ದೊಡ್ಡಬಳ್ಳಾಪುರ : ಸಿಜೆಐ ಬಿ.ಆರ್.ಗವಾಯಿರವರ ಮೇಲೆ ಶೂ ಎಸೆತ ಯತ್ನ ಪ್ರಕರಣವನ್ನ ತೀರ್ವವಾಗಿ ಖಂಡಿಸಿರುವ ಅಂಬೇಡ್ಕರ್ ಸೇವಾ ಸಮಿತಿಯ ತಾಲೂಕು ಅಧ್ಯಕ್ಷರಾದ ಅರುಣ್ ಕುಮಾರ್ ಮನುವಾದಿಗಳ ಅಟ್ಟಹಾಸಕ್ಕೆ ಕೊನೆ ಯಾವಾಗ ಎಂದು ಪ್ರಶ್ನಿಸಿದ್ದಾರೆ.
ಆಕ್ಟೋಬರ್ 6 ರಂದು ಭಾರತ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿರವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆಯುವ ಯತ್ನ ನಡೆಸಿದರು,ಈ ಕೃತ್ಯ ಖಂಡಿಸಿ ಭಾರತದಾದ್ಯಂತ ಅಕ್ರೋಶ ವ್ಯಕ್ತವಾಗಿದೆ, ದೇಶದೆಲ್ಲಡೆ ಈ ಕೃತ್ಯದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದೆ.
ಸಿಜೆಐರವರ ಮೇಲಿನ ಶೂ ಎಸೆತ ಯತ್ನವನ್ನು ಖಂಡಿಸಿದ ದಲಿತ ಯುವ ಮುಖಂಡರಾದ ಅರುಣ್ ಕುಮಾರ್, ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿಯವರ ಮೇಲೆ ಶೂ ಎಸೆಯಲು ಯತ್ನಿಸಿರುವ ಘಟನೆ ನಿಜಕ್ಕೂ ಖಂಡನೀಯ.
ಈ ನೆಲದ ಕಾನೂನು ಹಾಗೂ ಸಂವಿಧಾನಿಕ ಸ್ಥಾನಗಳನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿ ದೇಶದ ಸರ್ವೋಚ್ಛ ನ್ಯಾಯಪೀಠಕ್ಕಾದ ಇಂತಹ ಅಪಮಾನ , ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆದ ಘಟನೆಯಾಗಿದ್ದು , ನ್ಯಾಯಾಂಗಕ್ಕೆ ಹಾಗು ಸಂವಿಧಾನಕ್ಕೆ ಮಾಡಿದ ಅವಮಾನ ಇದನ್ನು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆ ಖಂಡಿಸುತ್ತೇವೆ ಎಂದಿದ್ದಾರೆ.
