
ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ರೋಜಿಪುರದ ಸ್ಮಶಾನದಲ್ಲಿ ಬಾಡೂಟ ಸವಿಯಲಾಯಿತು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ 67ನೇ ಪರಿ ನಿಬ್ಬಾಣ ದಿನವನ್ನು ಮೌಡ್ಯ ವಿರೋಧಿ ದಿನವನ್ನಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆ ವತಿಯಿಂದ ಆಚರಿಸಲಾಯಿತು
ಈ ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕರು, ಸಾಹಿತಿಗಳು, ದಲಿತ ಮುಖಂಡರು,ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಗುಳ್ಯ ಹನುಮಣ್ಣ ಮಾತನಾಡಿ ನಿರೀಕ್ಷೆಗೂ ಮೀರಿದ ಜನ ಸ್ಪಂದನೆ ದೊರೆತ್ತಿದ್ದು ಕಾರ್ಯಕ್ರಮ ಯಶಸ್ವಿಯಾಗಿದೆ ಸಮಾಜದಲ್ಲಿ ಮೌಡ್ಯ ಹೋಗುವವರೆಗೂ ಸಮಾನತೆಯ ಮಹತ್ವ ಅರಿವಾಗುವುದಿಲ್ಲ .ಸಮಾಜದ ಮೌಡ್ಯ ಆಚರಣೆ ಬದಲಾಗಬೇಕು ಎಂಬುದೇ ನಮ್ಮ ಉದ್ದೇಶ ಮುಖ್ಯವಾಗಿ ವಿದ್ಯಾವಂತರು ಬದಲಾಗಬೇಕು ಸಂವಿಧಾನದ ಮಹತ್ವ ಬಾಬಾಸಾಹೇಬರ ಆಶಯ ಎಲ್ಲರಿಗೂ ಮನವರಿಕೆಯಾಗಬೇಕು ಎಂದು ತಿಳಿಸಿದರು
ಬಿ ಎಸ್ಸಿ ವಿಧ್ಯಾರ್ಥಿ ಹೇಮಂತ್ ಮಾತನಾಡಿ ಸ್ಮಶಾನದಲ್ಲಿ ಆಯೋಜಿಸಿರುವ ಇಂದಿನ ಕಾರ್ಯಕ್ರಮ ಯಶಸ್ವಿಯಾಗಿದೆ ವಿದ್ಯಾವಂತರಾದ ನಾವು ಸಮಾಜದ ಜನಸಾಮಾನ್ಯರಲ್ಲಿ ಮೂಡನಂಬಿಕೆ ದೂರಮಾಡಬೇಕಿದೆ ಆದರೆ ವಿದ್ಯಾವಂತರೇ ಮೂಢನಂಬಿಕೆಗಳಿಗೆ ಮೌಢ್ಯತೆಯ ದಾಸರಾಗಿರುವುದು ವಿಷಾದನೀಯ ಸಂಗತಿ ಅದರಲ್ಲೂ ವಿಜ್ಞಾನ ಅರಿತು ಅಭ್ಯಾಸ ಮಾಡಿರುವ ವಿದ್ಯಾವಂತರೇ ಮೌಢ್ಯತೆಯ ಮರೆಹೋಗುತ್ತಿರುವುದು ಸರಿಯಲ್ಲ .ಸಾಮನ್ಯವಾಗಿ ಸ್ಮಶಾನಕ್ಕೆ ಬರಲು ಹೆದರುವ ಜನರ ನಡುವೆ ಇಂದು ಸ್ಮಶಾನದಲ್ಲಿ ಊಟ ಸವಿದಿದ್ದೇವೆ ಮೌಡ್ಯ ವಿರೋಧಿ ದಿನವನ್ನು ಆಚರಿಸಿದ್ದೇವೆ ಸಮಾಜದಲ್ಲಿ ಬದಲಾವಣೆ ನಮ್ಮ ಆಶಯ ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಮ್ಮ ಆದರ್ಶ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ತಾಲ್ಲೂಕಿನ ಮುಖಂಡರಾದ ಚಂದ್ರ ತೇಜಸ್ವಿ , ಪ್ರಕಾಶ್ ಮಂಟೆಲ , ಪತ್ರಕರ್ತರಾದ ವೆಂಕಟೇಶ್ , ರಾಜು ಸಣ್ಣಕ್ಕಿ , ಗುರು , ದಲಿತ ಮುಖಂಡ ಹನುಮಯ್ಯ , ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು , ತಾಲ್ಲೂಕಿನ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು