ರ ಭಾನುವಾರದಂದು ತೂಬಗೆರೆ ಸರ್ಕಾರಿ ಮಾಧ್ಯಮಿಕ ಪಾಠಶಾಲೆಯಲ್ಲಿ ಬಾಬು ಜಗಜೀವನ ರಾಮ್ ರಾಷ್ಟ್ರೀಯ ಶಿಕ್ಷಣ ಟ್ರಸ್ಟ್ ಮತ್ತು ಸಾಯಿ ಮಿಲನ ಮೆಡಿಕಲ್ ಸೆಂಟರ್ ಇವರ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ ತಿಳಿಸಿದರು.

 

ಕಾರ್ಯಕ್ರಮ ಕುರಿತು ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ನಂತರ ಮಾತನಾಡಿದ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ಆಹಾರ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾದ ಡಾ.ಕೆ ಎಚ್ ಮುನಿಯಪ್ಪ ನೆರವೇರಿಸಲಿದ್ದು. ಕಾರ್ಯಕ್ರಮದಲ್ಲಿ ಸಚಿವರ ಪುತ್ರಿ ಡಾ. ಜ್ಞಾನೇಶ್ವರಿ ಮತ್ತು ಡಾ. ಜಯಕುಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ರಂಗಪ್ಪ, ಆರ್ ವಿ ಮಹೇಶ್, ಮುಖಂಡರಾದ ನಾಗೇನಹಳ್ಳಿ ಎಂ ಮಂಜುನಾಥ್ , ಎಸ್ ಮಂಜುನಾಥ್ (ಮೇಲೆಕೋಟೆ ಕ್ರಾಸ್), ಗೊಲ್ಲಹಳ್ಳಿ ಶ್ರೀನಿವಾಸ್, ಹಾಡೋನಹಳ್ಳಿ ಸವಿತಾ, ತೂಬಗೆರೆ ಯೂಥ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹ ಮೂರ್ತಿ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

Leave a Reply

Your email address will not be published. Required fields are marked *