
ದೊಡ್ಡಬಳ್ಳಾಪುರ : ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ, ದೇವಾಲಯದಲ್ಲಿ ಈ ದಿವಸ ಹುಂಡಿ ಎಣಿಕೆ ಮಾಡಲಾಯಿತು.
ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಹುಂಡಿಯ ಎಣಿಕೆ ಮಾಡಲಾಗಿದ್ದು ರೂ.64,51,009 ಹಣ ಸಂಗ್ರಹವಾಗಿದೆ.ಹಾಗು ಇದರೊಂದಿಗೆ 44100 ರೂ.ಬೆಲೆ ಬಾಳುವ 7 ಗ್ರಾಂ ಚಿನ್ನ, 77500 ರೂ. ಬೆಲೆ ಬಾಳುವ 1.550 ತೂಕದ ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಕಾಣಿಕೆ ರೂಪದಲ್ಲಿ ಹರಕೆ ತೀರಿಸಿಕೊಂಡಿದ್ದಾರೆ
ದೇವಾಲಯದ ಹುಂಡಿಯನ್ನು ನಿಯಮಾನುಸಾರ ತೆಗೆದು ದೇವರ ದರ್ಶನಕ್ಕೆ ಬಂದ ಭಕ್ತರಿಂದ ಎಣಿಕೆ ಮಾಡಲಾಗಿತ್ತು
ಈ ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಆಧಿಕಾರಿ ಎಂ. ನಾರಾಯಣಸ್ವಾಮಿ, ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಜೆ.ಎನ್.ರಂಗಪ್ಪ, ಆರ್.ವಿ.ಮಹೇಶ್ ಕೆ.ಎಸ್.ರವಿ, ಲಕ್ಷ್ಮಣ ನಾಯಕ್, ಹೇಮಲತಾ ರಮೇಶ್, ಪ್ರಧಾನ ಅರ್ಚಕ ಆರ್. ಸುಬ್ರಹ್ಮಣ್ಯ ಹಾಗು ಸಮಾಜ ಸೇವಕ ಮುತ್ತಣ್ಣ ದೇವಾಲಯದ ಸಿಬ್ಬಂದಿ, ಪೊಲೀಸ್ ಇಲಾಖೆ, ಕೆನರಾ ಬ್ಯಾಂಕ್ ಸಿಬ್ಬಂದಿ ಹಾಜರಿದ್ದರು.