ರಾಜಘಟ್ಟದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ 

Spread the love

ದೊಡ್ಡಬಳ್ಳಾಪುರ : ತಾಲ್ಲೂಕಿನ ರಾಜಘಟ್ಟದಲ್ಲಿ ನವೋದಯ ಚಾರಿಟೆಬಲ್ ಟ್ರಸ್ಟ್, ದೃಷ್ಟಿ ಆಸ್ಪತ್ರೆ ಹಾಗೂ ಶ್ರೀ ನಂದಿ ಮೆಡಿಕಲ್ ಮತ್ತು ಧನ್ವಂತರಿ ಕ್ಲಿನಿಕ್ ಅವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

 

ಶಿಬಿರವನ್ನು ಉದ್ದೇಶಿಸಿ ನವೋದಯ ಟ್ರಸ್ಟಿನ ಅಧ್ಯಕ್ಷರಾದ ನವೋದಯ ಚೇತನ್ ಮಾತನಾಡಿ, ಇಂತಹ ಉಚಿತ ಆರೋಗ್ಯ ಶಿಬಿರಗಳು ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಅನುಕೂಲವಾಗುತ್ತವೆ. ಆರೋಗ್ಯ ಸೇವೆಗಳು ಗ್ರಾಮ ಮಟ್ಟಕ್ಕೆ ತಲುಪುವಂತೆ ಮಾಡುವಲ್ಲಿ ಇವು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

Ad

ಬೇಸಿಗೆ ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಹೆಚ್ಚು ನೀರು ಮತ್ತು ಮಜ್ಜಿಗೆ ಸೇವಿಸುವಂತೆ ಡಾ. ಅರ್ಪಿತ ಅವರು ಸಲಹೆ ನೀಡಿದರು. ಇದೇ ವೇಳೆ, ನಂದಿ ಮೆಡಿಕಲ್ಸ್‌ನ ಮಾಲೀಕರಾದ ಶ್ರೀ ರಾಜೇಶ್ ಅವರು ಶಿಬಿರಕ್ಕೆ ಆಗಮಿಸಿದವರಿಗೆ ಉಚಿತ ORS ಪಾನೀಯ ವಿತರಿಸಿದರು. ಈ ಶಿಬಿರದಲ್ಲಿ ಒಟ್ಟು 23 ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಲು ಮತ್ತು 6 ಜನರನ್ನು ಕಣ್ಣಿನ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

 

ಶಿಬಿರದಲ್ಲಿ ಡಾ. ಹರೀಶ್, ಡಾ. ಪ್ರಥಮೇಶ್, ಡಾ. ರೋಹಿತ್, ಡಾ. ಹರ್ಷಲ್, ದೃಷ್ಟಿ ಆಸ್ಪತ್ರೆಯ ಶಿವು ಹಾಗೂ ನವೋದಯ ಟ್ರಸ್ಟಿನ ಕಾರ್ಯಕ್ರಮ ಸಂಯೋಜಕರಾದ ಜನಾರ್ಧನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.