ದೊಡ್ಡಬಳ್ಳಾಪುರ ನಗರದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ದೊಡ್ಡಬಳ್ಳಾಪುರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಚಾರಿಟಬಲ್ ಟ್ರಸ್ಟ್, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘ ಸಂಯುಕ್ತ ಆಶ್ರಯದಲ್ಲಿ ನಡೆದ ಶಿವಸಂಚಾರ ನಾಟಕೋತ್ಸವದ ಕೊನೆಯ ದಿನ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾ ಸಂಘದ ಕಲಾವಿದರು ಪಂಡಿತಾರಾಧ್ಯ ಶಿವಾಚಾರ್ಯಸ್ವಾಮಿ ರಚಿಸಿರುವ ಮತ್ತು ವೈ.ಡಿ.ಬದಾಮಿ ನಿರ್ದೇಶನ ಮಾಡಿರುವ ಶಿವಯೋಗಿ ಸಿದ್ದರಾಮೇಶ್ವರ ನಾಟಕವನ್ನು ಪ್ರದರ್ಶನ ಮಾಡಿದರು.
Ad
12ನೇ ಶತಮಾನದ ವಚನಕಾರ, ಶಿವಯೋಗಿ, ಕರ್ಮಯೋಗಿ ಎಂದು ಪ್ರಸಿದ್ದರಾದ ಸಿದ್ದರಾಮೇಶ್ವರ ಅವರನ್ನು ಕುರಿತ ಕಥಾ ವಸ್ತುವಾಗಿದೆ. ಕರ್ಮಯೋಗಿದಲ್ಲಿ ಕಳೆದುಹೋಗಬಹುದಾದಗಿದ್ದ ಸಿದ್ದರಾಮೇಶ್ವರ ಅವರನ್ನು ಎಚ್ಚರಿಸಿದವರು ಅಲ್ಲಮಪ್ರಭುದೇವರು. ಕಲ್ಯಾಣದಲ್ಲಿ ಚನ್ನಬಸವಣ್ಣ ಅವರಿಂದ ಸಿದ್ದರಾಮೇಶ್ವರ ಅವರಿಗೆ ಇಷ್ಟಲಿಂಗ ದೀಕ್ಷೆಯನ್ನು ಪಡೆಯುವ ಮೂಲಕ ಶಿವಶರಣರಾದರು.
ಕಲ್ಯಾಣದಿಂದ ತಮ್ಮ ಕ್ಷೇತ್ರ ಸೊಲ್ಲಾಪುರಕ್ಕೆ ಬಂದ ನಂತರ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎನ್ನುವ ತತ್ವಕ್ಕೆ ಬದ್ದರಾಗಿ ಇಷ್ಟಲಿಂಗ ದೀಕ್ಷೆಯ ಮೂಲಕ ಜನರನ್ನು ಜಂಗಮತ್ವದ ಕಡೆಗೆ ಪರಿವರ್ತನೆ ಮಾಡುವ ಕಾಯಕದಲ್ಲಿ ನಿರತರಾಗುತ್ತಾರೆ. ಬಸವಾದಿ ಶರಣರಂತೆ ವಚನಗಳ ರಚನೆ ಮಾಡುತ್ತ ಶರಣ ಧರ್ಮ ಮತ್ತು ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ವದ ಕಾಣಿಕೆ ಸಲ್ಲಿಸುತ್ತಾರೆ. ಸಿದ್ದರಾಮೇಶ್ವರ ಅವರ ಬದುಕಿನ ವಿವಿಧ ಆಯಾಮಗಳನ್ನು ಕಟ್ಟಿಕೊಡುವಲ್ಲಿ ಶಿವಯೋಗಿ ಸಿದ್ದರಾಮೇಶ್ವರ ನಾಟಕ ಯಶಸ್ವಿಯಾಗಿದೆ.
ಶಿವಯೋಗಿ ಸಿದ್ದರಾಮೇಶ್ವರ ನಾಟಕವನ್ನು ರಂಗದ ಮೇಲೆ ಕಲಾವಿದರುಗಳು ಬಸವರಾಜ ತಮ್ಮಣ್ಣ ಪೂಜಾರಿ, ವಿಶ್ವಾಸರೆಡ್ಡಿ, , ಪ್ರವೀಣ ಕೊಪ್ಪಳ, ಸುನೀಲ ಕಲುಬುರಗಿ, ಉದಯಕುಮಾರ್, ದಿನೇಶ್ ಯರನಾಳೆ, ಎನ್.ವಿಶ್ವಜ್ಯೋತಿ, ಪ್ರಶಾಂತ್, ಜಿ.ಯಲ್ಲಪ್ಪ, ಎಸ್.ಎಸ್.ಸುಹಾಸ್, ಬಿ.ಎಸ್.ರಾಜೇಶ್, ಜೆ.ಜನಾರ್ಧನ್. ಚಂದ್ರಕಲಾ, ನಾಗರತ್ನ, ದರ್ಶನ್ ಅಭಿನಯಿಸಿದರು.

ಶಿವಯೋಗಿ ಸಿದ್ದರಾಮೇಶ್ವರ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ವೈ.ಡಿ.ಬದಾಮಿ ಮಾಡಿದ್ದಾರೆ. ಸಂಗೀತ ಸಹಕಾರವನ್ನು ಎಚ್.ಎಸ್.ನಾಗರಾಜ್ ಮತ್ತು ಕೆ.ದಾಕ್ಷಾಯಣಿ, ತಬಲ ಸಾಥಿ ಶರಣ್ ಕುಮಾರ್ , ಸಂಗೀತ ನಿರ್ವಹಣೆ ಆರ್.ಚಂದ್ರಮ್ಮ, ಬಸವರಾಜ ತಮ್ಮಣ್ಣ ಪೂಜಾರಿ, ಪ್ರಶಾಂತ್, ಬೆಂಕಿನ ವಿನ್ಯಾಸ ರಾಜು ಬಿ ಲಕ್ಕಮುತ್ತೇನಹಳ್ಳಿ ಮತ್ತು ರಂಗ ನಿರ್ವಹಣೆಯನ್ನು ದಿನೇಶ್ ಯರನಾಳ ಮಾಡಿದರು.
