ದೊಡ್ಡಬಳ್ಳಾಪುರ : ಮೇ 8ರಂದು ತಾಲೂಕಿನ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಜೆಡಿಎಸ್ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ನಿಖಿಲ್ ಕುಮಾರಸ್ವಾಮಿ ಆಗಮಿಸಲಿದ್ದು ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಮಾನ್ಯತೆ ನೀಡುತ್ತಿಲ್ಲ ಎಂಬ ಆರೋಪದ ಹಿನ್ನೆಲೆ ಈ ಹಿಂದೆ ಜೆಡಿಎಸ್ ರಾಜ್ಯ ಪ್ರಮುಖರಾದ ಹುಸ್ಕೂರು ಆನಂದ್ , ಮುಖಂಡರಾದ ಶ್ರೀನಿವಾಸ್ ಗೌಡ, ಪುಟ್ಟರಾಜು ರೆಡ್ಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆ ಇಂದು ತಾಲೂಕಿನ ಪ್ರಮುಖ ಜೆಡಿಎಸ್ ಮುಖಂಡರಾದ ಹಾಡೋನ ಹಳ್ಳಿ ನಾಗರಾಜ್ ರವರು ಹುಸ್ಕೂರು ಆನಂದ್, ಶ್ರೀನಿವಾಸ್ ಗೌಡ ಹಾಗೂ ಇತರೆ ಪ್ರಮುಖರನ್ನು ಭೇಟಿ ಮಾಡಿ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದಾರೆ.
ಈ ಭೇಟಿ ಕುರಿತು ಜೆಡಿಎಸ್ ಮುಖಂಡರಾದ ಶ್ರೀನಿವಾಸ್ ಗೌಡ ಮಾತನಾಡಿ ಇದೊಂದು ಸೌಹಾರ್ದತೆ ಭೇಟಿ, ಭಿನ್ನಾಭಿಪ್ರಾಯಗಳ ನಡುವೆ ಇಂತಹ ಸಭೆಗಳು ಅನಿವಾರ್ಯ, ನಾಗರಾಜ್ ರವರು ತಮ್ಮ ತಂದೆಯವರಾದ ಎಚ್.ಅಪ್ಪಯ್ಯಣ್ಣ ಅವರಂತೆ ಉತ್ತಮ ನಿರ್ಣಯದೊಂದಿಗೆ ನಮ್ಮನ್ನು ಭೇಟಿ ಮಾಡಿದ್ದಾರೆ . ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರನ್ನು ಬಲಪಡಿಸುವ ಕುರಿತು ಚರ್ಚಿಸಿದ್ದೇವೆ. ಮುಂದೆ ಎಲ್ಲವೂ ಸರಿ ಹೋಗುವ ಭರವಸೆ ಇದೆ ಎಂದರು.
Ad
ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ
ಮೇ 08 ರಂದು ದೊಡ್ಡಬಳ್ಳಾಪುರ ತಾಲೂಕಿನ ಭಗತ್ ಸಿಂಗ್ ಕ್ರೀಡಾಂಗಣದ ನಡೆಯುವ ಕಾರ್ಯಕ್ರಮವು ರಾಜ್ಯಮಟ್ಟದ ಕಾರ್ಯಕ್ರಮವಾಗಿದ್ದು ನಮ್ಮ ಸ್ಥಳೀಯ ಮಟ್ಟದ ಭಿನ್ನಾಭಿಪ್ರಾಯಗಳು ಕಾರ್ಯಕ್ರಮಕ್ಕೆ ತೊಂದರೆಯಾಗಬಾರದು ಹಾಗಾಗಿ ಜೆಡಿಎಸ್ ಪಕ್ಷದ ಎಲ್ಲಾ ನಿಷ್ಠಾವಂತ ಕಾರ್ಯಕರ್ತರು ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಹುಸ್ಕೂರ್ ಆನಂದ್, ಶ್ರೀನಿವಾಸ್ ಗೌಡ, ಪುಟ್ಟರಾಜ ಗೌಡ ಸೇರಿದಂತೆ ಹಲವು ಪ್ರಮುಖರು ಮನವಿ ಮಾಡಿದರು.

ಪಕ್ಷದ ಬೇರೆ ನಾಯಕರಿಗೆ ಬರೆದ ಆಲೋಚನೆ ಹಾಡೋನಹಳ್ಳಿ ನಾಗರಾಜ್ ರವರಿಗೆ ಬಂದಿರುವುದು ಸಂತೋಷದ ವಿಷಯ ಮೇ ಇತರೆ ಕಾರ್ಯಕ್ರಮಕ್ಕೆ ನಮ್ಮನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ. ಅವರಿಗೆ ನಾವು ಸ್ಪಂದಿಸುತ್ತೇವೆ ವೇದಿಕೆ ಕಾರ್ಯಕ್ರಮದಲ್ಲಿ ನಾವು ಪ್ರಮುಖ ಮುಖಂಡರು ಭಾಗವಹಿಸುವುದಿಲ್ಲ ಪಕ್ಷದ ಹಿತಕ್ಕಾಗಿ, ರಾಜ್ಯ ನಾಯಕರ ನಿಖಿಲ್ ಕುಮಾರಸ್ವಾಮಿ ದೊಡ್ಡಬಳ್ಳಾಪುರಕ್ಕೆ ಬರುತ್ತಿರುವ ಹಿನ್ನೆಲೆ ಅವರಿಗೆ ಗೌರವ ಸೂಚಿಸುವ ಸಲುವಾಗಿ ಪಕ್ಷದ ಎಲ್ಲಾ ನಿಷ್ಠಾವಂತ ಕಾರ್ಯಕರ್ತರು ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಈ ಮೂಲಕ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
