ದೊಡ್ಡಬಳ್ಳಾಪುರ : ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಗಮನಕ್ಕೆತರದೆ ಏಕಾಏಕಿ ಪಕ್ಷದ ಜಿಲ್ಲೆ ಹಾಗೂ ತಾಲೂಕು ಜವಾಬ್ದಾರಿಯನ್ನು ಪ್ರಭಾವಿಗಳಿಗೆ ನೀಡಿರುವುದು ಸರಿಯಲ್ಲ ಪಕ್ಷವನ್ನು ಸಂಘಟಿಸಲು ಹಾಗೂ ಅಧಿಕಾರಕ್ಕೆ ತರಲು ನಿಷ್ಠಾವಂತ ಕಾರ್ಯಕರ್ತರಿಂದ ಮಾತ್ರ ಸಾಧ್ಯ ಎಂಬುದನ್ನು ವರಿಷ್ಟರು ಗಮನಿಸಬೇಕು ಎಂದು ಜೆಡಿಎಸ್ ಮುಖಂಡ ಶ್ರೀನಿವಾಸ್ ಗೌಡ ತಿಳಿಸಿದರು
Ad
ಇಂದು ಜೆಡಿಎಸ್ ರಾಜ್ಯ ಪ್ರಮುಖರಾದ ಹುಸ್ಕೂರ್ ಆನಂದ್ ರವರನ್ನು ಸೌಹಾರ್ದಯುತ ಭೇಟಿ ಮಾಡಿ ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸಿ ನಂತರ ಮಾತನಾಡಿದ ಅವರು ಜಿಲ್ಲೆ ಹಾಗೂ ತಾಲ್ಲೂಕು ಜೆಡಿಎಸ್ ಪಕ್ಷದಲ್ಲಿನ ಕೆಲ ಬದಲಾವಣೆ ಕಾರ್ಯಕರ್ತರಲ್ಲಿ ಗೊಂದಲ ಮಾಡಿಸಿದೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಜವಾಬ್ದಾರಿ ಕೊಟ್ಟಿರುವುದು ತಾಲೂಕಿನ ನಿಷ್ಠಾವಂತ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ಮೇ 8 ರ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ….
ತಾಲೂಕಿನ ಕಾರ್ಯಕರ್ತರ ಗಮನಕ್ಕೆ ತರದೆ ತಮಗಿಷ್ಟ ಬಂದವರನ್ನು ಕರೆದುಕೊಂಡು ಕಾರ್ಯಕ್ರಮ ಮಾಡುತ್ತಿರುವ ನೂತನ ತಾಲೂಕು ಅಧ್ಯಕ್ಷ ಹರೀಶ್ ಗೌಡ ನೇತೃತ್ವದ ಮೇ 8ರ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗುವುದಿಲ್ಲ . ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಅಡ್ಡಿಪಡಿಸುವುದಿಲ್ಲ ಆದರೆ ಕಾರ್ಯಕ್ರಮದಲ್ಲಿ ತಾಲ್ಲೂಕಿನ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗುವುದಿಲ್ಲ ಎಂದು ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಜೆಡಿಎಸ್ ಪಕ್ಷದ ರಾಜ್ಯ ವರಿಷ್ಠರು ಕೇವಲ ಕೆಲ ಪ್ರಮುಖರ ಮಾತುಗಳನ್ನು ಕೇಳಿ ಪ್ರಸ್ತುತ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ನೇಮಕ ಮಾಡಿರಬಹುದು… ಆದರೆ ಪಕ್ಷವನ್ನು ಮುನ್ನಡೆಸುವುದು ಸ್ಥಳೀಯ ನಿಷ್ಠಾವಂತ ಕಾರ್ಯಕರ್ತರೇ ಹೊರತು ಹಣ ಆಮಿಷಗಳಲ್ಲ.. ನಮ್ಮ ನಾಯಕರದ ಎಚ್ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಗಮನಕ್ಕೆ ವಾಸ್ತವ ಪರಿಸ್ಥಿತಿಯನ್ನು ತರುವ ಪ್ರಯತ್ನ ಮಾಡುತ್ತಿದ್ದು ಮುಂದೆ ಎಲ್ಲವೂ ಸರಿಯಾಗಲಿದೆ ಎಂದರು.

ಈ ವೇಳೆ ಪುಟ್ಟರಾಜು ರೆಡ್ಡಿ, ಪುನೀತ್ ಅಪ್ಪು ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.
