ದೊಡ್ಡಬಳ್ಳಾಪುರ : ತಾಲ್ಲೂಕಿನ ದೊಡ್ಡತುಮಕೂರು ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ರೇಣುಕಾದೇವಿ ಎಲ್ಲಮ್ಮ ದೇವಿಯ ಹೂವಿನ ಕರಗಮಹೋತ್ಸವ ಬುದ್ಧ ಪೌರ್ಣಿಮೆ ಯಂದು ವಿಜೃಂಭಣೆ ಯಿಂದ ನೆಡೆಯಿತು.
Ad
ಮುಂಜಾನೆಯಿಂದಲೇ ಗ್ರಾಮದ ದೇವರುಗಳಾದ ಆವಲ ಕೊಂಡರಾಯ ಸ್ವಾಮಿ, ಮುತ್ತುರಾಯಸ್ವಾಮಿ, ಚನ್ನಕೇಶವಸ್ವಾಮಿ, ಆಂಜನೇಯ ಸ್ವಾಮಿಗಳಿಗೆ ಹೂವಿನ ಆರತಿ,ಎಲ್ಲಮ್ಮ ದೇವಿ ಸೇರಿದಂತೆ ಹಲವು ಉತ್ಸವ ಮೂರ್ತಿ ಗಳ ಮೆರವಣಿಗೆ ಮಾಡುವ ಮೂಲಕ ಗ್ರಾಮಸ್ಥರು ಸಂಭ್ರಮಿಸಿದರು.

ಈ ವಿಶೇಷ ಕಾರ್ಯಕ್ರಮದಲ್ಲಿ ತಾಲೂಕು ಕಲಾವಿದ ಸಂಘದ ವತಿಯಿಂದ ಸಾಮಾಜಿಕ ನಾಟಕ, ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನೆಡೆದವು ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರಿಗೆ ಗ್ರಾಮದ ಪ್ರಮುಖ ಬೀದಿ ಗಳಲ್ಲಿ ರೇಣುಕಾದೇವಿ ಎಲ್ಲಮ್ಮ ದೇವಿಯ ಹೂವಿನ ಕರಗ ಸಂಚರಿಸಿತು.
ಬೆಳಿಗ್ಗೆ 8 ಗಂಟೆ ಗೆ ಗ್ರಾಮದ ಗ್ರಾಮದ ಸರ್ವ ಕುಟುಂಬ ಗಳಿಂದ ವರ್ಣರಂಜಿತ ಪುಷ್ಪ ಗಳ ದೀಪಾರತಿ ನೆಡೆಯಿತು, ಮಹಾಮಂಗಳಾರತಿಗೆ ಆಗಮಿಸಿದ ಸರ್ವ ಮಹಿಳಾ ಭಕ್ತರಿಗೆ ಭಾಗಿನ ನೀಡಿ ಗೌರವಿಸಲಾಯಿತು.
ಎರಡು ದಿನಗಳ ಕಾಲ ದೇವಾಲಯಕ್ಕೆ ಬಂದ ಭಕ್ತದಿಗಳಿಗೆ ಅನ್ನಸಂತರ್ಪಣೆ ನೆಡಿಯಿತು, ಕಾರ್ಯಕ್ರಮಕ್ಕೆ ಗ್ರಾಮದ ಭಕ್ತರು ಪಕ್ಷತೀತವಾಗಿ ಪಾಲ್ಗೊಂಡು ಕರಗ ಮಹೋತ್ಸವ ಆಚರಣೆ ಮಾಡಿದ್ದು ವಿಶೇಷವಾಗಿತ್ತು
ಈ ವೇಳೆ ಸ್ಥಳೀಯ ಮುಖಂಡರಾದ ಟಿ ಜಿ ಮಂಜುನಾಥ್ (LIC) ಮಾತನಾಡಿ 1977 ರಿಂದ ಸತತವಾಗಿ 3 ವರ್ಷಕೊಮ್ಮೆ ಗ್ರಾಮ ದೇವತೆ ಶ್ರೀ ರೇಣುಕಾದೇವಿ ಎಲ್ಲಮ್ಮ ದೇವಿಯ ಹೂವಿನ ಕರಗಮಹೋತ್ಸವ ನಡೆಸುವ ವಾಡಿಕೆ ನಮ್ಮ ಗ್ರಾಮದಲ್ಲಿ ಇದೆ ಅದರಂತೆ ಈ ವರ್ಷವೂ ಅತ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದ್ದು ಈ ಬಾರಿ ನಿವೃತ್ತ ಪೊಲೀಸ್ ಅಧಿಕಾರಿ ಆರ್ ನಾಗರಾಜು ರವರು ಹೂವಿನ ಕರಗ ಹೊರುತ್ತಿವುದು ವಿಶೇಷ ಎಂದರು.
