ಫಾಕ್ಸ್ಕಾನ್ ಕಂಪನಿಯ ಸಿ ಇ ಆರ್ (CER) ಯೋಜನೆಯಡಿಯಲ್ಲಿ ಉದ್ಯಾನವನ ನಿರ್ಮಾಣ : ಪಾರ್ಕ್ ಉದ್ಘಾಟಿಸಿ ಶುಭ ಹಾರೈಸಿದ ಗಣ್ಯರು

Spread the love

ದೊಡ್ಡಬಳ್ಳಾಪುರ : ನಗರದ 7ನೇ ವಾರ್ಡ್ ಕೆಂಪೇಗೌಡ ನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪರಿಸರ ಉದ್ಯಾನವನ ಲೋಕಾರ್ಪಣೆ ಮಾಡಲಾಯಿತು.

 

ಫಾಕ್ಸ್ಕಾನ್ ಕಂಪನಿಯ ಸಿ ಇ ಆರ್ (CER) ಯೋಜನೆಯಡಿ ಸುಮಾರು 5ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಉದ್ಯಾನವನವನ್ನು ತಾಲ್ಲೂಕಿನ ಶಾಸಕ ಧೀರಜ್ ಮುನಿರಾಜು, ನಗರಸಭೆ ಪೌರಯುಕ್ತ ಕಾರ್ತಿಕೇಶ್ವರ್, ನಗರಸಭೆ ಉಪಾಧ್ಯಕ್ಷ ಮಲ್ಲೇಶ್ ಹಾಗೂ ಫಾಕ್ಸ್ಕಾನ್ ಕಂಪನಿಯ ಅಧಿಕಾರಿಗಳು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಈ ವೇಳೆ ಸ್ಥಳೀಯ ಸದಸ್ಯ ಹಾಗೂ ನಗರಸಭೆ ಉಪಾಧ್ಯಕ್ಷ ಮಲ್ಲೇಶ್ ಮಾತನಾಡಿ ಸಾರ್ವಜನಿಕರಿಗೆ ಸದಾ ಉಪಯೋಗವಾಗುವ ಪರಿಸರ ಸ್ನೇಹಿ ಅತ್ಯಾದುನಿಕ ಉದ್ಯಾನವನವನ್ನು ಫಾಕ್ಸ್ಕಾನ್ ಕಂಪನಿಯ ಸಿ ಇ ಆರ್ (CER) ಯೋಜನೆಯಡಿಯಲ್ಲಿ ನಿರ್ಮಿಸಿದ್ದು ಇಂದು ಲೋಕಾರ್ಪಣೆಗೊಂಡಿದೆ.ನಮ್ಮ ತಾಲ್ಲೂಕಿನಲ್ಲಿ ಸಾಕಷ್ಟು ಕಾರ್ಖಾನೆಗಳಿದ್ದು ತಮ್ಮ ಸಿ ಎಸ್ ಆರ್ ಹಾಗೂ ಸಿ ಇ ಆರ್ ಅನುದಾನಗಳನ್ನು ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಈ ವೇಳೆ ಸ್ಥಳೀಯ ಮುಖಂಡರು, ಫಾಕ್ಸ್ಕಾನ್ ಕಂಪನಿಯ ಆಡಳಿತ ವರ್ಗ, ಸಾರ್ವಜನಿಕರು ಹಾಜರಿದ್ದರು.

 

 

 

Leave a Reply

Your email address will not be published. Required fields are marked *