*ಬೆಳ್ಳಿ ಪರದೆಯಲ್ಲಿ ಯುವ ಮಿಂಚಿಂಗ್ : ಹೋಳಿಗೆ ಹಂಚಿ ಸಂಭ್ರಮಿಸಿದ ಅಭಿಮಾನಿಗಳು*

Spread the love

ಸಿನಿಮಾ: ದೊಡ್ಡಬಳ್ಳಾಪುರ ಮಾ.29 ( ವಿಜಯ ಮಿತ್ರ ) : ರಾಜ್ ವಂಶದ ಕುಡಿ ಯುವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಯುವ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ನಟ ಯುವರಾಜಕುಮಾರ್ ನಟನೆಯ ಮೊದಲ ಚಿತ್ರ ಇದಾಗಿದ್ದು. ಬಹಳಷ್ಟು ನಿರೀಕ್ಷೆ ಮೂಡಿಸಿದೆ. ರಾಜ್ ಕುಟುಂಬದ ಅಭಿಮಾನಿಗಳು ಚಿತ್ರವನ್ನು ಭರ್ಜರಿಯಾಗಿ ವೆಲ್ಲ್ಕಮ್ ಮಾಡಿದ್ದಾರೆ.

ದೊಡ್ಡಬಳ್ಳಾಪುರ ನಗರ ಭಾಗದ ವೈಭವ ಚಿತ್ರಮಂದಿರದಲ್ಲಿ ಅಭಿಮಾನಿಗಳು ಯುವರಾಜ್ ಕುಮಾರ್ ಕಟೌಟ್ ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಸಿನಿಮಾವನ್ನು ಭರ್ಜರಿಯಾಗಿ ಸ್ವಾಗತಿಸಿದರು. ಕಲ್ಲುದೇವನಹಳ್ಳಿ ನಾಗರಾಜ್ ಮತ್ತು ಸಂಗಡಿಗರು ಚಿತ್ರಮಂದಿರಕ್ಕೆ ಬರುವ ಸಿನಿ ಪ್ರೇಕ್ಷಕರಿಗೆ ಹೋಳಿಗೆ ಮತ್ತು ತುಪ್ಪವನ್ನು ನೀಡುವ ಮೂಲಕ ಸಂಭ್ರಮಿಸಿದರು.

 

ಈ ಕುರಿತು ಕಲ್ಲುದೇವನಹಳ್ಳಿ ನಾಗರಾಜ್ ಮಾತನಾಡಿ ಅಪ್ಪು ಅಭಿಮಾನಿಗಳು ಹಾಗೂ ರಾಜ್ ಕುಟುಂಬದ ಅಭಿಮಾನಿಗಳಿಗೆ ಇಂದು ಹಬ್ಬದ ವಾತಾವರಣ.. ಕಾರಣ ನಮ್ಮ ಯುವರಾಜಕುಮಾರ್ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅಂತೆಯೇ ಶಿವರಾಜ್ ಕುಮಾರ್ ಕೂಡ ಉತ್ತಮ ಚಿತ್ರಗಳನ್ನು ನೀಡುವ ಮೂಲಕ ಎಲ್ಲರ ಮನೆ ಗೆಲ್ಲಲಿ ಎಂದು ಹಾರೈಸಿದರು. ಹಾಗೂ ರಾಜ್ ಕುಟುಂಬದ ಅಭಿಮಾನಿಗಳಿಗೆ ಯುಗಾದಿ ಹಬ್ಬವು ಇಂದೇ ಪ್ರಾರಂಭವಾಗಿದ್ದು ಸಿನಿ ಪ್ರೇಕ್ಷಕರಿಗೆ ಒಬ್ಬಟ್ಟು ನೀಡಿ ಸ್ವಾಗತಿಸುತ್ತಿದ್ದೇವೆ ಎಂದರು.

 

ಈ ಸಂದರ್ಭದಲ್ಲಿ ಕೆಂಪರಾಜು, ಚೌಡರಾಜು, ಚಂದ್ರಶೇಖರ್,ಸೀನಪ್ಪ,ನಿತಿನ್ ಕುಮಾರ್,ದೇವರಾಜ್,ವಿಕ್ಕಿ ಸೇರಿದಂತೆ ಎಲ್ಲಾ ರಾಜ್ ಕುಟುಂಬದ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *