ಹಲವು ಪ್ರಯತ್ನಗಳನಂತರ ಮತೊಮ್ಮೆ ನಮ್ಮ ಊರಿಗೆ ನೂತನ ಬಸ್ ಸಂಪರ್ಕ ನೀಡಲಾಗಿದ್ದು. ಜನರ ಮುಖದಲ್ಲಿ ಸಂತೋಷದ ಭಾವನೆ ಕಾಣುತ್ತಿದೆ. ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ಸರ್ಕಾರಿ ಬಸ್ ಎಂಬುವ ಭಾವನೆ ಮರೆತು ತಮ್ಮ ಸ್ವಂತ ವಾಹನದಂತೆ ಭಾವಿಸಿ ಸ್ವಚ್ಛತೆ ಕಾಪಾಡುವಲ್ಲಿ ಮುಂದಾಗಬೇಕಿದೆ ಎಂದು ಕೆಪಿಸಿಸಿ ಸದಸ್ಯ ಎಸ್. ಆರ್. ಮುನಿರಾಜು ತಿಳಿಸಿದರು

ತಾಲ್ಲೂಕಿನ ತೂಬಗೆರೆ ಗ್ರಾಮಕ್ಕೆ ನೂತನವಾಗಿ ಬಿಎಂಟಿಸಿ ಬಸ್ ಸಂಪರ್ಕ ಕಲ್ಪಿಸಿದ್ದು. ಬಸ್ ತನ್ನ ಮೊದಲ ಪ್ರಯಾಣ ಪ್ರಾರಂಭಿಸುವ ಮುನ್ನ ಗ್ರಾಮದ ಪ್ರಸಿದ್ಧ ದೇವಾಲಯದ ಲಕ್ಷ್ಮಿ ವೆಂಕಟೇಶ್ವರ ದೇವರಿಗೆ ಹಾಗೂ ಬಿಎಂಟಿಸಿ ವಾಹನಕ್ಕೆ ಎಸ್ ಆರ್ ಮುನಿರಾಜು ನೇತೃತ್ವದಲ್ಲಿ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ವಿಶೇಷ ಪೂಜೆ ಸಲ್ಲಿಸಿ ಸುದ್ದಿಗರರೊಂದಿಗೆ ಮಾತನಾಡಿದ ಅವರು ನಮ್ಮ ತೂಬಗೆರೆ ಗ್ರಾಮಕ್ಕೆ ಬಸ್ಸಿನ ಅವಶ್ಯಕತೆ ತುಂಬಾ ಇದ್ದು ನಮ್ಮೆಲ್ಲ ಮುಖಂಡರ ಸತತ ಪ್ರಯತ್ನದಿಂದಾಗಿ ಇಂದು ನಮ್ಮ ಗ್ರಾಮದಿಂದ ಹೆಬ್ಬಾಳದ ಮಾರ್ಗವಾಗಿ ಚಲಿಸುವ ಬಿಎಂಟಿಸಿ ವಾಹನ ಲಭಿಸಿದೆ. ಗ್ರಾಮಸ್ಥರು ಈ ಅವಕಾಶವನ್ನು ಸದ್ಭಾಳಕ್ಕೆ ಮಾಡಿಕೊಳ್ಳಬೇಕು. ನಮ್ಮ ಗ್ರಾಮಕ್ಕೆ ವಾಹನ ನೀಡಿರುವ ಬಿಎಂಟಿಸಿ ಸಂಸ್ಥೆಗೆ, ಅಧಿಕಾರಿಗಳಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು

ಸ್ಥಳೀಯ ಮುಖಂಡರಾದ ಅರವಿಂದ್ ಮಾತನಾಡಿ ಬಹಳ ವರ್ಷಗಳಿಂದ ತೂಬಗೆರೆ ಗ್ರಾಮಸ್ಥರ ಬಹು ಬೇಡಿಕೆ ಇಂದು ಈಡೇರಿದೆ. ಸ್ಥಳೀಯವಾಗಿ ಬಸ್ ವಾಹನದ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನಾನುಕೂಲವಾಗಿತ್ತು. ಶಾಲಾ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಮುಂಜಾನೆ 7:00ಗೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಆಟೋಗಳ ಮೇಲೆ ಅವಲಂಬಿತರಾಗಿದ್ದರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಕೆಎಚ್ ಮುನಿಯಪ್ಪ ರವರ ಬಳಿ ನಮ್ಮ ನಿವೇದನೆ ಹೇಳಿಕೊಂಡಾಗ ಈ ಬಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ತೂಬಗೆರೆ ಗ್ರಾಮ ಈಗ ಹೋಬಳಿಯ ಮುಖ್ಯ ಕೇಂದ್ರವಾಗಿದ್ದು ಜನಸಂಖ್ಯೆ ಕೂಡ ಬೆಳೆದಿದೆ. ಸ್ಥಳೀಯ ಗ್ರಾಮಸ್ಥರ ಅನುಕೂಲಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ ಸ್ಥಳೀಯ ಮುಖಂಡರ ಶ್ರಮಕ್ಕೆ ಹಾಗೂ ಸ್ಥಳೀಯರ ಬೇಡಿಕೆಗಳಿಗೆ ಸ್ಪಂದಿಸಿದ ಸಾರಿಗೆ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ತಿಳಿಸಿದರು
ಕಾಂಗ್ರೆಸ್ ಪಕ್ಷದ ಮುಖಂಡರಾದ ರಂಗಪ್ಪ ಮಾತನಾಡಿ ಸ್ಥಳೀಯ ಶಾಸಕರು ಆಶ್ವಾಸನೆ ಕೊಟ್ಟಂತೆ ನೆಡೆದಿದ್ದಾರೆ ಗ್ರಾಮದ ಜನತೆಗೆ ಬಸ್ ಕಲ್ಪಿಸುವ ಮೂಲಕ ಗ್ರಾಮಸ್ಥರಿಗೆ ಮತ್ತಷ್ಟು ಅನುಕೂಲಮಾಡಿಕೊಟ್ಟಿದ್ದಾರೆ. ಗ್ರಾಮಕ್ಕೆ ನೂತನ ಬಸ್ ಕಲ್ಪಿಸಲು ಸ್ಥಳೀಯ ಮುಖಂಡರ ಪ್ರಯತ್ನ ಫಲ ಕೊಟ್ಟಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು

ಈ ಹಿಂದೆ ನಮ್ಮ ಗ್ರಾಮಕ್ಕೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ವಾಹನವನ್ನು ಪ್ರಯಾಣಿಕರ ಕೊರತೆಯಿಂದಾಗಿ ನಿಲ್ಲಿಸಲಾಗಿತ್ತು ಆದರೆ ಈಗ ತೂಬಗೆರೆ ಗ್ರಾಮದ ಗ್ರಾಮಸ್ಥರ ಸಂಖ್ಯೆ 5000 ಕ್ಕೂ ಹೆಚ್ಚಿದ್ದು. ಸ್ಥಳೀಯವಾಗಿ ಒಂದು ಬಸ್ಸಿನ ಅವಶ್ಯಕತೆ ತುಂಬಾ ಇತ್ತು. ಗ್ರಾಮಕ್ಕೆ ನೂತನ ಬಸ್ ವ್ಯವಸ್ಥೆ ಕಲ್ಪಿಸಿದ ಶಾಸಕರಿಗೆ ಹಾಗೂ ಎಲ್ಲಾ ಮುಖಂಡರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸ್ಥಳೀಯ ಮುಖಂಡರಾದ ರವಿ ಸಿದ್ದಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ತೂಬಗೆರೆ ಪಂಚಾಯಿತಿ ಅಧ್ಯಕ್ಷರಾದ ನಂಜಮ್ಮ ಬಿ ನರಸಿಂಹಮೂರ್ತಿ, ಪಂಚಾಯಿತಿ ಮಾಜಿ ಸದಸ್ಯರಾದ ವೆಂಕಟೇಶ್ ಟಿ ವಿ, ಕಿಟ್ಟಿ , ಮಾಜಿ ಯೋಧರಾದ ರಾಘವೇಂದ್ರ, ಅನಂತ್ ರಾಜಗೋಪಾಲ, ಮುನಿಕೃಷ್ಣಪ್ಪ ಸೇರಿದಂತೆ ತೂಬಗೆರೆ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು
