ದೊಡ್ಡಬಳ್ಳಾಪುರ : ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳು ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ, ಗತಿಶಕ್ತಿ ಕಾರ್ಗೋ ಟರ್ಮಿನಲ್‌ಗಳು, ಗೂಡ್ಸ್ ಶೆಡ್. ಒನ್ ಸ್ಪೇಷನ್ ಬನ್ ಉತ್ಪನ್ನ ಮಳಿಗೆಗಳು ಮತ್ತು ಇತರ ರೈಲು ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಅಡಿಪಾಯ ಕಾರ್ಯಕ್ಕೆ ವಿಡಿಯೋ ಮಾಧ್ಯಮದ ದೇಶದಾದ್ಯಂತ ಮೂಲಕ ಏಕಕಾಲದಲ್ಲಿ ಚಾಲನೆ ನೀಡಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ತಿಳಿಸಿದರು.

ತಾಲೂಕಿನ ವಡ್ಡರಹಳ್ಳಿ ಸಮೀಪದಲ್ಲಿ ಬಾಲಾಜಿ ಮೂವರ್ಸ್ ಅಂಡ್ ಸೈಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ರೈಲ್ವೆ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗತಿಶಕ್ತಿ ಎಂಬುವ ವಿಶೇಷ ಯೋಜನೆ ಅಡಿಯಲ್ಲಿ ಸರಕು ಸಾಗಾಣಿಕೆಗೆ ಅನುಕೂಲವಾಗುವಂತೆ ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿಜಿ ಅವರು ನೂತನ ರೈಲ್ವೆ ಮಾರ್ಗಗಳನ್ನು ನಿರ್ಮಿಸುವ ಯೋಜನೆ ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ತಾಲೂಕಿಗೆ ಒಂದು ಕಾರ್ಗೋ ಟರ್ಮಿನಲ್ ತರುವ ಉದ್ದೇಶವಿದ್ದು,ಈ ಯೋಜನೆಯಿಂದ ಕಾರ್ಖಾನೆಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ನರೇಂದ್ರ ಮೋದಿಜಿ ಅವರ ಆಡಳಿತದಲ್ಲಿ ಭಾರತ ರೈಲ್ವೆ ಮತ್ತಷ್ಟು ಅಭಿವೃದ್ಧಿಗೊಂಡಿದೆ ಎನ್ನುವುದಕ್ಕೆ ಇಂದಿನ ಶಂಕುಸ್ಥಾಪನಾ ಹಾಗೂ ಉದ್ಘಾಟನಾ ಕಾರ್ಯಕ್ರಮವೇ ಉತ್ತಮ ಉದಾಹರಣೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು ವಿಭಾಗದಲ್ಲಿ 02 ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ, 40 ಒಎಸ್‌ಪಿ ಸ್ಟಾಲ್‌ಗಳು, 01 ಗತಿಶಕ್ತಿ ಕಾರ್ಗೋ ಟರ್ಮಿನಲ್, 01 ಗೂಡ್ಸ್ ಶೆಡ್, 01 ವರ್ಕ್ ಶಾಪ್ ಜೊತೆಗೆ 02 ವಂದೇ ಭಾರತ್ ಎಕ್ಸ್ ಪ್ರೆಸ್ ಸಮರ್ಪಿಸಲಾಗಿದೆ ಎಂದು ತಿಳಿಸಿದರು.

