ಸಿನಿಮಿಯಾ ಸ್ಟೈಲ್ ನಲ್ಲಿ ನೆಡೆದ ಕೊ*ಲೆ : ಹಣ ಕೊಡುವುದಾಗಿ ನಂಬಿಸಿ ಹ*ತ್ಯೆ ಮಾಡಿದ ಆರೋಪಿಗಳು ಅಂದರ್ : ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಮತ್ತು ತಂಡದ ಮಿಂಚಿನ ಕಾರ್ಯಾಚರಣೆ

Spread the love

ದೊಡ್ಡಬಳ್ಳಾಪುರ ಹೊರವಲಯದ ಇನ್ಫೋಸಿಟಿಯಲ್ಲಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಬೆಳಗಿನಂದಲೇ ನಿರಂತರವಾಗಿ ಸೋಕೋ ತಂಡದೊಂದಿಗೆ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದ್ದು , ಹತ್ಯೆಗಿಡಾದ ದೇವರಾಜು ಅವರ ಅಸ್ಥಿಪಂಜರ ತಾಲ್ಲೂಕಿನ ಮಧುರೆ ಕೆರೆಯಲ್ಲಿ ಪತ್ತೆಯಾಗಿದೆ.

ಅ.17ರಂದು ಬಾಶೆಟ್ಟಿ ಹಳ್ಳಿ ನಿವಾಸಿ ದೇವರಾಜು(65ವರ್ಷ) ಕಾಣುತ್ತಿಲ್ಲವೆಂದು ಕುಟುಂಬಸ್ಥರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿ, ಕೊನೆಗೆ ಆರೋಪಿಗಳಾದ ರಾಜಕುಮಾರ್ ಮತ್ತು ಅನಿಲ್ ರನ್ನು ವಶಕ್ಕೆ ಪಡೆದು ಕೊಲೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

 

ಏನಿದು ಘಟನೆ….????

 

ಅ.17ರಂದು ಹಣ ಕೊಡುವುದಾಗಿ ಹೇಳಿ ರಾಜಕುಮಾರ್ ದೇವರಾಜ್ ರವರನ್ನು ಕಾರಿನಲ್ಲಿ ಕರೆದೋಯ್ದು ಗೌರಿಬಿದನೂರು ಸಮೀಪ ಹಗ್ಗದಿಂದ ನೇಣು ಬಿಗಿದು ಸಾಯಿಸಿದ್ದಾರೆ , ನಂತರ ಈಗಾಗಲೇ ನಾರಾಯಣ ಇನ್ಫೋಸಿಟಿಯಲ್ಲಿ ಸಿದ್ಧಪಡಿಸಿದ್ದ ಗುಂಡಿಯಲ್ಲಿ ಶವ ಹಾಕಿ ಮುಚ್ಚಲಾಗಿದೆ. ಇಷ್ಟಾದರೂ ಸಮಾಧಾನವಾಗದ ಕೊಲೆಪಾತಕಿ ರಾಜಕುಮಾರ್ ದೇವರಾಜ್ ಶವವನ್ನು ಗುಂಡಿ ಇಂದ ಹೊರ ತೆಗೆದು ಗ್ಯಾರೇಜ್ ನಿಂದ ತಂದಿದ್ದ ಮೆಟಲ್ ಡ್ರಮ್‌ನಲ್ಲಿ ಹಾಕಿ ಪೆಟ್ರೋಲ್ ಸುರಿದು ಸುಟ್ಟು ವಿಕೃತಿ ಮೆರೆದಿದ್ದಾನೆ, ಸುಟ್ಟ ನಂತರ ಬೂದಿ ಮತ್ತು ಅಸ್ಥಿಪಂಜರವನ್ನು ತಾಲೂಕಿನ ಮಧುರೆ ಕೆರೆಯಲ್ಲಿ ಬಿಸಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ .

