*ಚಿಲ್ಲರೆ ಕೊಡದ ಕಂಡಕ್ಟರ್ ವಿರುದ್ಧ BMTC ಸಂಸ್ಥೆಗೆ ಪ್ರಯಾಣಿಕನ ದೂರು : ಚಿಲ್ಲರೆ ಹಣ ಹಿಂದಿರುಗಿಸಿದ BMTC*

Spread the love

ದೊಡ್ಡಬಳ್ಳಾಪುರ, ವಿಜಯಮಿತ್ರ : ಬಿಎಂಟಿಸಿ ಅಧಿಕೃತ ವೆಬ್ ಸೈಟ್ ನಲ್ಲಿ ದೂರು ನೀಡಿ 25 ರೂಪಾಯಿ ಚಿಲ್ಲರೆಯನ್ನು ಹಿಂಪಡೆದ ಪ್ರಯಾಣಿಕ ಗಿರೀಶ್.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್ ಕಂಡಕ್ಟರ್ 25 ರೂಪಾಯಿಯನ್ನು ಹಿಂತಿರುಗಿಸದ ಕಾರಣ ಅಧಿಕೃತ ವೆಬ್ ಸೈಟ್ ನಲ್ಲಿ ನೆಡೆದ ಘಟನೆ ಕುರಿತು ಕೆಲವೇ ನಿಮಿಷಗಳಲ್ಲಿ ದೂರು ನೀಡಿದ್ದರು ಈಗ ಬಿಎಂಟಿಸಿ ಸಂಸ್ಥೆಯು 25 ರೂಗಳ ಚಿಲ್ಲರೆ ಹಣವನ್ನು ಪ್ರಯಾಣಿಕ ಗಿರೀಶ್ ಗೆ ಹಿಂದಿರುಗಿಸಿದೆ.

ಘಟನೆಯ ವಿವರ : 

 

ಗ್ರಾಹಕ ಗಿರೀಶ್ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಬಿಎಂಟಿಸಿಯ ಒಂದು ದಿನದ ಪಾಸ್ ಹಾಗೂ ಟೋಲ್ ದರ ಸೇರಿ ₹ 75 ಆಗಿದ್ದರೆ, ಕಂಡಕ್ಟರ್ಗೆ ₹ 100 ಪಾವತಿಸಿ 25 ರೂಪಾಯಿ ಚೇಂಜ್ ಕೇಳಿದ್ದರು. ಆದಾಗ್ಯೂ, ಅವರು ತಮ್ಮ ಬಾಕಿ ಮೊತ್ತವನ್ನು ಹಿಂದಿರುಗಿಸದ ಕಂಡಕ್ಟರ್ ವಿರುದ್ಧ ಪ್ರಯಾಣಿಕ ಗಿರೀಶ್ ಬಿಎಂಟಿಸಿ ಸಂಸ್ಥೆಗೆ ದೂರು ಸಲ್ಲಿಸಿ ತಮಗೆ ಬರಬೇಕ್ಕಿದ್ದ ರೂ 25 ಹಣವನ್ನು ಹಿಂಪಡೆದಿದ್ದಾರೆ.

Leave a Reply

Your email address will not be published. Required fields are marked *