ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾ ಫಲಿತಾಂಶ ಪ್ರಕಟ : ನೂತನ ಜಿಲ್ಲಾಧ್ಯಕ್ಷರಾಗಿ ಜಿ.ಶ್ರೀನಿವಾಸ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆ‌ರ್.ರಮೇಶ್ ಆಯ್ಕೆ

Spread the love

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಜಿ.ಶ್ರೀನಿವಾಸ್ ಹಾಗೂಪ್ರಧಾನ ಕಾರ್ಯದರ್ಶಿಯಾಗಿ ಆ‌ರ್.ರಮೇಶ್ ಆಯ್ಕೆಯಾಗಿದ್ದಾರೆ.

 

ದೇವನಹಳ್ಳಿಯಲ್ಲಿರುವ ಜಿಲ್ಲಾ ಪತ್ರಕರ್ತರ ಭವನದಲ್ಲಿ ನ 09 ರಂದು ನಡೆದಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ (Working Journalists Association elections) ಫಲಿತಾಂಶ ಪ್ರಕಟಿಸಲಾಗಿದೆ

 

ಸಂಘದ ಚುನಾವಣೆಯಲ್ಲಿ ಸುಗ್ಗರಾಜು ತಂಡ ಹಾಗೂ ಆ‌ರ್.ರಮೇಶ್‌ ತಂಡ ಸ್ಪರ್ಧಿಸಿದ್ದು. ನೂತನ ಅಧ್ಯಕ್ಷರಾಗಿ ಜಿ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಯ ಆ‌ರ್.ರಮೇಶ್, ಖಜಾಂಚಿಯಾಗಿ ಜೆ.ಮುನಿರಾಜು, ರಾಜ್ಯ ಸಮಿತಿ ಸದಸ್ಯರಾಗಿ ಸೂಲಿಬೆಲೆ ಮಂಜುನಾಥ್, ಉಪಾಧ್ಯಕ್ಷರಾಗಿ ರಫೀ ಉಲ್ಲಾ, ಮುನಿ ವೀರಣ್ಣ, ಕೃಷ್ಣ ನಾಯಕ್, ಸಹಕಾರ್ಯದರ್ಶಿಗಳಾಗಿ ಸುರೇಶ್, ಎಂ.ಆ‌ರ್. ನಾಗರಾಜ್, ಆರ್. ಸತೀಶ್ ಆಯ್ಕೆಯಾಗಿದ್ದಾರೆ.

 

15 ಮಂದಿ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶ್ರೀನಿವಾಸ್‌ ಗಾಂಧಿ, ಜಗದೀಶ ವಿ, ಜಯಲಕ್ಷ್ಮಿ, ಸುನೀಲ್ ವಿ.,ಗಂಗರಾಜ ಶಿರವಾರ, ಗೋಪಾಲಕೃಷ್ಣ, ಎನ್‌.ಸಿ. ಮುನಿವೆಂಕಟರಮಣ, ವಿ.ಕೃಷ್ಣಮೂರ್ತಿ, ಅಬ್ದುಲ್ ಮೊಯಿದ್, ಚಂದ್ರಪ್ಪ, ಎಸ್.ರಾಜಗೋಪಾಲ್‌, ಗೋಪಿನಾಥ್, ಪ್ರಕಾಶ್. ಸಿ., ಎಂ.ಆರ್.ಮಂಜುನಾಥ್, ರಂಗನಾಥ್. ಆರ್ ವಿಜೇತರಾಗಿದ್ದಾರೆ.

 

 

Leave a Reply

Your email address will not be published. Required fields are marked *

© 2026 Malnad TV. All Rights Reserved.