 

 

ಇಂದು ಬೆಳಗಿನಿಂದಲೇ ಶವವನ್ನು ಹೂತಿಟ್ಟಿದ್ಧ ಸ್ಥಳದಲ್ಲಿ ಪೊಲೀಸ್ ಇಲಾಖೆ ಕಾರ್ಯಚರಣೆ ಆರಂಭಿಸಿದ್ದು , ಸ್ಥಳದಲ್ಲಿ ದುರತ ತಲೆಕೂದಲು,ಚಪ್ಪಲಿಯನ್ನು ಸ್ವೀಕರಿಸಿಕೊಂಡು ಮುಂದಿನ ಕಾರ್ಯಾಚರಣೆಗೆ ಮಧುರೆ ಕೆರೆಯ ಕಡೆಗೆ ಪ್ರಯಾಣ ಬೆಳೆಸಿದರು . ತಾಲೂಕಿನ ಮಧುರೆ ಕೆರೆಯಲ್ಲಿ ಸತತ ಕಾರ್ಯಾಚರಣೆ ನಂತರ ಅಸ್ಥಿಪಂಜರ ದೊರೆತಿದ್ದು ಹೆಚ್ಚಿನ ವಿಚಾರಣೆಗಾಗಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

 

 

ಈ ಕುರಿತು ಮೃತ ದೇವರಾಜ್ ಸಹೋದರನ ಮಗ ಮೋಹನ್ ಕುಮಾರ್ ಮಾತನಾಡಿ ಚೀಟಿ ಹಣ ಕೊಡುವುದಾಗಿ ಹೇಳಿ ಕರೆಸಿಕೊಂಡ ರಾಜಕುಮಾರ್ ನಮ್ಮ ಚಿಕ್ಕಪ್ಪ ದೇವರಾಜ್ ಅವರನ್ನು ಕೊ* ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ, ವ್ಯವಹಾರಿಕವಾಗಿ ತುಂಬಾ ಆತ್ಮೀಯರಾಗಿದ್ದ ರಾಜಕುಮಾರ ಹಣದ ವ್ಯವಹಾರವನ್ನು ನಿರಂತರವಾಗಿ ಮಾಡುತ್ತಿದ್ದರು , ಹಣ ನೀಡುವುದಾಗಿ ಕರೆದು ಈ ಕೃತ್ಯ ವೆಸಗಿದ್ದಾರೆ, ಕಂಪ್ಲೇಂಟ್ ಕೊಟ್ಟ ದಿನದಿಂದಲೇ ನಮ್ಮನ್ನು ದಾರಿ ತಪ್ಪಿಸುವ ಪ್ರಯತ್ನಗಳು ಹಲವು ಬಾರಿ ಮಾಡಿದ್ದರು ಆದರೆ ಅವರ ಮೇಲಿದ್ದ ವಿಶ್ವಾಸದಿಂದ ನಮಗೆ ಅವರೇ ಹಂತಕರು ಎಂದು ಅರಿಯಲು ಸಾಧ್ಯವಾಗಲಿಲ್ಲ , ಈಗ ಆರೋಪಿಗಳು ಪೊಲೀಸ್ ಬಳಿಯೇ ಸತ್ಯವನ್ನು ಬಿಚ್ಚಿಟ್ಟಿದ್ದಾರೆ, ನಮಗಿನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಇನ್ನು ಕಾರ್ಯಾಚರಣೆ ನಡೆಯುತ್ತಿದೆ, ಕುಟುಂಬಕ್ಕೆ ಆಧಾರವಾಗಿದ್ದ ನಮ್ಮ ಚಿಕ್ಕಪ್ಪನ ಕಳೆದುಕೊಂಡಿದ್ದೇವೆ , ಪೊಲೀಸ್ ಇಲಾಖೆಯು ಆರೋಪಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ನಮಗೆ ನ್ಯಾಯ ಒದಗಿಸಬೇಕಿದೆ ಎಂದರು.

