ಬೆಂಗಳೂರು : ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಯ ಜಾಮೀನನ್ನು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗುರುವಾರ (ಆ.14) ರದ್ದು ಮಾಡಿದೆ.
ಈ ಹಿಂದೆ ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದ್ದ ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಜೈಲಿನಲ್ಲಿ ಕೊಲೆ ಆರೋಪಿಗೆ ವಿಶೇಷ ಆತಿಥ್ಯ ನೀಡಿದ್ದ ವಿಚಾರಕ್ಕೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು. ನ್ಯಾಯಮೂರ್ತಿ ಜೆ ಪರ್ದಿವಾಲಾ, ‘ನೀವು ಯಾರಿಗಾದರೂ ವಿಐಪಿ ಅತಿಥ್ಯ ನೀಡಲಾಗುತ್ತಿರುವ ಬಗ್ಗೆ ಛಾಯಾಚಿತ್ರಗಳು ಅಥವಾ ವೀಡಿಯೊವನ್ನು ನಾವು ನೋಡಿದರೆ, ಮೊದಲು ನಿಮ್ಮನ್ನು ಸಮನ್ಸ್ ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ.ಈಗ ಜಾಮೀನು ರದ್ದು ಮಾಡಿದ ಬೆನ್ನಲ್ಲಿಯೇ ದರ್ಶನ್ ಈಗ ಬಳ್ಳಾರಿ ಜೈಲಿಗೆ ಪುನಂ ವಾಪಾಸ್ ಹೋಗಬೇಕಾಗಿದೆ.
