ಮಡಿವಾಳ ಮಾಚಿ ದೇವರ ಜಯಂತೋತ್ಸವ : ಸಮುದಾಯ ಮುಖಂಡರಿಂದ ಹಲವು ಬೇಡಿಕೆ ಈಡೇರಿಸುವಂತೆ ಮನವಿ

Spread the love

ದೊಡ್ಡಬಳ್ಳಾಪುರ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಮಡಿವಾಳ ಮಾಚಿ ದೇವರ ಜಯಂತೋತ್ಸವ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಡಿವಾಳ ಸಮುದಾಯದ ಹಲವು ಬೇಡಿಕೆಗಳನ್ನು ತಾಲ್ಲೂಕು ದಂಡಧಿಕಾರಿಗಳ ಸಮ್ಮುಖದಲ್ಲಿ ವ್ಯಕ್ತಪಡಿಸಿದ್ದು. ತಾಲ್ಲೂಕು ಆಡಳಿತ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಹೆಚ್. ಆರ್. ಮುನಿಶ್ಯಾಮಯ್ಯ ತಿಳಿಸಿದರು

ದೊಡ್ಡಬಳ್ಳಾಪುರ ನಗರ ಭಾಗದ ತಾಲ್ಲೂಕು ಕಚೇರಿ ವೃತ್ತದಲ್ಲಿ ಮಡಿವಾಳ ಮಾಚಿ ದೇವರ ಜಯಂತೋತ್ಸವದ ಅಂಗವಾಗಿ ಸಮುದಾಯದ ಮುಖಂಡರು ಹಾಗೂ ಸದಸ್ಯರ ನೆರವಿಂದ ಅರವಂಟಿಕೆ ಹಾಗೂ ಪ್ರಸಾದ ವಿನಿಯೋಗ ಆಯೋಜನೆ ಕಾರ್ಯಕ್ರಮದಲ್ಲಿ ಮಾಚಿ ದೇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ನಮ್ಮ ಸಮುದಾಯಕ್ಕೆ ಎರಡು ಎಕ್ಕರೆ ಭೂಮಿಯನ್ನು ಮಂಜೂರು ಮಾಡಲು ಕೋರಿದ್ದೇವೆ, ಶ್ರೀ ಶರಣು ಮಾಚಿದೇವರ ಹೆಸರನ್ನು ರಸ್ತೆ /ವೃತ್ತ /ಉಧ್ಯಾನವನಕ್ಕೆ ನಾಮಕರಣ ಮಾಡಬೇಕಾಗಿ, ಪ್ರತಿ ಫೆಬ್ರವರಿ 1ರಂದು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಮಾಚಿ ದೇವರ ಜಯಂತಿಯನ್ನು ಆಚರಿಸುವಂತೆ, ಸಮುದಾಯದ ನಿವೇಶನ ರಹಿತರಿಗೆ ನಿವೇಶನ ಮಂಜೂರಾತಿ ಸೇರಿದಂತೆ ಹಲವು ಬೇಡಿಕೆಗಳನ್ನು ತಾಲ್ಲೂಕು ದಂಡಧಿಕಾರಿಗಳ ಸಮ್ಮುಖದಲ್ಲಿ ತಿಳಿಸಲಾಗಿದ್ದು ಅಧಿಕಾರಿಗಳಿಂದ ಸಕಾರತ್ಮಕ ಸ್ಪಂದನೆ ದೊರೆತಿದೆ ಮುಂದೆ ಸಮುದಾಯದ ಬೆಳವಣಿಗೆಗೆ ಮತ್ತಷ್ಟು ಯೋಜನೆಗಳನ್ನು ರೂಪಿಸುವುದರ ಮೂಲಕ ಶ್ರಮಿಸಲಾಗುವುದು ಎಂದು ತಿಳಿಸಿದರು

 

ಸಂಘದ ಖಜಾಂಜಿ ಶ್ರೀನಿವಾಸ್ ಮಾತನಾಡಿ ಸಮುದಾಯದ ಮುಖಂಡರು ಹಾಗೂ ಎಲ್ಲಾ ಸದಸ್ಯರನ್ನು ಒಳಗೊಂಡಂತೆ ಸರ್ವರೂ ಇಂದು ಮಡಿವಾಳ ಮಾಚಿ ದೇವರ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ಧುರಿಯಾಗಿ ಆಚರಿಸಿದ್ದೇವೆ. ಸಾರ್ವಜನಿಕರಿಗೆ ಪಾನಕ ಮಜ್ಜಿಗೆ ಸಹಿತ ಪ್ರಸಾದ ವಿನಿಯೋಗ ಮಾಡಲಾಗಿದೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *