ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬೆಸ್ಕಾಂ ಅಧಿಕಾರಿಗಳ ವಿರುದ್ಧ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಆರೋಪ ಮಾಡಲಾಯಿತು ಸ್ಥಳೀಯ ವಿದ್ಯುತ್ ಕಾಮಗಾರಿಗಳಲ್ಲಿ ಅಧಿಕಾರಿಗಳೇ ಗುತ್ತಿಗೆ ಪಡೆಯಲು ಮುಂದಾಗಿದ್ದು ಸರ್ಕಾರದ ಅನುಮತಿ ಪಡೆದಿರುವ ಗುತ್ತಿಗೆದಾರರು ಕೆಲಸ ಇಲ್ಲದಂತೆ ಪರದಾಡುವಂತಾಗಿದೆ ವಿದ್ಯುತ್ ಕಾಮಗಾರಿ ಕುರಿತು ಹಲವರಿಗೆ ಬೆಸ್ಕಾಂ ವತಿಯಿಂದ ವಿದ್ಯುತ್ ಗುತ್ತಿಗೆದಾರರನ್ನಾಗಿ ಅನುಮತಿ ನೀಡಲಾಗಿದ್ದು ಕಾರ್ಯನಿರ್ವಹಿಸುವಲ್ಲಿ ಪರಿಣಿತಿ ಜೊತೆಗೆ ಸರ್ಕಾರದ ಅನುಮತಿ ಪಡೆದಿರುವ ಗುತ್ತಿಗೆದಾರರು ಗುತ್ತಿಗೆ ಪಡೆಯಲು ಹರಸಾಹಸ ಪಡಬೇಕಿದೆ ಎಂದು ವಿದ್ಯುತ್ ಗುತ್ತಿಗೆದಾರರು ಆರೋಪಿಸಿದರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಲಕ್ಷ್ಮಿ ಕುಮಾರ್ ಮಾತನಾಡಿ ಅಧಿಕಾರಿಗಳೇ ಗುತ್ತಿಗೆ ಪಡೆಯುವಲ್ಲಿ ಮುಂದಾಗಿದ್ದಾರೆ, ತಾಲ್ಲೂಕಿನ ಬಹುತೇಕ ಗುತ್ತಿಗೆಗಳನ್ನು ಪರಿಣಿತಿ ಹೊಂದಿಲ್ಲದ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಅಧಿಕಾರಿಗಳು ಗುತ್ತಿಗೆದಾರರು ನೀಡುವ ಹಣದ ಆಸೆಗೆ ಬಲಿಯಾಗಿದ್ದಾರೆ. ವಿದ್ಯುತ್ ಇಲಾಖೆಯ ಬಗೆಗಿನ ಗೌರವ ಸಾರ್ವಜನಿಕ ಕ್ಷೇತ್ರದಲ್ಲಿ ಬರಬರುತ್ತಾ ಕ್ಷಿಣಿಸುತ್ತಿದೆ ಎಂದು ತಿಳಿಸದರು
ಸಂಘದ ಕಾರ್ಯಧ್ಯಕ್ಷರಾದ ಶಿವಶಂಕರ್ ಮಾತನಾಡಿ ವಿದ್ಯಾಭ್ಯಾಸ ಮುಗಿಸಿ ಪರಿಣಿತಿ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆದಾರರು ಒಂದು ಕಡೆಯದರೇ ಯಾವುದೇ ಪರಿಣಿತಿ ಪಡೆಯದೇ ಕೇವಲ ಅಧಿಕಾರಿಗಳಿಗೆ ಹಣದ ಆಮಿಷ ಒಡ್ಡಿ ಕಾರ್ಯ ಸಾಧನೆ ಮಾಡುತ್ತಿರುವ ಗುತ್ತಿಗೆದಾರರು ಮತ್ತೊಂದೆಡೆ ಎಂಬಂಥಾಗಿದೆ. ಮನಸೊಇಚ್ಛೆ ಅಧಿಕಾರಿಗಳು ವರ್ತಿಸುತ್ತಿದ್ದೂ ನಿಷ್ಟವಂತ ಗುತ್ತಿಗೆದಾರನಿಗೆ ಬೆಲೆ ಇಲ್ಲದಂಥಗಿದೆ. ಇದು ನಮ್ಮ ಜೀವನದ ಪ್ರಶ್ನೆ ಹೋರಾಟ ಒಂದೇ ನಮಗೆ ಉಳಿದಿರುವ ಮಾರ್ಗ. ಹಾಗಾಗಿ ನಮ್ಮ ವಿದ್ಯುತ್ ಗುತ್ತಿಗೆದಾರರ ಸಂಘ ಸ್ಥಳೀಯ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಹೋರಾಟ ಸಾರಿದ್ದೇವೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿದ್ಯುತ್ ಕುತ್ತಿಗೆದರ ಸಂಘದ ತಾಲ್ಲೂಕು ಅಧ್ಯಕ್ಷರಾದ ಲಕ್ಷ್ಮಿಕುಮಾರ್, ಕಾರ್ಯಧ್ಯಕ್ಷರಾದ ಶಿವಶಂಕರ್, ನಾರಾಯಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು
