ದೊಡ್ಡಬಳ್ಳಾಪುರ : ನಗರದ ವಾರ್ಡ್ಲ್ಲೂ (ಇ)ಖಾತೆ ಆಂದೋಲನ ಮತ್ತು ಸ್ವಚ್ಛತೆ, ನೈರ್ಮಲ್ಯ ಕಾಪಾಡುವಂತೆ ಹಾಗೂ ನಗರದ ವಾಣಿಜ್ಯ ಮಳಿಗೆಗಳ ಪರವಾನಿಗೆ ಕೊಡುವಾಗ ಕನ್ನಡ ನಾಮಫಲಕ ಕಡ್ಡಾಯ ಮಾಡುವಂತೆ ಕೋರಿ ನಗರಸಭಾ ಪೌರಯುಕ್ತರಿಗೆ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಕುರಿತು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಎ. ನಂಜಪ್ಪ ಮಾತನಾಡಿ ನಗರದಲ್ಲಿ ಪ್ರತಿ ವಾಣಿಜ್ಯ ಮಳಿಗೆಗಳು ಹಾಗೂ ಅಂಗಡಿಗಳು ವ್ಯಾಪಾರ ಮಾಡಲು ದೃಢೀಕರಣ ಕೊಡುವ ನಗರಸಭೆ ಅದರಲ್ಲಿ ಶೇಕಡಾ 60%ರಷ್ಟು ಕನ್ನಡ ಅಕ್ಷರದಲ್ಲಿ ನಾಮಫಲಕ ಕಡ್ಡಾಯ ಇರಬೇಕೆಂದು ತಿಳಿಸಬೇಕಿದೆ ಹಾಗೂ ನಗರಸಭಾ ಕಸದ ಗಾಡಿಗಳ ಮತ್ತು ಅಧಿಕಾರಿಗಳ ಮುಖೇನ ವ್ಯಾಪಾರಸ್ಥರಿಗೆ ಮನವರಿಕೆ ಮಾಡಿವ ಕಾರ್ಯಕ್ಕೆ ನಗರಸಭಾ ಅಧಿಕಾರಿಗಳು ಮುಂದಾಗವಂತೆ ಮನವಿ ಮಾಡಿದ್ದೇವೆ.ಜೊತೆಗೆ ಚರಂಡಿಗಳನ್ನು ಶುಚಿ ಮಾಡುವಾಗ ಕನಿಷ್ಠ 10 ದಿನಕ್ಕೊಮ್ಮೆಯಾದರೂ ಒಮ್ಮೆ ಔಷಧಿ ಸಿಂಪಡಣೆಯನ್ನು ಮಾಡಬೇಕು ಕಾರಣ ಇತ್ತೀಚೆಗೆ ಹರಡುತ್ತಿರುವ ಡೆಂಗ್ಯೂ ಹಾಗೂ ವೈರಲ್ ಫೀವರ್ ತಡೆಯುವ ಪ್ರಯತ್ನ ನೆಡೆಸಬೇಕಿದೆ ಒಳಚರಂಡಿಗಳಲ್ಲಿ ನೀರು ನಿಂತಿರುವ ಕಾರಣಗಳಿಂದ ಸಣ್ಣ ಮಕ್ಕಳು ಹಾಗೂ ಹಿರಿಯರು ನಾಗರೀಕರಿಗೆ ತೊಂದರೆ ಆಗುತ್ತಿರುವುದರಿಂದ ನಮ್ಮ ನಗರ ಬೀದಿ ದೀಪಗಳ ಬಗ್ಗೆ ಗಮನಹರಿಸಬೇಕಿದೆ ಎಂದರು.
ಈ ಕುರಿತು ನಗರಸಭಾ ಪೌರಯುಕ್ತರು ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಇಲ್ಲವಾದಲ್ಲಿ ನಗರಸಭಾ ಕಛೇರಿ ಮುಂದೆಯೇ “ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ”ಯ ಎಲ್ಲಾ ಕನ್ನಡ ಬಂಧುಗಳು ಬಂದು ಸತ್ಯಾಗ್ರಹವನ್ನು ಹಮ್ಮಿಕೊಳ್ಳಬೇಕಾಗುವುದು ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ನಯಾಜ್ ಖಾನ್ ಬಿ, ಸೋಮರಾಜು ಗಂಗರಾಜು, ಅಜಯ್ ಕುಮಾರ್ ಜಿಲ್ಲಾಧ್ಯಕ್ಷರಾದ ಮಂಜುನಾಥ,ಯುವ ಜಿಲ್ಲಾಧ್ಯಕ್ಷರಾದ ಪಣೀಶ್,ಮಹಿಳಾ ಜಿಲ್ಲಾಧ್ಯಕ್ಷರಾದ ಶಶಿಕಲಾ. ಕಾರ್ಯದರ್ಶಿ ರೇಷ್ಮಾ ಖಾನಂ ತಾಲೂಕು ಅಧ್ಯಕ್ಷರಾದ ಹರಿ ಕುಮಾರ್. ಚಂದ್ರಶೇಖರಯ್ಯ. ನವೀನ್ ಕುಮಾರ್. ವಿದ್ಯಾಧರ. ನಗರ ಅಧ್ಯಕ್ಷ ಚರಣ್ ಕುಮಾರ್ ಇನ್ನು ಮುಂತಾದವರು ಭಾಗವಹಿಸಿದ್ದರು
