ಟಿಎಪಿಎಂಸಿಎಸ್ ಚುನಾವಣೆ: ಕಾಂಗ್ರೆಸ್ ಪರ ಮತದಾರರ ಒಲವು ಈ ಬಾರಿ ಗೆಲುವು ಖಚಿತ ಎಂದ ಕೆಪಿಸಿಸಿ ಸದಸ್ಯ ಜಿ‌.ಲಕ್ಷ್ಮೀಪತಿ

Spread the love

ದೊಡ್ಡಬಳ್ಳಾಪುರ : ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಎಂಸಿಎಸ್) ಚುನಾವಣೆ ನ.2 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4ವರೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢ ಶಾಲಾ ವಿಭಾಗ) ಆಯೋಜನೆ ಮಾಡಲಾಗಿದ್ದು, ಬಿರುಸಿನಿಂದ ಮತದಾನ ನಡೆಯುತ್ತಿದೆ..

ಬೆಳಗ್ಗೆ 11 ಗಂಟೆ ನಂತರ ಮತದಾನ ಚುರುಕುಗೊಂಡಿದೆ. ಇದೇ ವೇಳೆ ಕೆಪಿಸಿಸಿ ಸದಸ್ಯ ಲಕ್ಷೀಪತಿ ಮಾತನಾಡಿ ಚುನಾವಣೆಯಲ್ಲಿ ತಾಲ್ಲೂಕಿನ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ, ಕಾಂಗ್ರೆಸ್ ಪರ ಮತದಾರರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧ ಎಂದು ಹೇಳಿದರು.

ಎ ಮತ್ತು ಬಿ ತರಗತಿಯ ಎಲ್ಲಾ 13 ಸ್ಥಾನಗಳಿಗೂ ಕಾಂಗ್ರೆಸ್ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಈಗಾಗಲೇ ‘ಎ’ ತರಗತಿ ಐದು ಸ್ಥಾನಗಳನ್ನು ಗೆಲ್ಲುವ‌ ಸಂಪೂರ್ಣ ಭರವಸೆ ಇದೆ. ಇವುಗಳನ್ನು ಹೊರತುಪಡಿಸಿ ಸರ್ಕಾರದಿಂದ ನಾಮನಿರ್ದೇಶನ ಸ್ಥಾನ, ಪಿಎಲ್ ಡಿ ಬ್ಯಾಂಕ್ ಮತ್ತು ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿ ನಮ್ಮದೇ ಆಗಿವೆ. ಈ ಹಿನ್ನೆಲೆ ಕಾಂಗ್ರೆಸ್ ಟಿಎಪಿಎಂಸಿಎಸ್ ಚುಕ್ಕಾಣಿ ಹಿಡಿದೇ ಹಿಡುಯುತ್ತದೆ ಎಂದು ಹೇಳಿದರು…

 

Leave a Reply

Your email address will not be published. Required fields are marked *

© 2026 Malnad TV. All Rights Reserved.