
ದೇವನಹಳ್ಳಿ : ಇಂದು ನಾವು ಸಾಂಕೇತಿಕವಾಗಿ ಬಾಯಿಗೆ ಬಟ್ಟೆ ಕಟ್ಟಿಕೊಳ್ಳುವ ಮೂಲಕ ಮೌನ ಪ್ರತಿಭಟನೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ನಡೆಸಿದ್ದೇವೆ ಕಾರಣ ನಮ್ಮ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಇಲ್ಲದಿರುವುದು. ಆದಷ್ಟು ಬೇಗ ನಮ್ಮ ತಾಲ್ಲೂಕಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಘಟಕವನ್ನು ನೀಡುವ ಮೂಲಕ ರೈತರಿಗೆ ಜಿಲ್ಲಾಧಿಕಾರಿಗಳು ನೆರವಾಗಬೇಕೆಂದು ರೈತ ಮುಖಂಡ ವಸಂತ್ ಕುಮಾರ್ ಒತ್ತಾಯಿಸಿದರು .
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕ ತುಮಕೂರು ಹಾಗೂ ಮಜಾರಹೊಸಹಳ್ಳಿ ಗ್ರಾಮಗಳ ಕೆರೆಗಳು ಕಾರ್ಖಾನೆಗಳ ತ್ಯಾಜ್ಯ ನೀರಿನಿಂದ ಸಂಪೂರ್ಣ ಕಲುಷಿತಗೊಂಡಿದ್ದು ಈ ಹಿನ್ನಲೆ ಬೆಂಗಳೂರು ಗ್ರಾಮಂತರ ಜಿಲ್ಲೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಇಂದು ತಾಲ್ಲೂಕಿನ ರೈತ ಮುಖಂಡರು ಮೌನ ಪ್ರತಿಭಟನೆ ನಡೆಸಿದರು ಸಹಾಯಕ ಜಿಲ್ಲಾಧಿಕಾರಿ ಅಂಬರೀಶ್ ರವರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು ಮಾಲಿನ್ಯ ನಿಯಂತ್ರಣ ಮಂಡಳಿಯು ದೊಡ್ಡಬಳ್ಳಾಪುರದಿಂದ 40 ಕಿ.ಮೀ ಹೆಚ್ಚು ದೂರವಿದೆ ಯಾವುದೇ ರೀತಿಯ ದೂರು ನೀಡಿದರು ದೂರು ನೀಡಿದ ದಿನ ಅವರು ಬರುವುದಿಲ್ಲ ಒಂದು ಅಥವಾ ಎರಡು ದಿನಗಳ ನಂತರ ಬರುತ್ತಾರೆ ಅನೇಕ ಕಾರ್ಖಾನೆಗಳ ವಿರುದ್ಧ ಈ ರೀತಿಯ ಕಷ್ಟ ನಾವು ಅನುಭವಿಸಿದ್ದೇವೆ ಈ ಹಿಂದೆ ಆರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಮುಖಂಡರ ಜೊತೆ ಮತ್ತು ಮಜುರವನಳ್ಳಿ ಮತ್ತು ದೊಡ್ಡ ತುಮಕೂರು ಗ್ರಾಮ ಪಂಚಾಯತಿಯ ಸದಸ್ಯರ ಜೊತೆ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸಬೇಕೆಂದು ಸೂಚನೆ ನೀಡಿದರು ಆದರೂ ಇಲ್ಲಿವರೆಗೂ ಯಾವುದೇ ರೀತಿಯ ಮಾಲಿನ್ಯ ನಿಯಂತ್ರಣ ಮಂಡಳಿಯು ದೊಡ್ಡಬಳ್ಳಾಪುರಕ್ಕೆ ಬರುವುದರ ಸೂಚನೆಗಳು ಕಂಡು ಬರುತ್ತಿಲ್ಲ ಆದ್ದರಿಂದ ಇಂದು ಬಾಯಿಗೆ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ಮಾಡುತ್ತಿದ್ದೇವೆ ಮುಂದಿನ ಹದಿನೈದು ದಿನಗಳ ಒಳಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯು ದೊಡ್ಡಬಳ್ಳಾಪುರಕ್ಕೆ ವರ್ಗಾವಣೆ ಆಗದಿದ್ದರೆ ಗಾಂಧಿ ತತ್ವದ ಆಧಾರದ ಮೇಲೆ ನಂಬಿಕೆ ಇರುವ ನಾವು ಆಮರಣಾಂತಿಕ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ.
ರೈತರಾದ ನಾಗರಾಜ್ ಬಾಬು ಮಾತನಾಡಿ ಆರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆಯು ಅರ್ಕಾವತಿ ನದಿಯ ಉಳಿವಿಗಾಗಿ ಕರೆಗಳ ಉಳಿವಿಗಾಗಿ ಜೀವ ಜಲದ ರಕ್ಷಣೆಗಾಗಿ ಉತ್ತಮ ಆರೋಗ್ಯಕ್ಕಾಗಿ ಹತ್ತು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ ದಿನೇ ದಿನೇ ಪರಿಸರ ಹಾಳಾಗುತ್ತಿದೆ ವಿನಹ ಪರಿಸರ ರಕ್ಷಣೆ ಮಾಡುವ ಕೆಲಸ ಆಗುತ್ತಿಲ್ಲ ನಮ್ಮ ತಾಲೂಕಿನಲ್ಲಿ ಕಾರ್ಖಾನೆಗಳ ತ್ಯಾಜ್ಯ ವಿಲೇವಾರಿಯಿಂದಾಗಿ ನಮ್ಮ ಗ್ರಾಮಗಳ ಕೆರೆಗಳು ಸಂಪೂರ್ಣ ಹಾಳಾಗಿದ್ದು , ವಿಷಪೂರಿತವಾಗಿದೆ, ಕಲುಷಿತ ನೀರನ್ನು ಸೇವಿಸಿ ಜಾನುವಾರುಗಳು ಸಾವನ್ನಪ್ಪುತ್ತಿವೆ. ಸ್ಥಳೀಯವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಇಲ್ಲದಿರುವುದು ಇದಕ್ಕೆಲ್ಲ ಕಾರಣವಾಗಿದೆ ಎಂದು ತಿಳಿಸಿದರು.
ಈ ಮೌನ ಪ್ರತಿಭಟನೆಯಲ್ಲಿ ಸಂತೋಷ್, ವಿಜಯ್ ಕುಮಾರ,ಮುನಿಕೃಷ್ಣಪ್ಪ ,ಆಂಜಿನಪ್ಪ ,ಗಿಡ್ಡೇಗೌಡ ,ಮುನಿಯಪ್ಪ ,ಗೋಪಾಲ್ ಕೃಷ್ಣ ,ರಾಜಣ್ಣ ಇದ್ದರು