ರಾಜ್ಯ ಸರ್ಕಾರ ಘೋಷಿಸಿರುವ ಒಳ ಮೀಸಲಾತಿ ಅನುಷ್ಠಾನ ಸ್ವಾಗತರ್ಹ – ಮಾದರ ಚೆನ್ನಯ್ಯ ಮಹಾಸಭಾ.

Spread the love

ದೊಡ್ಡಬಳ್ಳಾಪುರ : ಸರ್ಕಾರ ಗ್ರೂಪ್ ಎ ಗೆ 5.25, ಗ್ರೂಪ್ ಬಿ ಗೆ 5.25 ಮತ್ತು ಗ್ರೂಪ್ ಸಿ ಗೆ 4.5 ಪ್ರಮಾಣದಲ್ಲಿ ಒಳಮೀಸಲಾತಿ ಅನುಷ್ಠಾನ ಮಾಡಿರುವುದನ್ನು ಮಾದಿಗ ಸಮುದಾಯ ಸ್ವಾಗತಿಸುತ್ತದೆ ಎಂದು ಮಾದರ ಮಹಾಸಭಾದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಬ್ಬರಾಜು ತಿಳಿಸಿದರು.

ಈ ಕುರಿತು ಮಾದರ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ನಗರದ ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಅವರು ಮಾತನಾಡಿದ 40 ವರ್ಷಗಳ ಹೋರಾಟಕ್ಕೆ ಇಂದು ನ್ಯಾಯ ಸಿಕ್ಕಿದೆ,” ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಈ ತೀರ್ಮಾನ ಮಹತ್ವದ್ದಾಗಿದೆ ಬಸವಣ್ಣವರ ಸಮಾನತೆ ತತ್ವವನ್ನು ಸರ್ಕಾರ ಕಾರ್ಯರೂಪಕ್ಕೆ ತಂದಿದೆ. ಈ ಹೋರಾಟಕ್ಕೆ ಸಹಕರಿಸಿದ ರಾಜ್ಯ ಪ್ರಮುಖರು ಸಚಿವರು ಆದ ಕೆಎಚ್ ಮುನಿಯಪ್ಪ ರವರಿಗೆ , ಹಾಗೂ ಒಳಬಿಸಿಲಾತಿ ಜಾರಿಗೊಳಿಸಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

Ad

“ಎಲ್ಲರೂ ಸಮಾನವಾಗಿ ಬದುಕಬೇಕು ಎಂಬ ಮುಖ್ಯಮಂತ್ರಿಗಳ ಬದ್ಧತೆ ಇಂದು ಕಾರ್ಯರೂಪಕ್ಕೆ ಬಂದಿದೆ,” ಒಳ ಮೀಸಲಾತಿ ಜಾರಿ ಪ್ರಕ್ರಿಯೆಯಲ್ಲಿ ಕಾನೂನು ಸಚಿವರು, ಗೃಹ ಸಚಿವರು, ಹಾಗೂ ಮಹಾದೇವಪ್ಪ ಸೇರಿದಂತೆ ಹಲವು ಸಚಿವರು ಪ್ರಮುಖ ಪಾತ್ರ ವಹಿಸಿದ್ದಾರೆ ಅಲ್ಲದೆ, ಚಿತ್ರದುರ್ಗದಲ್ಲಿ ನಡೆದ ಐತಿಹಾಸಿಕ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ನಾಯಕರು ತೆಗೆದುಕೊಂಡ ನಿರ್ಧಾರದಿಂದ ಇದು ಸಾಧ್ಯವಾಗಿದೆ ಎಂದರು.

ರಾಜ್ಯದ 101 ಹಿಂದುಳಿದ ಜಾತಿಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಮಾದಿಗ ಸಮುದಾಯ ಸ್ವಾಗತಿಸುತ್ತದೆ ಎಂದರು.

 

 

ಮಾದರ ಮಹಾಸಭಾ ತಾಲೂಕು ಅಧ್ಯಕ್ಷ ತಳಗವಾರ ನಾಗರಾಜ್ ಮಾತನಾಡಿ ಒಳ ಮೀಸಲಾತಿ ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನು ಮಾದರ ಮಹಾಸಭಾ ಸ್ವಾಗತಿಸುತ್ತದೆ ಎಂದರು.

ಈ ವೇಳೆ ಮುಖಂಡರಾದ ಬಿ ಕೆ ಶಿವಪ್ಪ, ನಾಗರಾಜು ಬಚ್ಚಹಳ್ಳಿ, ರಾಮಕೃಷ್ಣಪ್ಪ, ವೆಂಕಟೇಶ್, ಹನುಮಣ್ಣ, ಟಿ ಡಿ ಮುನಿಯಪ್ಪ, ಗಂಗರಾಜು ನರಸಿಂಹನಹಳ್ಳಿ, ಕೆ ವಿ ಮುನಿಯಪ್ಪ, ರಾಮ, ನರಸಪ್ಪ, ಮೈಲಾರಪ್ಪ, ತಳವಾರ ನಾಗರಾಜು, ಕೆ ನಾರಾಯಣಪ್ಪ, ಹರ್ಷ, ಕಾಂತರಾಜ, ಮುನಿಯಪ್ಪ, ಗಂಗರಾಜು ಮತ್ತಿತ್ತರರಿದ್ದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.