ಕಾರ್ಮಿಕರ ದಿನದಂದು ನಿಲ್ಲದ ಕಾರ್ಖಾನೆಗಳು : ರಜಾ ದಿನದಲ್ಲೂ ಕೆಲಸ ಮಾಡಿಸಿಕೊಂಡ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಹಲವು ಕಾರ್ಖಾನೆಗಳು 

Spread the love

ದೊಡ್ಡಬಳ್ಳಾಪುರ : ಮೇ 1 ಕಾರ್ಮಿಕರ ದಿನಾಚರಣೆ ಇದ್ದು, ವರ್ಷದಲ್ಲಿ ಕಾರ್ಮಿಕರಿಗಾಗಿ ಮೀಸಲಿರುವ ಒಂದು ವಿಶೇಷ ದಿನವಾಗಿದೆ ಆ ದಿನದಂದು ಕಾರ್ಮಿಕರಿಗೆ ರಜೆ ನೀಡಿ ವಿಶ್ರಾಂತಿ ನೀಡಬೇಕೆಂಬ ಸರ್ಕಾರಿ ಆದೇಶವೂ ಇದೆ ಆದರೆ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಹಲವು ಕಾರ್ಖಾನೆಗಳು ರಜಾ ದಿನದಲ್ಲೂ ಕಾರ್ಮಿಕರನ್ನು ಕೆಲಸಕ್ಕೆ ಬರುವಂತೆ ಆದೇಶಿಸಿ ಕೆಲಸ ಪಡೆದಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.

Ad

ಹೌದು ಇಂದು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಹಲವು ಕಾರ್ಖಾನೆಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಕಾರ್ಮಿಕ ಇಲಾಖೆಯ ಕಣ್ಣು ತಪ್ಪಿಸಿ ಕಾರ್ಮಿಕರನ್ನು ಕೆಲಸಕ್ಕೆ ಬರುವಂತೆ ಮಾಡಿಕೊಂಡಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಸ್ಥಳೀಯ ಕಾರ್ಮಿಕರ ಇಲಾಖೆ ಅಧಿಕಾರಿಗಳು ಅಂತಹ ಕಲ್ಪನೆಗಳ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕಾದುನೋಡಬೇಕಿದೆ .

Ad

ವರ್ಷದಲ್ಲಿ ಕಾರ್ಮಿಕರಿಗಾಗಿ ಮೀಸಲಿರುವ ಮೇ 1ರಂದು ಕೆಲಸ ಮಾಡಿಸುವುದು ಎಷ್ಟು ಸರಿ ನಾವು ಕಂಪನಿಗಳ ಬಳಿ ಬಂದು ಪ್ರಶ್ನೆ ಮಾಡಿದರೆ ಕಂಪನಿ ಸಿಬ್ಬಂದಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ ಈ ಕುರಿತು ಕಾರ್ಮಿಕ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಕಾರ್ಮಿಕರ ಹಿತ ಕಾಯುವಲ್ಲಿ ಅಧಿಕಾರಿಗಳು ಕಾರ್ಮಿಕರಾಗಬೇಕು ಎಂದು ಸ್ಥಳೀಯರಾದ ಕೆಂಪೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

© 2026 Malnad TV. All Rights Reserved.