*ದೊಡ್ಡಬಳ್ಳಾಪುರ l ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾರ್ಷಿಕ ಕ್ರಿಕೆಟ್ ಕ್ರೀಡಾಕೂಟದ ಸಂಭ್ರಮ*

Spread the love

ದೊಡ್ಡಬಳ್ಳಾಪುರ : ನಗರದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾರ್ಷಿಕ ಕ್ರಿಕೆಟ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ನಿಲಯದ ಮುಖ್ಯಸ್ಥರಾದ ರಾಧಾಮಣಿ ಉದ್ಘಾಟಿಸಿ, ಈ ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುವುದಲ್ಲದೆ, ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವಂತಹ ಸಾಮರ್ಥ್ಯವನ್ನು ತೋರಿಸಲು ಇದು ಸೂಕ್ತ ವೇದಿಕೆಯಾಗಿದೆ. ಆಟದಲ್ಲಿ ಸೋಲು ಗೆಲುವುಗಳು ಸಾಮಾನ್ಯ. ಸೋಲನ್ನು ಗೆಲುವಿನ ರೀತಿ ಒಪ್ಪಿಕೊಳ್ಳಬೇಕು ಆಗ ಮಾತ್ರ ಅವರು ಮುಂದೆ ಜಯಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

 

ಸಮಾಜ ಕಲ್ಯಾಣ ಇಲಾಖೆಯ ಓಬಳೇಶ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಈ ರೀತಿಯಾದ ಕ್ರೀಡೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮವನ್ನು ಕಲಿಯಬಹುದು ಎಂದರು.

 

ನಿಲಯದ ಜಿ.ಸಿ.ಮುನಿಕೃಷ್ಣ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವವನ್ನು ತುಂಬಿಸಿ, ನಾಯಕತ್ವ ಗುಣವನ್ನು ಬೆಳೆಸುತ್ತದೆ ಮತ್ತು ಮನಸ್ಸಿಗೆ ಮನರಂಜನೆಯನ್ನು ನೀಡುತ್ತದೆ ಎಂದರು.

 

ಪಂದ್ಯದಲ್ಲಿ “ಸ್ಟಾರ್ ಬಾಯ್ಸ್” ತಂಡವು ವಿಜೇತವಾಯಿತು ಮತ್ತು “ಹಂಟರ್ಸ್” ತಂಡ ರನ್ನರ್ ಆಫ್ ಆಯಿತು. ಅತ್ಯುನ್ನತ ಬ್ಯಾಟರ್ ಹೇಮಂತ್, ಶಶಿಕಿರಣ್ ಮತ್ತು ಅತ್ಯುತ್ತಮ ಬಾಲರ್ ಪವನ್ ಪ್ರಶಸ್ತಿಯನ್ನು ಪಡೆದರು.

ಇಲಾಖೆಯ ಸಂದೀಪ್,‌ ಶಾಂತಮ್ಮ, ಮುನಿ ರತ್ನಮ, ಮಂಜಮ್ಮ, ನೇತ್ರಾ, ಚಂದ್ರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ – ಹೇಮಂತ್ ಕೋಲಾರ, ತೃತೀಯ ಬಿ.ಎಸ್ಸಿ ವಿದ್ಯಾರ್ಥಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೊಡ್ಡಬಳ್ಳಾಪುರ

Leave a Reply

Your email address will not be published. Required fields are marked *

© 2026 Malnad TV. All Rights Reserved.