 

 

ಮೃತ ವ್ಯಕ್ತಿ ದೇವರಾಜ್ ರವರ ಧರ್ಮಪತ್ನಿ, ಕಲಾವತಿ ಮಾತನಾಡಿ ನಾನು ಬರುವುದಿಲ್ಲ ಎಂದು ಅವರು ಎಷ್ಟು ಬಾರಿ ಹೇಳಿದರೂ, ಬರಲು ಇಷ್ಟವಿಲ್ಲ ಎಂದರೂ ಬಿಡದೆ ಪದೇ ಪದೇ ಕರೆ ಮಾಡಿ ನೀವು ಬಂದರೆ ಚೀಟಿ ಹಣ ನೀಡುತ್ತೇನೆ ಎಂದು ರಾಜಕುಮಾರ್ ಬಲವಂತವಾಗಿ ದೇವರಾಜ್ ರನ್ನು ತನ್ನ ಬಳಿಗೆ ಕರೆದುಕೊಂಡಿದ್ದು ಈ ಕೃತ್ಯ ವ್ಯಸಗಿದ್ದಾನೆ, ಕುಟುಂಬಸ್ಥರು ದೇವರಾಜು ಇಂದಲ್ಲ ನಾಳೆ ಬರುತ್ತಾರೆ ಎಂಬ ಆಶಾಭಾವನೆಯಿಂದ ಕಾದು ಕುಳಿತಿದ್ದೆವು , ಆದರೆ ಇಂದು ಪೊಲೀಸರ ಬಳಿ ಆರೋಪಿಗಳೇ ತಾವು ದೇವರಾಜ್ ಅವರನ್ನು ಹತ್ಯೆ ಮಾಡಿರುವಂತೆ ಒಪ್ಪಿಕೊಂಡಿದ್ದಾರೆ, ನಮ್ಮ ಮನೆಗೆ ಬಂದು ಊಟ ಮಾಡುತ್ತಿದ್ದ ರಾಜಕುಮಾರ್ ತುಂಬಾ ಆತ್ಮೀಯತೆಯಿಂದ ವರ್ತಿಸುತ್ತಿದ್ದ, ವ್ಯವಹಾರಿಕವಾಗಿ ಹಣ ಪಡೆದು ಹಿಂದಿರುಗಿಸುತ್ತೇನೆ ಎಂದು ಹೇಳುತ್ತಿದ್ದ, ಸುಮಾರು 70ರಿಂದ 80 ಲಕ್ಷ ಹಣವನ್ನು ಸಾಲ ಪಡೆದಿದ್ದ ಎಂದರು.

ನಾವು ದೇವರನ್ನು ಎಲ್ಲೋ ಗೋಡನ್ನಲ್ಲಿ ಕೂಡು ಹಾಕಿದ್ದಾರೆ, ಇಂದಲ್ಲ ನಾಳೆ ಅವರು ಜೀವಂತವಾಗಿ ಬರುತ್ತಾರೆ ಎಂದು ಕಾಯುತ್ತಿದ್ದೆವು, ಆದರೆ ಇಂದು ಆರೋಪಿಗಳ ಒಪ್ಪಿಕೊಂಡಿರುವಂತೆ ಅವರನ್ನು ಕೊಲೆ ಮಾಡಿ ಹೂತು ಹಾಕಿ, ನಂತರ ಶವವನ್ನು ಸುಟ್ಟು ಹಾಕಿ, ಅವಶೇಷಗಳನ್ನು ಕೆರೆಗೆ ಬಿಸಾಡಿದ್ದಾರೆ ಎಂದರೇ ನಂಬಲು ಸಾಧ್ಯವಾಗುತ್ತಿಲ್ಲ, ಇಂತಹ ವಿಶ್ವಾಸ ಘಾತಕರಿಗೆ ಕಾನೂನು ಕಠಿಣ ಶಿಕ್ಷಣ ವಿಧಿಸಬೇಕಿದೆ . ಇಂಥವರಿಂದ ಮುಂದೆ ಯಾರ ಕುಟುಂಬಕ್ಕೂ ತೊಂದರೆ ಆಗಬಾರದು ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *