ಹಿಂದೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆ,ದೌರ್ಜನ್ಯ ಕುರಿತು ವಿಶ್ವ ಹಿಂದೂ ಪರಿಷತ್ತು ಜಾಗೃತಿ ಮೂಡಿಸಲಿದೆ – ಮಿಲಿಂದ್ ಪರಾಂಡೆ

Spread the love

ದೊಡ್ಡಬಳ್ಳಾಪುರ : ಮುಂಬರುವ ದಿನಗಳಲ್ಲಿ ಹಿಂದೂ ಸಮಾಜವನ್ನು ಎಚ್ಚರಿಸುವ ಹಾಗೂ ಅರಿವು ಮೂಡಿಸುವ ಕಾರ್ಯಗಳನ್ನು ದೇಶ ಹಾಗೂ ರಾಜ್ಯ ನಮ್ಮ ಕಾರ್ಯಕರ್ತರು ಹಮ್ಮಿಕೊಳ್ಳಲಿದ್ದೆವೆ ಎಂದು ವಿಶ್ವ ಹಿಂದೂ ಪರಿಷದ್ ಕೇಂದ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ತಿಳಿಸಿದರು.

 

ನಗರದ ಪ್ರವಾಸಿ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ತು ಬಜರಂಗದಳದ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು ಪ್ರಮುಖವಾಗಿ ನಮ್ಮ ಸಂಘಟನೆಯು 3 ವಿಚಾರಗಳ ಬಗ್ಗೆ ಗಮನಹರಿಸಲು ನಿರ್ಧರಿಸಿದ್ದು ಮಹಾರಾಷ್ಟ್ರ ನಾಸಿಕ್ ನಲ್ಲಿ ನಡೆದಿರುವ ಲವ್ ಜಿಹಾದ್ ಪ್ರಕಾರಣವನ್ನು ಗಂಭೀರವಾಗಿ ಪರಿಗಣಿಸಿ ಹೆಣ್ಣು ಮಕ್ಕಳ ರಕ್ಷಣೆ ಗಾಗಿ ವಿಶ್ವ ಹಿಂದೂ ಪರಿಷತ್ತು ಹಲವು ಕಾರ್ಖಾನೆಗಳ ವ್ಯವಸ್ಥಾಪಕರನ್ನು, ಆಡಳಿತ ಅಧಿಕಾರಿಗಳನ್ನು ಭೇಟಿ ಮಾಡಿ ಅಂತಹ ಪ್ರಕರಣಗಳು ನೆಡೆದಿವೆ ಎಂಬ ಮಾಹಿತಿ ಕಲೆ ಹಾಕುವುದರ ಜೊತೆಗೆ ಮುಂದೆ ಅಂತಹ ಪ್ರಕರಣಗಳು ನಡೆಯದಂತೆ ಕ್ರಮವಹಿಸುವಂತೆ ಮನವಿ ಮಾಡಿದ್ದೇವೆ ಎಂದರು.

 

ದೇಶದ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಮತಾಂತರ, ಶೋಷಣೆ,ದೌರ್ಜನ್ಯ ಕುರಿತು ದೇಶದ 1500 ಹೆಚ್ಚಿನ ಪ್ರದೇಶಗಳಲ್ಲಿ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಲಿದ್ದು ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ ಎಂದರು.

 

Ad

ಪಹಾಲ್ಗಮ್ ದಾಳಿ ನಡೆದು ಇಂದಿಗೆ ಒಂದು ವರ್ಷವಾಗಿದ್ದು ಕರಾಳ ದಿನದ ಕಹಿ ನೆನಪಿನಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ ಸಂತಾಪ ಸೂಚಿಸಲು ವಿಶ್ವಹಿಂದೂ ಪರಿಷತ್ತು ಬಜರಂಗದಳ ನಿರ್ಣಯಿಸಿದೆ ಈ ಮೂಲಕ ಮುಸ್ಲಿಂ ಸಮುದಾಯದ ಗಮನ ಸೆಳೆಯುವ ಕಾರ್ಯ ಹಾಗೂ ಅರಿವು ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು.

 

 

ಇತ್ತೀಚಿಗೆ ಹಿಂದೂ ಹೆಣ್ಣು ಮಕ್ಕಳ ಮೇಲೆ ನಡೆದಿರುವ ಎಲ್ಲಾ ದೌರ್ಜನ್ಯ ಪ್ರಕರಣಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಬಾಗಿಯಾಗಿರುವುದು ವಿಷಾದನೀಯ ಈ ಕುರಿತು ನಮ್ಮ ವಿಶ್ವ ಹಿಂದೂ ಪರಿಷತ್ತು ಗಮನವಹಿಸಿ ಹಿಂದೂ ಸಮಾಜಕ್ಕೆ ಅರಿವು ಮೂಡಿಸುವ ಕಾರ್ಯ ನಡೆಯಲಿದೆ ಅಲ್ಲದೆ ಗೋ ರಕ್ಷಣೆ ಕುರಿತು ಚಿಂತನೆ ನಡೆಸಿದ್ದು ರಾಜ್ಯದ ಗಡಿ ಪ್ರದೇಶದಲ್ಲಿ( ತಮಿಳು ನಾಡು ಹಾಗೂ ಕೇರಳ )ಹೆಚ್ಚಿನ ಚೆಕ್ ಪೋಸ್ಟ್ ಹಾಗೂ ಸಿಬ್ಬಂದಿಗಳನ್ನು ಆಯೋಜನೆ ಮಾಡುವ ಮೂಲಕ ಹಾಕಿ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಇಂತಹ ಕೃತ್ಯಗಳಲ್ಲಿ ಭಾಗಿಯಾದ ಚಾಲಕರು ಹಾಗೂ ವಾಹನಗಳ ಸೂಕ್ತ ಪರಿಶೀಲನೆ ಮಾಡುವ ಮೂಲಕ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ರಾಜ್ಯದಲ್ಲಿ ನಮ್ಮ ವಿಶ್ವ ಹಿಂದೂ ಪರಿಷತ್ತು ಕಾರ್ಯಕರ್ತರ ಮೇಲೆ ಅನಗತ್ಯ ಕೇಸ್ ದಾಖಲಿಸಿ ತೊಂದರೆ ಕೊಡಲಾಗುತ್ತಿದೆ ಈ ವರ್ತನೆಯನ್ನು ಸರ್ಕಾರ ಕೈ ಬಿಡಬೇಕು ಸೂಕ್ತ ಮಾಹಿತಿ ಪಡೆದು ತಪ್ಪಿಲ್ಲದ ಕಾರ್ಯಕರ್ತರ ಮೇಲಿನ ಕೇಸ್ ವಜಾಗೊಳಿಸಬೇಕು ಎಂದು ಮನವಿ ಮಾಡಿದರು.

ನವೆಂಬರ್ ತಿಂಗಳಿನಿಂದ ನೂತನ ಹಿಂದೂ ಕಾರ್ಯಕರ್ತರ ನೋಂದಣಿ ಕಾರ್ಯ ಪ್ರಾರಂಭವಾಗಲಿದ್ದು, ಸುಮಾರು ಒಂದು ಕೋಟಿಗೂ ಅಧಿಕ ಸದಸ್ಯರನ್ನು ನೋಂದಣಿ ಮಾಡುವ ಉದ್ದೇಶವಿದ್ದು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಈ ಅಭಿಯಾನದ ನಿರ್ವಹಣೆ ಮಾಡಲಿದ್ದಾರೆ ಎಂದರು.

 

ಈ ವೇಳೆ ವಿಶ್ವ ಹಿಂದೂ ಪರಿಷದ್ ಕೇಂದ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ, ದಕ್ಷಿಣ ಪ್ರಾಂತ ಅಧ್ಯಕ್ಷರು ದೀಪಕ್ ರಾಜ್ ಗೋಪಾಲ್, ದಕ್ಷಿಣ ಪ್ರಾಂತ ಕಾರ್ಯದರ್ಶಿ ಬಿ.ಇ ಸುರೇಶ್, ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಮಂಗಳೂರು ಶರಣ್ ಪಂಪ್‌ವೆಲ್, ಕೋಲಾರ ವಿಭಾಗ ಅಧ್ಯಕ್ಷ ಮಂಜುನಾಥ್, ಕೋಲಾರ ವಿಭಾಗ ಕಾರ್ಯದರ್ಶಿ ಗೌರಿಶಂಕರ್, ಬಜರಂಗದಳ ಪ್ರಾಂತ ಬಲೋಪಾಸನ ಪ್ರಮುಖ್ ನರೇಶ್, ಕೋಲಾರ ವಿಭಾಗ ಸಹ ಕಾರ್ಯದರ್ಶಿ ರವಿಕುಮಾರ್,ಬಜರಂಗದಳ ಕೋಲಾರ ವಿಭಾಗ ಸಂಯೋಜಕ ಕೃಷ್ಣಮೂರ್ತಿ ಸೇರಿದಂತೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರು ಹಾಜರಿದ್ದರು.

 

 

 

 

Leave a Reply

Your email address will not be published. Required fields are marked *

© 2026 Malnad TV. All Rights Reserved.