ದೊಡ್ಡಬಳ್ಳಾಪುರ : ಆಹಾರ ವಿತರಣೆ ಮಾಡುವ ಮೂಲಕ ಇದು ನನ್ನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಸಾರ್ವಜನಿಕರು ತಮ್ಮ ವಿಶೇಷ ದಿನಗಳನ್ನು ದರ್ಗಾಜೋಗಿಹಳ್ಳಿಯಲ್ಲಿ ನಡೆಯುವ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿರಾಶ್ರಿತ ಆಹಾರ ವಿತರಣೆ ಮಾಡುವ ಮೂಲಕ ಸಂಭ್ರಮಿಸಿ ಎಂದು ಸಮಾಜ ಸೇವಕ ಹಾಗೂ ಯುವ ಬಲಿಜ ಸಂಘದ ಅಧ್ಯಕ್ಷ ಶ್ರೀನಾಥ್ ತಿಳಿಸಿದರು.

ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 2115 ನೇ ದಿನದ ನಿರಂತರ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹಸಿದವರಿಗೆ ಆಹಾರ ವಿತರಣೆ, ಶಾಲಾ ಮಕ್ಕಳಿಗೆ ಅಗತ್ಯ ಪರಿಕರ ಹಾಗೂ ವಯೋವೃದ್ಧರಿಗೆ ಬಟ್ಟೆ ವಿತರಣೆ ಮಾಡುವ ಮೂಲಕ ನಮ್ಮ ಕೈಲಾದ ಸೇವೆಯನ್ನು ಮಾಡುವ ಮೂಲಕ ವಿಶೇಷ ದಿನವನ್ನು ಸಂಭ್ರಮಿಸಿದ್ದೇವೆ. ಇಂದಿನ ಈ ಕಾರ್ಯಕ್ರಮ ಅತ್ಯಂತ ಸಂತೋಷ ತಂದಿದೆ ಎಂದರು.
Ad
ಕರ್ನಾಟಕ ರಾಜ್ಯ ಛಾಯಾಗ್ರಾಹಕ ಸಂಘದ ನಿರ್ದೇಶಕ ರವಿ ಕುಮಾರ್ ಬಿಡಿಕೆರೆ ಮಾತನಾಡಿ ಇಂದು ನಮ್ಮ ಆತ್ಮೀಯ ಗೆಳೆಯರಾದ ಶ್ರೀನಾಥ್ ಅವರ ಹುಟ್ಟು ಹಬ್ಬವನ್ನು ವಿಶೇಷವಾಗಿ ಅನ್ನದಾನ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತೇವೆ , ಕಳೆದ 2115 ದಿನಗಳಿಂದ ನಿತ್ಯ ನಿರಂತರ ಅನ್ನದಾನ ಮಾಡಿಕೊಂಡು ಬರುತ್ತಿರುವ ಮಲ್ಲೇಶ್ ಮತ್ತು ತಂಡಕ್ಕೆ ಶುಭವಾಗಲಿ. ನಿರಂತರ ಅನ್ನದಾಸೋಹ ಸಮಿತಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.

ಸಮಾಜ ಸೇವಕರಾದ ಚನ್ನಕೃಷ್ಣ ಮಾತನಾಡಿ ಆತ್ಮೀಯ ಗೆಳೆಯರು ಸಮಾಜಸೇವಕರು ಆದ ಶ್ರೀನಾಥ್ ರವರ ಹುಟ್ಟುಹಬ್ಬವನ್ನು ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ನಿರ್ಗತಿಕ ಕಡುಬದವರಿಗೆ ಆಹಾರ, ವಯೋವೃದ್ದರಿಗೆ ಹಾಗೂ ಶಾಲಾ ಮಕ್ಕಳಿಗೆ ಅಗತ್ಯ ಪರಿಕರ ವಿತರಣೆ ಮಾಡುವ ಮೂಲಕ ಆಚರಿಸಿದ್ದೇವೆ. ಇಂತಹ ಅರ್ಥಪೂರ್ಣ ಆಚರಣೆ ಸದಾ ನೆಡೆಯಲಿ ಇಂತಹ ಮಹತ್ಕಾರ್ಯವನ್ನು ಮಾಡಿಕೊಂಡು ಬರುತ್ತಿರುವ ಮಲ್ಲೇಶ್ ಮತ್ತು ತಂಡಕ್ಕೆ ಶುಭವಾಗಲಿ ಎಂದರು.
Ad
ಕಾರ್ಯಕ್ರಮದ ಆಯೋಜಕ ಅನ್ನದಾಸೋಹಿ ಮಲ್ಲೇಶ್ ಮಾತನಾಡಿ ದಾನಿಗಳ ನೆರವಿನಿಂದ ಕಳೆದ 2115 ದಿನಗಳಿಂದ ನಿರಂತರವಾಗಿ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಇಂದು ಯುವ ಬಲಿಜ ಸಂಘದ ಅಧ್ಯಕ್ಷರು, ಸಮಾಜಸೇವಕರು ಆದ ಶ್ರೀನಾಥ್ ರವರ ಹುಟ್ಟುಹಬ್ಬದ ಸಂಭ್ರಮವನ್ನು ವಿಶೇಷವಾಗಿ ಆಚರಿಸಲಾಗಿದೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲಾ ದಾನಿಗಳಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ವೇಳೆ ಸ್ಥಳೀಯ ಪ್ರಮುಖರು, ನಿರಂತರ ಅನ್ನದಾಸೋಹ ಸಮಿತಿ ಸದಸ್ಯರು ಹಾಜರಿದ್ದರು.
