ಉರ್ದು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ : ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

Spread the love

ದೊಡ್ಡಬಳ್ಳಾಪುರ :ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಇಸ್ಲಾಂಪುರದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 68ನೇ ಕನ್ನಡ ರಾಜ್ಯೋತ್ಸವದ ಆಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರರು ಹಾಗು ಮುಸ್ಲಿಂ ಮುಖಂಡರಾದ ಡಿ ಕೆ ಬಾಬು ರವರ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು

 

 

ಹಿರಿಯ ಕನ್ನಡ ಪರ ಹೋರಾಟಗಾರರಾದ ಸಂಜೀವ್ ನಾಯಕ್ ಮಾತನಾಡಿ ಕನ್ನಡ ಕೇವಲ ಒಂದು ಭಾಷೆಯಲ್ಲ ಅದು ಕನ್ನಡ ನಾಡಿನ ಜೀವನಾಡಿ… ಜಾತಿ ಧರ್ಮಗಳ ಬೇಧಭಾವ ಇಲ್ಲದೆ ಭಾಷೆಯ ಕಲಿಕೆ ಜೊತೆಗೆ ಬಳಸುವಿಕೆಯಾಗಬೇಕು ಉರ್ದು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು

 

ಕನ್ನಡ ಹೋರಾಟಗಾರರಾದ ಮುನಿಪಾಪಯ್ಯ ಮಾತನಾಡಿ ಕನ್ನಡಿಗರ ಹೋರಾಟವೇ ನಮ್ಮ ಕನ್ನಡ ಭಾಷೆಯ ಉಳಿವಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು ..ಭಾಷೆಯ ಶಕ್ತಿ ಸಾಮರ್ಥ್ಯ ಅರಿತರೆ ಭಾಷೆಯ ಬಗ್ಗೆ ಅಭಿಮಾನ ಹೆಚ್ಚುತ್ತದೆ ಮನೆಯಲ್ಲಿ ಸಾವಿರ ಭಾಷೆ ಮಾತನಾಡಿ ಆದರೆ ಸಮಾಜದಲ್ಲಿ ಕನ್ನಡ ಮಾತನಾಡಿ ..ಉರ್ದು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಸಂತೋಷ ವಿಷಯ ನಮ್ಮ ಕನ್ನಡ ಬೆಳೆಯಲಿ ಉಳಿಯಲಿ ಎಂದು ಆಶಿಸಿದರು

 

 

ಮುಖ್ಯಶಿಕ್ಷಕರಾದ ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ ಕನ್ನಡ ಭಾಷೆಯನ್ನು ಕಲಿಯುವುದು ಎಷ್ಟು ಮುಖ್ಯವೋ ಬಳಸುವುದು ಅಷ್ಟೇ ಮುಖ್ಯ.. ಕನ್ನಡ ರಾಜ್ಯೋತ್ಸವ ಪ್ರತಿ ಮನೆ ಮನಗಳಲ್ಲಿ ಪ್ರತಿನಿತ್ಯ ಆಚರಿಸುವ ಹಬ್ಬವಾಗಬೇಕಿದೆ ಮುಖ್ಯವಾಗಿ ಶಾಲೆಗಳಲ್ಲಿ ಮಕ್ಕಳ ಮನಸ್ಸಿನಲ್ಲಿ ಕನ್ನಡ ಭಾಷೆಯ ಕುರಿತು ಒಳ್ಳೆಯ ವಿಚಾರಧಾರೆಗಳನ್ನು ನೀಡಬೇಕಿದೆ ಕನ್ನಡ ಭಾಷೆಯ ಉಳಿವು ನಮ್ಮೆಲ್ಲರ ಉಳಿವು ಎಂದು ತಿಳಿಸಿದರು

 

ಕಾರ್ಯಕ್ರಮದ ಆಯೋಜಕರಾದ ಡಿ ಕೆ ಬಾಬು ಮಾತನಾಡಿ ಸ್ನೇಹಿತರ ನೆರವಿನಿಂದ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಗಿದೆ ಕನ್ನಡ ಭಾಷೆ ಕುರಿತು ಅರಿವು ಮೂಡಿಸುವುದು ನಮ್ಮ ಕರ್ತವ್ಯ ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬಂದರೆ ಸಾಕು ಭಾಷೆಯು ತಾನಾಗಿಯೇ ಅಭಿವೃದ್ದಿ ಹೊಂದುತ್ತದೆ ಕನ್ನಡ ಭಾಷೆಗೆ 2000ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ ನಮ್ಮ ಭಾಷೆ ನಮ್ಮ ಹೆಮ್ಮೆ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದರು

 

ಕಾರ್ಯಕ್ರಮದಲ್ಲಿ ಪುಟ್ಟನಂಜಪ್ಪ, ಸಿ ಹೆಚ್ ರಾಮಚಂದ್ರಪ್ಪ, ದರ್ಗಾ ಮಸೀದಿ ಹಿಮಾಮ್ ಸಾಬ್, ಚಂದ್ ಸಾಬ್, ಜಬಿ, ಚಂದ್ ಶಾಫಿ, ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

© 2026 Malnad TV. All Rights Reserved.