ರಾಜ್ಯದಲ್ಲಿ ಹೊಸದಾಗಿ ಖಾತೆ ತೆರೆದ KRS : ನಿವರಗಿ ಗ್ರಾಮ ಪಂಚಾಯಿತಿಯ ಉಪಚುನಾವಣೆಯಲ್ಲಿ KRS ಪಕ್ಷದ ಸೇನಾನಿ ಶ್ವೇತಾ ಮಹಾಂತೇಶ್ ಗೆಲುವು – ಬಿ ಶಿವಶಂಕರ್

Spread the love

ನಿವರಗಿ ಗ್ರಾಮ ಪಂಚಾಯತಿಯ ಉಪಚುನಾವಣೆಯಲ್ಲಿ ಕರ್ನಾಟಕ ರಾಷ್ಟ್ರಪಕ್ಷದ ಅಭ್ಯರ್ಥಿ ಶ್ವೇತಾ ಮಹಾಂತೇಶ್ ನಿವರಗಿ ಗೆದ್ದಿದ್ದಾರೆ.

 

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೆ ಆರ್ ಎಸ್ ಪಕ್ಷದ ಅಭ್ಯರ್ಥಿ ಸ್ಪರ್ದಿಸಿ ಜಯಗಳಿಸಿದ್ದಾರೆ ಹೌದು ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ನಿವರಗಿ ಗ್ರಾಮ ಪಂಚಾಯಿತಿಯ ಉಪಚುನಾವಣೆಯಲ್ಲಿ KRS ಪಕ್ಷದ ಸೇನಾನಿ ಶ್ವೇತಾ ಮಹಾಂತೇಶ್ ಗೆದ್ದಿದ್ದು ಗಣ್ಯರು ಶುಭಕೋರಿದ್ದಾರೆ.

 

ಈ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್ ಮಾತನಾಡಿ ನಿವರಗಿ ಗ್ರಾಮದ ಶ್ವೇತಾರವರು KRS ಪಕ್ಷದ ತತ್ವಸಿದ್ಧಾಂತಗಳನ್ನು ಎತ್ತಿಹಿಡಿಯುವ ಮೂಲಕ ಸ್ಥಳೀಯವಾಗಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಮೂಲಕ ರಾಜ್ಯದಲ್ಲಿ ಮೊದಲ ಗೆಲುವು ಸಾಧಿಸಿದ್ದಾರೆ.

 

ಭ್ರಷ್ಟಾಚಾರ ಮುಕ್ತ ಸಮಾಜದ ನಿರ್ಮಾಣಕ್ಕೆ ಇದೊಂದು ಮುನ್ನುಡಿಯಾಗಿದೆ ನಮ್ಮ ಕೆ ಆರ್ ಎಸ್ ಪಕ್ಷವು ಹಂತ ಹಂತವಾಗಿ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿ ಸೇರಿದಂತೆ ಹಲವು ಚುನಾವಣೆಗಳಲ್ಲಿ ಗೆಲುವು ಸಲ್ಲಿಸುವ ಮೂಲಕ ಮಾದರಿ ಸಮಾಜದ ನಿರ್ಮಾಣಕ್ಕೆ ಮುಂದಾಗುತ್ತೇವೆ ಎಂದರು.

 

 

ನಮ್ಮ ಪಕ್ಷದಿಂದ ಗೆಲುವು ಸಾಧಿಸಿ, ಮಾದರಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಕಾರ್ಯನಿರ್ವಹಿಸಲು ಸಿದ್ದರಾಗಿರುವ ಶ್ವೇತಾ ಮಹಾಂತೇಶ್ ರವರಿಗೆ ಶುಭವಾಗಲಿ ಹಾಗೂ ಮುಂದಿನ ದಿನಗಳಲ್ಲಿ ಅವರು ತಾಲ್ಲೂಕು/ಜಿಲ್ಲಾ ಪಂಚಾಯಿತಿ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸುವಂತಾಗಲಿ ರಾಜ್ಯದ್ದಲ್ಲಿ ಮಾದರಿ ಜನಪ್ರತಿನಿಧಿ ಎಂದು ಹೆಸರು ಪಡೆಯಲಿ ಅವರ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡ ಪಕ್ಷದ ಎಲ್ಲಾ ಸೈನಿಕರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಿ ಶಿವಶಂಕರ್ , ಜಿಲ್ಲಾ ಸಮಿತಿಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಮಾರುತಿ,ಜಿಲ್ಲಾ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಬಿ ಎಲ್ ರಾಮ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ, ತಾಲ್ಲೂಕು ಉಸ್ತುವಾರಿ ಎಚ್. ಎನ್.ವೇಣು, ಶ್ರೀನಿವಾಸ್, ವೆಂಕಟೇಶ್, ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.