ಗೋ ಸಮ್ಮಾನ್ ಆಹ್ವಾನ್ ಅಭಿಯಾನ ಕ್ಕೆ ಚಾಲನೆ : ಗೋಮಾತೆಗೆ ‘ರಾಷ್ಟ್ರೀಯ ಗೌರವ’ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ 

Spread the love

ದೊಡ್ಡಬಳ್ಳಾಪುರ : ಸಂಪೂರ್ಣ ಭಾರತದಲ್ಲಿ ಅಖಿಲ ವೇದಲಕ್ಷಣ ಗೋಮಾತೆಯ (ಸಂಪೂರ್ಣ ದೇಶಿ ಗೋವಂಶ) ವಿಧಿವತ್ತಾದ ಸೇವೆ, ಪೂರ್ಣ ಸುರಕ್ಷತೆ ಮತ್ತು ರಾಷ್ಟ್ರೀಯ ಗೌರವ ನೀಡಲು ಕೇಂದ್ರ ಕಾನೂನು ರೂಪಿಸಲು ಮತ್ತು ಗೋ ಪಾಲನಾ ಸಚಿವಾಲಯ ಸ್ಥಾಪಿಸಲು ಸಂಪೂರ್ಣ ಭಾರತೀಯರ ಪರವಾಗಿ ವಿನಂತಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಗೋ ಸಮ್ಮಾನ್ ಆಹ್ವಾನ್ ಅಭಿಯಾನದ ನಿರ್ದೇಶಕರು ಹಾಗೂ ಶ್ರೀ ರಾಮ್ ಸೇನೆ ಧರ್ಮ ಪ್ರಚಾರಕರಾದ ಶ್ರೀನಿವಾಸ್ ಗುರೂಜಿ ತಿಳಿಸಿದರು.

Ad

ನಗರದ ತಾಲ್ಲೂಕು ಕಚೇರಿ ಮುಂಭಾಗ ನಡೆದ ಗೋ ಸಮ್ಮಾನ್ ಆಹ್ವಾನ ಅಭಿಯಾನದಲ್ಲಿ ಭಾಗವಹಿಸಿ ತಾಲ್ಲೂಕು ದಂಡಧಿಕಾರಿಗಳಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿದ ಅವರು ಗೋಮಾತೆ ರಾಷ್ಟ್ರಮಾತೆ ಆಗಬೇಕು ಎಂದು ಮಾನ್ಯ ರಾಷ್ಟ್ರಪತಿಗಳಿಗೆ ಮತ್ತು ಮಾನ್ಯ ಪ್ರಧಾನ ಮಂತ್ರಿಗಳಿಗೆ ಮತ್ತು ಮಾನ್ಯ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ದೊಡ್ಡಬಳ್ಳಾಪುರ ತಾಲ್ಲೂಕು ದಂಡಧಿಕಾರಿಗಳ ಮುಖಾಂತರವಾಗಿ ಮನವಿಯನ್ನು ಸಲ್ಲಿಸಲಾಯಿತು.ಸನಾತನ ಭಾರತದ ‘ಸಾಂಸ್ಕೃತಿಕ ಪುನರುತ್ಥಾನ ಕ್ಕಾಗಿ ಗೋಮಾತೆಗೆ ‘ರಾಷ್ಟ್ರೀಯ ಗೌರವ’ ನೀಡಿ ಗೌರವಿಸಬೇಕಿದೆ.ಇಂದು ಗೋವಂಶದ ಸ್ಥಿತಿ ಅತ್ಯಂತ ನೋವಿನಿಂದ ಕೂಡಿದೆ. ಕಳ್ಳಸಾಗಣೆ ಮತ್ತು ರಸ್ತೆಗಳಲ್ಲಿನ ಅವುಗಳ ದುಸ್ಥಿತಿ ಪ್ರತಿಯೊಬ್ಬ ಭಾರತೀಯನ ಹೃದಯವನ್ನು ಕಲಕುತ್ತಿದೆ. ಗೋಗಳು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಎಂಬುದನ್ನು ನಾವು ಪರಿಗಣಿಸಬೇಕು ಎಂದರು.

 

ಏಪ್ರಿಲ್ 27ನೇ ತಾರೀಕು ಗೋ ಹತ್ಯೆ ನಿಷೇಧ ರಾಷ್ಟ್ರಾದ್ಯಂತ ಜಾರಿಗೆ ಬರಬೇಕು. ಗೋಮಾತೆ ರಾಷ್ಟ್ರಮಾತೆ ಎಂದು ಸಾಂವಿಧಾನಿಕ ಸ್ಥಾನಮಾನ ನೀಡಿ ಗೋವುಗಳ ರಕ್ಷಣೆಗೆಂದು ಕೇಂದ್ರ ಗೋಸೇವಾ ಸಚಿವಾಲಯ ಸ್ಥಾಪನೆ ಮಾಡಬೇಕು ಮತ್ತು ಏಕೀಕೃತ ಕೇಂದ್ರ ಕಾನೂನುರೂಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದರು.

 

ಈ ವೇಳೆ ಶ್ರೀರಾಮ ಸೇನೆಯ ರಾಜ್ಯ ಧರ್ಮ ಪ್ರಚಾರಕರಾದ ಶ್ರೀನಿವಾಸ್ ಗುರೂಜಿ, ಶ್ರೀ ಘಾಟಿ ಗೋಶಾಲಯ ಮುಖ್ಯಸ್ಥರು ಜೀವನ್, ಘನಶ್ಯಾಮ್,ಎಂ ಎಸ್, ರಾಮರಾವ್, ಯಶೋಧ,ರಘುನಾಥ್ , ಮಲ್ಲೇಶ್ , ಸುರೇಶ್, ರಾಮಣ್ಣ, ಹಾಗೂ ಎಲ್ಲಾ ಹಿಂದೂ ಪರ ಸಂಘಟನೆಯ ಮುಖ್ಯಸ್ಥರು ಹಾಗೂ ಎಲ್ಲ ಹಿಂದೂ ಕಾರ್ಯಕರ್ತರು ಹಾಜರಿದ್ದರು.

 

Leave a Reply

Your email address will not be published. Required fields are marked *

© 2026 Malnad TV. All Rights Reserved.