ಘಾಟಿ ಸುಬ್ರಮಣ್ಯ ದರ್ಶನ ಪಡೆದ ನಿರ್ಮಾಪಕ ಉಮಾಪತಿ ಗೌಡ: ” ಉಪಾಧ್ಯಕ್ಷ ” ಸಿನಿಮಾ ಕುರಿತು ಹೇಳಿದ್ದೇನು..?

Spread the love

ದೊಡ್ಡಬಳ್ಳಾಪುರ : ನಾಳೆ ಚಿಕ್ಕಣ್ಣ ಅಭಿನಯದ ನೂತನ ಚಲನಚಿತ್ರ “ಉಪಾಧ್ಯಕ್ಷ “ಬಿಡುಗಡೆಯಾಗಲಿದೆ. ಈಗಾಗಲೇ ಒಳ್ಳೆಯ ರೈಟ್ಸ್ ದೊರೆಯುತ್ತಿದ್ದು .ಕನ್ನಡಿಗರ ಮನಸ್ಸು ಗೆಲ್ಲುವ ಭರವಸೆ ಇದೆ. ನಾಳೆ ಬೆಂಗಳೂರಿನ ತ್ರಿವೇಣಿ ಸೇರಿದಂತೆ ಹಲವು ಚಿತ್ರಮಂದಿರಗಳಿಗೆ ಭೇಟಿ ನೀಡಲಿದ್ದೇವೆ ಎಂದು ನಿರ್ಮಾಪಕ ಉಮಾಪತಿ ಗೌಡ ತಿಳಿಸಿದರು

 

ಚಿಕ್ಕಣ್ಣ ಅಭಿನಯದ ” ಉಪಾಧ್ಯಕ್ಷ ” ಚಲನಚಿತ್ರ ಬಿಡುಗಡೆಯ ಹಿನ್ನಲೆ ಇಂದು ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯಕ್ಕೆ ನಿರ್ಮಾಪಕ ಉಮಾಪತಿ ಗೌಡ ತಮ್ಮ ಸ್ನೇಹಿತರೊಂದಿಗೆ ಭೇಟಿ ನೀಡಿ ಸುಬ್ರಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದವರು ಈ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದರೆ ಒಂದು ರೀತಿಯ ಸಕಾರಾತ್ಮಕ ಭಾವನೆ ಉಂಟಾಗುತ್ತದೆ ಸಿನಿಮಾ ಕುರಿತು ಎಲ್ಲರಿಗೂ ಶುಭವಾಗಲಿ ಎಂದು ಪ್ರಾರ್ಥಿಸಿದ್ದೇನೆ ಈ ಹಿಂದೆ ಹೆಬ್ಬುಲಿ ರಾಬರ್ಟ್ ಅಂತ ಸಿನಿಮಾಗಳಿಗೆ ಕನ್ನಡದ ಜನತೆ ಉತ್ತಮ ಪ್ರೋತ್ಸಾಹ ನೀಡಿದ್ದು ಉತ್ತಮ ಕಥೆಯುಳ್ಳ ಮನೋರಂಜನಾಭರಿತ ಚಿತ್ರದ ಮೂಲಕ ಮತ್ತೊಮ್ಮೆ ಕನ್ನಡಿಗರ ಮುಂದೆ ಬರುತ್ತಿದ್ದೇವೆ. ಕನ್ನಡ ಜನತೆ ಸ್ವಾಗತಿಸಿ ಆಶೀರ್ವದಿಸಬೇಕಿದೆ. ವಿಶೇಷವಾಗಿ ಮೈಸೂರು ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಚಿತ್ರಮಂದಿರಗಳಿಗೆ ಭೇಟಿ ನೀಡುವ ಉದ್ದೇಶವಿದೆ ಎಂದು ತಿಳಿಸಿದರು

ನಾಳೆ ಸಿನಿಮಾ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವು ಖ್ಯಾತ ನಟರು ಭಾಗವಹಿಸುತ್ತಿದ್ದು ಇದೇ ತಿಂಗಳ 27 ರಂದು ನಟ ಧ್ರುವ ಸರ್ಜಾ ಉಪಾಧ್ಯಕ್ಷ ಸಿನಿಮಾ ವೀಕ್ಷಸಲಿದ್ದಾರೆ ಎಂದು ತಿಳಿಸಿದರು

 

ಹೆಬ್ಬುಲಿ ಹಾಗೂ ರಾಬರ್ಟ್ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳಾಗಿದ್ದು ಈ ಪಟ್ಟಿಗೆ ಉಪಾಧ್ಯಕ್ಷ ಸಿನಿಮಾ ಸೇರುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಉತ್ತಮ ಕಥೆಯುಳ್ಳ ಸಿನಿಮಾಗಳನ್ನು ಕನ್ನಡಿಗರು ಎಂದು ಕೈಬಿಡುವುದಿಲ್ಲ ಉತ್ತಮ ಕಥೆ ಹಾಗೂ ಮನೋರಂಜನೆ ಭರಿತ ಸಿನಿಮಾ ಮಾಡಿದ್ದೇವೆ ಜನ ನಿರ್ಣಯ ಕಾದು ನೋಡಬೇಕಾಗಿದೆ ಒಂದು ಸಿನಿಮಾ ಗೆಲ್ಲಲು ಅಥವಾ ಹಿಟ್ ಆಗಲು ಕಾರಣ ಜನರೇ ಆಗಿರುತ್ತಾರೆ ಉಪಾಧ್ಯಕ್ಷ ಸಿನಿಮಾ ಕುರಿತು ಕನ್ನಡ ಅಭಿಮಾನಿಗಳು ನೀಡುವ ತೀರ್ಪು ಕಾದುನೋಡಬೇಕಿದೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಆಕಾಶ್, ಹಳ್ಳಿರೈತ ಅಂಬರೀಶ್ ,ಉದಯಾರಾಧ್ಯ ಮತ್ತಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *