70ನೇ ಕನ್ನಡ ರಾಜ್ಯೋತ್ಸವ ಆಚರಣೆ: ನಾಳೆ ಬೃಹತ್ ಸ್ವಯಂ ಪ್ರೇರಿತ ರಕ್ತಧಾನ ಶಿಬಿರ & ಅನ್ನ ಸಂತರ್ಪಣೆ

Spread the love

70ನೇ ಕನ್ನಡ ರಾಜ್ಯೋತ್ಸವ ಆಚರಣೆ: ನಾಳೆ ಬೃಹತ್ ಸ್ವಯಂ ಪ್ರೇರಿತ ರಕ್ತಧಾನ ಶಿಬಿರ & ಅನ್ನ ಸಂತರ್ಪಣೆ

 

ಬಿ.ಹೆಚ್.ಕೈಮರ : 70ನೇ ಕನ್ನಡ ರಾಜ್ಯೋತ್ಸವ ಹಾಗೂ ಪೂಜ್ಯ ರಾಜರ್ಷಿ ಡಾ|| ಡಿ ವಿರೇಂದ್ರ ಹೆಗ್ಗಡೆಯವರ 78ನೇ ಜನ್ಮದಿನದ ಪ್ರಯುಕ್ತ ಸ್ವಯಂ ಪ್ರೇರಿತ ಬೃಹತ್ ರಕ್ತಧಾನ ಶಿಬಿರ & ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಕ್ಷೇತ್ರದ ಕಣ್ಮಣಿ ವಿಶ್ವನಾಥ ಗದ್ದೇಮನೆ ತಿಳಿಸಿದ್ದಾರೆ.

 

ಶ್ರೀ ಕ್ಷೇತ್ರ ಧರ್ಮಸ್ಥಳ ಪೂಜ್ಯ ಖಾವಂದರ ಅಭಿಮಾನಿ ಬಳಗ, ಬಿ.ಹೆಚ್.ಕೈಮರ ವಿಶ್ವನಾಥ ಗದ್ದೇಮನೆ ಅಭಿಮಾನಿ ಬಳಗ ಇವರ ನೇತೃತ್ವದಲ್ಲಿ ನಾಳೆ (ನ.25) ಬಿ.ಹೆಚ್.ಕೈಮರ ಸರ್ಕಲ್ ನಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 2:30 ರವರೆಗೂ ಈ ಬೃಹತ್ ಕಾರ್ಯಕ್ರಮ ನೆಡೆಯಲಿದೆ.

ಈ ಕಾರ್ಯಕ್ರಮವನ್ನು ಚಿಕ್ಕಮಂಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆ ಚಿಕ್ಕಮಗಳೂರು, ಕರ್ನಾಟಕ ರಕ್ಷಣಾ ವೇದಿಕೆ & ಕನ್ನಡ ಸಾಹಿತ್ಯ ಪರಿಷತ್ ನ.ರಾ.ಪುರ, ಜೈ ಕರ್ನಾಟಕ ಅಟೋ ಚಾಲಕರ & ಮಾಲಿಕರ ಸಂಘ, ಮಲೆನಾಡು ಗೂಡ್ಸ್ ಆಟೋ ಚಾಲಕರ & ಮಾಲಿಕರ ಸಂಘ, ಓಂ ಮಹಾಗಣಪತಿ ಯುವಕ ಸಂಘ ಬಿ.ಹೆಚ್. ಕೈಮರ, ವಿಶ್ವೇಶ್ವರ ಯುವಕ ಸಂಘ ಕೋಗಳ್ಳಿ, ಅಭಿನವ ಪ್ರತಿಭಾ ವೇದಿಕೆ ನರಸಿಂಹರಾಜಪುರ, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ, ಶೌರ & ವಿಪತ್ತು ನಿರ್ವಾಹಣ ಸಮಿತಿ, ನವಜೀವನ ಸಮಿತಿಗಳು ಬಿ.ಹೆಚ್.ಕೈಮರ ಎನ್.ಆರ್.ಪುರ, ಜೆ.ಸಿ.ಸಂಸ್ಥೆ ನರಸಿಂಹರಾಜಪುರ ಇವರ ಸಂಯುಕ್ತ ಆಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಹಾಗೂ ಪೂಜ್ಯ ರಾಜರ್ಷಿ ಡಾ|| ಡಿ ವಿರೇಂದ್ರ ಹೆಗ್ಗಡೆಯವರ 78ನೇ ಜನ್ಮದಿನಾಚರಣೆ ಆಚರಿಸಲಾಗುತ್ತಿದೆ

ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷರಾದ ಪ್ರೇಮ ಶ್ರೀನಿವಾಸ್ ಸೇರಿದಂತೆ ಸ್ಥಳೀಯ ಮುಖಂಡರು, ಪ್ರಮುಖರು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

© 2026 Malnad TV. All Rights Reserved.