ದೊಡ್ಡಬಳ್ಳಾಪುರ : ಟೊಮೆಟೊ ದರ ಮತ್ತೆ ಏರಿಯಾಗುತ್ತಿದೆ, ಇದರ ಜೊತೆಗೆ ಮತ್ತೆ ಟೊಮೊಟೊ ಕಳವು ಸಹ ಪ್ರಾರಂಭವಾಗಿದೆ, ತಾಲ್ಲೂಕಿನ ಬೈರಸಂದ್ರ ಪಾಳ್ಯದ ರೈತ ದಿವಾಕರ್ ರವರ ತೋಟದಲ್ಲಿ ಘಟನೆ ಸಂಭವಿಸಿದೆ. ರೈತ ದಿವಾಕರ್ ಖಾಸಗಿ ಕಂಪನಿಯಿಂದ ಅರ್ಡರ್ ಪಡೆದಿದ್ದರು ಇಂದು ಬೆಳಗ್ಗೆ ಹಣ್ಣುಗಳನ್ನು ಕಿತ್ತು ಮಾರುಕಟ್ಟೆಗೆ ಹಾಕಲು ಸಿದ್ಧತೆ ನಡೆಸಿದ್ದರು ಆದರೆ ರಾತ್ರೋ ರಾತ್ರಿ ತೋಟಕ್ಕೆ ನುಗ್ಗಿದ ಕಳ್ಳರು ಟೊಮೊಟೊ ಗಿಡಗಳಿಂದ 2 ಟನ್ ಟೊಮೆಟೊ ಕಿತ್ತು ಹಣ್ಣಿನ್ನೊಂದಿಗೆ ಪರಾರಿಯಾಗಿದ್ದಾರೆ.
ಟೊಮೆಟೊ ಬೆಳೆಯ ತೋಟಕ್ಕೆ ನುಗ್ಗಿದ ಕಳ್ಳರ ತಂಡ ಗಿಡಗಳಿಂದ ಸುಮಾರು 80 ಸಾವಿರ ಮೌಲ್ಯದ ಹಣ್ಣುಗಳನ್ನು ಕದ್ದು ಪರಾರಿಯಾಗಿದ್ದಾರೆ, ಅಂದಹಾಗೇ ದಿವಾಕರ್ ಸುಮಾರು 1 ಎಕರೆಯಲ್ಲಿ ಟೊಮೊಟೊ ಬೆಳೆದಿದ್ದು, ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 40 ರೂ.ಬೆಲೆ ಇದೆ. ಕಳ್ಳರ ಕೈಚಳಕಕ್ಕೆ ಬಡ ರೈತ ಕಂಗಾಲಾಗಿದ್ದಾನೆ .

ಬೆಳೆ ಕಳೆದುಕೊಂಡ ರೈತ ದಿವಾಕರ್ ಮಾತನಾಡಿ ನಿನ್ನೆ ರಾತ್ರಿ 2 ಗಂಟೆಯವರೆಗೂ ತೋಟದಲ್ಲಿಯೇ ಇದ್ದು ಗಿಡಗಳಿಗೆ ನೀರು ಹಾಯಿಸಿದ್ದೇನೆ ತೋಟದ ಮನೆಯಲ್ಲಿದ್ದ ಕೆಲಸಗಾರರ ಕುಟುಂಬ ಹೊಸ ವರ್ಷದ ಸಿದ್ಧತೆ ನಡೆಸುತ್ತಿದ್ದರು, ಮಧ್ಯರಾತ್ರಿ 3 ಗಂಟೆಯ ಸಮಯದಲ್ಲಿ ತೋಟಕ್ಕೆ ನುಗ್ಗಿದ ಕಳ್ಳರು ಈ ಕೃತ್ಯ ಎಸಗಿದ್ದಾರೆ ನಮ್ಮ ಜೀವನೋಪಾಯಕ್ಕೆ ಮೂಲವಾಗಿದ್ದ ಬೆಳೆಗೆ ಈ ಪರಿಸ್ಥಿತಿ ಎದುರಾಗಿದೆ ಪೊಲೀಸರು ಈ ಕುರಿತು ತನಿಖೆ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು

ಕೆಲಸಾಗರರಾದ ಮಂಜಮ್ಮ ಮಾತನಾಡಿ ತಡರಾತ್ರಿಯವರೆಗೂ ತೋಟದಲ್ಲಿ ಕೆಲಸ ಮಾಡಿದ್ದೇವೆ ನಂತರ ಬೆಳಗಿನಜಾವ ಯಾರೋ ಕಳ್ಳರು ಈ ಕೃತ್ಯವೆಸಗಿದ್ದಾರೆ ಎಂದು ತಿಳಿಸಿದರು
ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ತನಿಖೆ ನಂತರವಷ್ಟೇ ಸತ್ಯ ಹೊರಬೀಳಲಿದೆ .