ರೈಲ್ವೆ ಇಲಾಖೆ ಸಿಬ್ಬಂದಿ ಕೃಷ್ಣಾರೆಡ್ಡಿ ಮಾತನಾಡಿ ಇಂದು ರಾಷ್ಟ್ರದಲ್ಲಿ ಹಲವು ಬಾಗಗಳಲ್ಲಿ ಹಲವಾರು ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆ ಹಾಗೂ ರಾಷ್ಟ್ರ ಸಮರ್ಪಣೆ ಕಾರ್ಯವನ್ನು ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಜಿ ಮಾಡಿದ್ದಾರೆ. ಇದರಲ್ಲಿ ಒಂದೇ ಭಾರತ್ ರೈಲುಗಳು ಸೇರಿದಂತೆ ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಮಳಿಗೆಗಳು, ವರ್ಕ್ ಶಾಪ್, ಸೇರಿದಂತೆ ಗತಿಶಕ್ತಿ ಕಾರ್ಗೋ ಟರ್ಮಿನಲ್, ಗೂಡ್ಸ್ ಶಡ್ಸ್, ಜನೌಷಧಿ ಕೇಂದ್ರಗಳನ್ನು ಒಳಗೊಂಡಂತೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ರೈಲ್ವೆ ನಿಯಮಗಳ ಅನುಸಾರವಾಗಿ 12.5 ಕೋಟಿ ವೆಚ್ಚದಲ್ಲಿ ತಾಲೂಕಿನ ವಡ್ಡರಹಳ್ಳಿ ಸಮೀಪ ಬಾಲಾಜಿ ಮೂವರ್ಸ್ ಅಂಡ್ ಸೈಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಗೋ ಟರ್ಮಿನಲ್ ನಿರ್ಮಾಣ ಮಾಡುತ್ತಿದ್ದು. ಈ ಟರ್ಮಿನಲ್ ಮುಖ್ಯವಾಗಿ ಸ್ಟಿಲ್ ಸಾಗಾಣಿಕೆಗೆ ಅನುಕೂಲವಾಗಲಿದೆ.ಈ ಕಾಮಗಾರಿಯ ಮೂಲಕ ಹಲವಾರು ಉದ್ಯೋಗಾವಕಾಶಗಳು ರೂಪುಗೊಳ್ಳಲಿದ್ದು. ಮುಂದಿನ ದಿನಗಳಲ್ಲಿ ಸುತ್ತಮುತ್ತಲಿನ ಪ್ರದೇಶವು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೊಳ್ಳುತ್ತದೆ ಎಂದರು
ಜೆ ಎಸ್ ಡಬ್ಲ್ಯೂ ಸ್ಟೀಲ್ ಕಂಪನಿಯ ಸಹಾಯಕ ಉಪಾಧ್ಯಕ್ಷರಾದ ಸಂಜಯ್ ಅನುಮೋಲ್ಕರ್ ಮಾತನಾಡಿ ಈ ಯೋಜನೆಗಳು ದೇಶಕ್ಕೆ ಶಕ್ತಿ ತುಂಬುವ ಯೋಜನೆಗಳಾಗಿದ್ದು ದೇಶದ ಪ್ರಧಾನಿಯ ಮುಂದಾಲೋಚನೆ ತಿಳಿಸುತ್ತವೆ. ಗತಿಶಕ್ತಿ ಯೋಜನೆಯ ಅಡಿಯಲ್ಲಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುವುದರ ಜೊತೆ ಜೊತೆಗೆ ಅಭಿವೃದ್ಧಿ ಕಾರ್ಯಗಳು ಸಾಗಲಿವೆ.ಈ ಕಾರ್ಯಕ್ಕೆ ಸ್ಥಳೀಯರ ಸಹಕಾರ ಅತ್ಯವಶ್ಯಕವಾಗಿದ್ದು ದೇಶವು ಮತ್ತಷ್ಟು ಅಭಿವೃದ್ಧಿ ಹೊಂದಲು ಇಂತಹ ಯೋಜನೆಗಳು ಸಹಾಯಕಾರಿಯಾಗಿವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಕೃಷ್ಣ ಮೂರ್ತಿ ಕಂಟನ ಕುಂಟೆ,ಮಾಜಿ ಅಧ್ಯಕ್ಷರು ಶೋಭಾ ರಾಜಗೋಪಾಲ್, ಸದಸ್ಯರು ರಾಮ ಚಂದ್ರ ರೆಡ್ಡಿ, ಮಹಾದೇವ ವಡ್ಡರ ಪಾಳ್ಯ, ನಾಗೇಶ್ ಮಲ್ಲತ್ ಹಳ್ಳಿ, , ವಿ.ಏನ್ ಸುನಿತಾ ವಡ್ಡರಹಳ್ಳಿ, ಜಿ ಆರ್ ಬಾಲಾಜಿ, ಜಿ ಆರ್ ರಘು ಮತ್ತಿತರರು ಉಪಸ್ಥಿತರಿದ್ದರು.
