ದೊಡ್ಡಬಳ್ಳಾಪುರ : ಭಗೀರಥರ ಕಥೆಯು ಕಠಿಣ ಪರಿಶ್ರಮ ಮತ್ತು ಸಂಕಲ್ಪದ ಮೂಲಕ ಅಸಾಧ್ಯವಾದುದನ್ನು ಸಾಧಿಸಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ನೀಡುತ್ತದೆ ಎಂದು ತಾಲ್ಲೂಕುದಂಡಧಿಕಾರಿಗಳಾದ ಮಲ್ಲಪ್ಪ ಎರಗೋಡ ತಿಳಿಸಿದರು
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತದ ವತಿಯಿಂದ ತಾಲ್ಲೂಕು ಕಚೇರಿ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಭಗೀರಥ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಇಂದು ಪವಿತ್ರ ಗಂಗಾನದಿಯನ್ನು ಭೂಮಿಗೆ ತಂದ ಪೌರಾಣಿಕ ರಾಜ ಭಗೀರಥನ ಸ್ಮರಣಾರ್ಥ ಆಚರಿಸಲಾಗುವ ದಿನವಾಗಿದೆ. ಇದು ಅಪಾರ ದೃಢನಿಶ್ಚಯ, ಪರಿಶ್ರಮ ಮತ್ತು ತ್ಯಾಗವನ್ನು ಸಂಕೇತಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಿವಿದ ಕ್ಷೇತ್ರ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಭಗೀರಥ ಉಪ್ಪಾರ ತಾಲ್ಲೂಕು ಸಂಘದ ಗೌರವ ಅಧ್ಯಕ್ಷ ಹಾಗೂ ಸಮುದಾಯದ ಹಿರಿಯ ಮುಖಂಡರಾದ ಕೃಷ್ಣಪ್ಪ, ಕಂಚಿಗನಾಳ ಚಿಕ್ಕ ಆಂಜಿನಪ್ಪ , ಆಲಹಳ್ಳಿ ಮುನಿರಾಜಪ್ಪ, ಮಾಜಿ ಸೈನಿಕ ರಮೇಶ್ ಮತ್ತು ಸರ್ಕಾರಿ ಆಸ್ಪತ್ರೆಯ ಜನಸ್ನೇಹಿ ವೈದ್ಯ ಮಂಜುನಾಥ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಚಂದ್ರಶೇಖರ್.ಡಿ.ಉಪ್ಪಾರ್ ಮಾತನಾಡಿ ಸಗರನ ಮೊಮ್ಮಗರಾದ ಭಗೀರಥರು ತನ್ನ ಪೂರ್ವಜರ ಪಾಪ ಪರಿಹಾರಕ್ಕಾಗಿ ಮತ್ತು ಅವರಿಗೆ ಮುಕ್ತಿ ನೀಡಲು ಗಂಗೆಯನ್ನು ಸ್ವರ್ಗದಿಂದ ಭೂಮಿಗೆ ತರಲು ತೀವ್ರ ತಪಸ್ಸು ಮಾಡಿದರು ತಮ್ಮ ಕಾರ್ಯದಲ್ಲಿ ಯಶಸ್ಸು ಕಂಡರು.ಯಾವುದೇ ಕಾರ್ಯ ಅಸಾಧ್ಯವಲ್ಲ ಮನಸ್ಸಿದ್ದರೆ ಎಲ್ಲವೂ ಸಾಧ್ಯ ಎಂಬುದು ತಿಳಿಸಿದ ಅವರ ಜೀವನ ಶೈಲಿಯೇ ನಮಗೆ ಸ್ಫೂರ್ತಿ ಎಂದರು.

ಈ ವೇಳೆ ಭಗೀರಥ ಉಪ್ಪಾರ ಸಮುದಾಯದ ಮುಖಂಡರಾದ ಪ್ರಕಾಶ್ ಕುಮಾರ್, ಶ್ರೀನಿವಾಸ್ ಬಾಬು,ವಿಜಯಕುಮಾರ್, ಲಕ್ಷ್ಮಿನಾರಾಯಣ, ಕೆಸಿ,ಗೋವಿಂದು, ವಕೀಲರು ಕೃಷ್ಣಮೂರ್ತಿ,ಚಂದ್ರಕುಮಾರ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.
