ದೊಡ್ಡಬಳ್ಳಾಪುರ (ಮಾರ್ಚ್ 07 ):ಕೊನಘಟ್ಟ, ನಾಗದೇನಹಳ್ಳಿ, ಆದಿನಾರಾಯಣಹೊಸಹಳ್ಳಿ, ಗ್ರಾಮದ ರೈತರುಗಳು ಕೆಐಎಡಿಬಿ ಗೆ 971 ಎಕರೆ ಭೂಸ್ವಾದಿನವಾಗಿದ್ದು 2013 ರ ಕಾಯ್ದೆಯ ಮಾನದಂಡದಂತೆ 1:4 ರಂತೆ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ರೈತರು ಕಳೆದ 53 ದಿನಗಳಿಂದ ಸತತವಾಗಿ ಅನಿರ್ಧಿಷ್ಟಾವಧಿ ಧರಣಿ ನೆಡೆಸುತ್ತಿದ್ದು. ರೈತರಿಗೆ ಈವರೆಗೂ ಯಾವುದೇ ಪ್ರತಿಫಲ ಸಿಗದ ಕಾರಣ ಮಾರ್ಚ್ 11ರಂದು ರೈತರು ಜಾಥಾ ಹೊರಡುವ ಮೂಲಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಮಾಜಿ ಟಿಎಪಿಎಂಸಿಎಸ್ ಅಧ್ಯಕ್ಷರಾದ ಎಂ.ಆನಂದ್ ತಿಳಿಸಿದರು.

ನಗರದ ಪ್ರವಾಸಿಮಂದಿರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಸತತ ಹೋರಾಟ ನೆಡೆಸಿದರು ಇಂದಿಗೂ ನಮಗೆ ಯುವುದೇ ರೀತಿಯ ನ್ಯಾಯ ಸಿಕ್ಕಿರುವುದಿಲ್ಲ. ಆದ್ದರಿಂದ ಸಾಮೂಹಿಕವಾಗಿ ರೈತರು ಶಾಂತ ರೀತಿಯಲ್ಲಿ ತಮ್ಮ ಸಮಸ್ಯೆಯನ್ನು ಲಿಖಿತರೂಪದಲ್ಲಿ ಅಧಿಕಾರಿಗಳಿಗೆ ತಲುಪಿಸುವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಕೆಐಎಡಿಬಿ ಭೂಸ್ವಾಧೀನಕ್ಕೆ ಒಳಪಟ್ಟಿರುವ ನಾಲ್ಕು ಗ್ರಾಮದ ರೈತರುಗಳು ದಿನಾಂಕ:11-03-2024 ರಂದು ಹೋರಾಟ ಸಮಿತಿ ಸ್ಥಳದಿಂದ ಜಾಥಾ ಹೊರಟು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳಿಗೆ ಹಾಗೂ ತಾಲ್ಲೂಕುದಂಡಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದು.ರೈತರ ಸಮಸ್ಯೆ ಬಗೆಹರಿಸದ ಪಕ್ಷದಲ್ಲಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ನಾಗದೇನಹಳ್ಳಿ ಆನಂದ್ ಮೂರ್ತಿ ಮಾತನಾಡಿ ರೈತರ ಹೋರಾಟ ಸಭೆಗಳ ವಿಚಾರವಾಗಿ ಹಾಗೂ ಕೆಐಎಡಿಬಿಗೆ, ಜಿಲ್ಲಾಧಿಕಾರಿಗಳಿಗೆ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾದ ಡಾ|| ಮಹೇಶ್‌ರವರಿಗೆ ಹಾಗೂ ಸರ್ಕಾರದ ಪ್ರದಾನ ಕಾರ್ಯದರ್ಶಿ ಸೆಲ್ವಕುಮಾರ್ ರವರುಗಳಿಗೆ ಮನವಿ ಸಲ್ಲಿಸಿದ್ದು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.