ದೊಡ್ಡಬಳ್ಳಾಪುರ; ತಾಲ್ಲೂಕು ಮತ್ತು ನಗರದ ಹಲವೆಡೆ ಒಂದು ವಾರಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ದೊಡ್ಡಬಳ್ಳಾಪುರ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ತಿಳಿಸಿದೆ.
ಅನಿಗಧಿತವಾಗಿ ವಿದ್ಯುತ್ ವ್ಯತ್ಯಯವನ್ನು ತಡೆಯಲು ಹಾಗೂ ಉನ್ನತ ಗುಣಮಟ್ಟದ ನಿರಂತರ ವಿದ್ಯುತ್ ಸರಬರಾಜು ಮಾಡಲು ಈ ಕೆಳಕಂಡ ವಿದ್ಯುತ್ ಮಾರ್ಗಗಳ ನಿರ್ವಹಣೆಯನ್ನು ಯೋಜಿಸಲಾಗಿರುವ ಕಾರಣ ಒಂದು ವಾರಗಳ ಕಾಲ ತಾಲ್ಲೂಕಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದೆ.
Ad
ದೊಡ್ಡಬಳ್ಳಾಪುರ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಮೇ ತಿಂಗಳ, ಮೊದಲನೇ ವಾರ (ಶನಿವಾರ ದಿಂದ ಶುಕ್ರವಾರದವರೆಗೆ) ಕೆಳಗೆ ಸೂಚಿಸಿರುವ ವೇಳಾಪಟ್ಟಿಯಂತೆ ಆಯಾ ದಿನದಂದು ಆಯ್ದ ಸ್ಥಳಗಳಲ್ಲಿ ವಿದ್ಯುತ್ ಸರಬರಾಜು ನಿಲುಗಡೆಗೊಳಿಸಿ, ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಆದ್ದರಿಂದ ಗ್ರಾಹಕರು ಬೆವಿಕಂ.ಗೆ ಸಹಕರಿಸಲು ಹಾಗೂ ತಮ್ಮ ಕಾರ್ಯಗಳನ್ನು ಈ ವೇಳಾಪಟ್ಟಿಗೆ ಅನುಗುಣವಾಗಿ ಯೋಚಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ.
ಯಾವ ದಿನ ಯಾವ ಊರಲ್ಲಿ ಕರೆಂಟ್ ಕಟ್ ಇಲ್ಲಿದೆ ಮಾಹಿತಿ
ಮೇ- 2 ಶನಿವಾರ : ದೊಡ್ಡಬಳ್ಳಾಪುರ ಟೌನ್ ಮತ್ತು ಕೈಗಾರಿಕಾ ಪ್ರದೇಶದಲ್ಲಿ ಬೆಳಗ್ಗೆ 9ರಿಂದ ಮದ್ಯಾಹ್ನ 2 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಮೇ-3 ಭಾನುವಾರ : ಅಪೇರಲ್ ಪಾರ್ಕ್ ಕೈಗಾರಿಕಾ ಪ್ರದೇಶದಲ್ಲಿ ಬೆಳಗ್ಗೆ 9ರಿಂದ ಮದ್ಯಾಹ್ನ 2 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಮೇ-4 ಸೋಮವಾರ : ದೊಡ್ಡಬಳ್ಳಾಪುರ ಟೌನ್, ಗಂಟಗಾನಹಳ್ಳಿ, ತೂಬಗೆರೆ ತಪಸೀಹಳ್ಳಿಯಲ್ಲಿ ಬೆಳಗ್ಗೆ 9ರಿಂದ ಮದ್ಯಾಹ್ನ 2 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಮೇ-5 ಮಂಗಳವಾರ : ಕುರುಬರಹಳ್ಳಿ, ರಾಜೀವ್ ಗಾಂಧಿ ಬಡಾವಣೆಯ ಸುತ್ತ ಬೆಳಗ್ಗೆ 9ರಿಂದ ಮದ್ಯಾಹ್ನ 2 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಮೇ-6 ಬುಧವಾರ : ದೊಡ್ಡಬಳ್ಳಾಪುರ ಟೌನ್, ರಘುನಾಥಪುರದಲ್ಲಿ ಬೆಳಗ್ಗೆ 9ರಿಂದ ಮದ್ಯಾಹ್ನ 2 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಮೇ-7 ಗುರುವಾರ : ಮುತ್ತೂರು ಮುತ್ಸಂದ್ರ ರೈಲ್ವೇ ಸ್ಟೇಷನ್ ಗಳಲ್ಲಿ ಬೆಳಗ್ಗೆ 9ರಿಂದ ಮದ್ಯಾಹ್ನ 2 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಮೇ-9 ಶುಕ್ರವಾರ : ಕೈಗಾರಿಕಾ ಪ್ರದೇಶದ ಸುತ್ತ ಬೆಳಗ್ಗೆ 9ರಿಂದ ಮದ್ಯಾಹ್ನ 2 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
Ad