ಆದ್ದರಿಂದ ರೈತರ ಹೋರಾಟ ಸಮಿತಿಯು ಸಾಮೂಹಿಕವಾಗಿ ಜಾಥಾ ಮಾಡುವ ಮೂಲಕ ಮನವಿ ಸಲ್ಲಿಸಲು ಮುಂದಾಗಿದೆ.ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪ ರವರು ಈ ಹಿಂದೆ ರೈತರಿಗೆ ಭರವಸೆ ನೀಡಿದ್ದರು ಆದರೆ ಅದು ಕೇವಲ ಭರವಸೆಯಾಗಿಯೇ ಉಳಿದುಹೋಗಿದೆ. ಅಂದು ಕೆಐಎಡಿಬಿಗೆ ಭೂಮಿ ಕೊಡವುದಿಲ್ಲ ಎಂದಿದ್ದ ರೈತರ ಮನಹೋಲಿಸೋದ್ದ ಅಧಿಕಾರಿಗಳು ಇದ್ದು ರೈತರ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಸುಮ್ಮನಿರುವುದು ಸರಿಯಲ್ಲ , 53 ದಿನಗಳಲ್ಲಿ ನಮ್ಮ ಹೋರಾಟದ ಸ್ಥಳಕ್ಕೆ ಯಾವ ಅಧಿಕಾರಿಗಳು ಭೇಟಿ ನೀಡದೇ ಇರುವುದು ವಿಪರ್ಯಾಸವೇ ಸರಿ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ನಾರಾಯಣ ಗೌಡ ಮಾತನಾಡಿ ಮನವಿ ಸಲ್ಲಿಸುವ ದಿನದಂದು ತಾಲ್ಲೂಕು ಮತ್ತು ಜಿಲ್ಲೆಯ ಎಲ್ಲಾ ರೈತಪರ, ಕನ್ನಡಪರ, ದಲಿತಪರ, ಹಾಗೂ ಇತರೆ ಎಲ್ಲಾ ಸಂಘಟನೆಗಳು ಬೆಂಬಲನ್ನು ನೀಡಲು ಕೊರಿದ್ದು. ಈ ಜಾಥಾ ಕಾರ್ಯಕ್ರಮದಲ್ಲಿ ಎಲ್ಲಾ ಸಂಘಟನೆಗಳು ರೈತರ ಉಳಿವಿಗಾಗಿ ರೈತರ ಹೋರಾಟಕ್ಕೆ ಬೆಂಬಲ ನೀಡಲಿವೆ.ಸೂಕ್ತ ಬೆಲೆ 1:4 ಅನುಪಾತದಲ್ಲಿ ನೀಡದ ಪಕ್ಷದಲ್ಲಿ ರೈತರು ತಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ . ರೈತರ ಜಾಥಾ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯ ಸಹಕಾರ ಅವಶ್ಯಕವಾಗಿದ್ದು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ರಕ್ಷಣೆ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೊಡಿಹಳ್ಳಿ ಕೃಷ್ಣಪ್ಪ, ಎಂಪಿಸಿಎಸ್ ಮಾಜಿ ಅಧ್ಯಕ್ಷ ಮಂಜುನಾಥ್,ಎಂಪಿಸಿಎಸ್ ಸದಸ್ಯ ರಾಮಾಂಜಿನಪ್ಪ, ಕೋನಘಟ್ಟ ರಾಮಣ್ಣ, ಕೋನಘಟ್ಟ ನರಸಿಂಹಮೂರ್ತಿ, ಕೋಡಿಹಳ್ಳಿ ನಂಜೇಗೌಡ, ಆದಿನಾರಾಯಣ ಹೊಸಹಳ್ಳಿ ನಾಗರಾಜು, ಕೋನಘಟ್ಟ ರಮೇಶ್, ಲಿಂಗನಹಳ್ಳಿ ನಾಗೇಶ್, ನಂಜೇಮರಿಯಪ್ಪ, ಅಭಿ, ಜಯಂತ್, ಯಶವಂತ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.
