*ಶ್ರೀ ಕ್ಷೇತ್ರ ಘಾಟಿ ಮಾರ್ಗದಲ್ಲಿ ರಸ್ತೆ ಸಮಸ್ಯೆ : ಮೇಲ್ಸೇತುವೆ ನಿರ್ಮಿಸಲು ಕೋರಿ ಸಂಸದರಿಗೆ ಮನವಿ ಸಲ್ಲಿಸಿದ ಸ್ಥಳೀಯ ಮುಖಂಡ*

Spread the love

ದೊಡ್ಡಬಳ್ಳಾಪುರ ಆಗಸ್ಟ್ 31(ವಿಜಯಮಿತ್ರ): ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದ ಮಾರ್ಗದಲ್ಲಿ ತಿರುಮಗೊಂಡನ ಹಳ್ಳಿ ಬಳಿ ರೈಲ್ವೆ ಗೇಟ್ ಇದ್ದು, ಮೇಲ್ಸೇತುವೆ ನಿರ್ಮಿಸಲು ಒತ್ತಾಯಿಸಿ ಮುದ್ದೇನಹಳ್ಳಿ ಮುಖಂಡ ಹಳ್ಳಿರೈತ ಅಂಬರೀಷ್ ಲೋಕಸಭಾ ಸದಸ್ಯರು,ಸಂಸದರು ಆದ ಡಾ. ಕೆ ಸುಧಾಕರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿನಿತ್ಯ ಸಾವಿರಾರು ಸಾರ್ವಜನಿಕರು, ಯಾತ್ರಿಕರು, ಭಕ್ತದಿಗಳು, ರೈತರು ಸಂಚರಿಸುತ್ತಿದ್ದು ಟ್ರಾಫಿಕ್ ಹೆಚ್ಚಾಗಿ ಇರುತ್ತದೆ.ಅತಿಯಾದ ಟ್ರಾಫಿಕ್ನಿಂದಾಗಿ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸಂಚಾರಿಸಲು ಸಮಸ್ಯೆ ಉಂಟಾಗುತ್ತಿದ್ದು. ಸದರಿ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಬೇಕೆಂದು ಕೋರಿ ಮನವಿ ಸಲ್ಲಿಸಲಾಯಿತು ಎಂದು ಅಂಬರೀಷ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

© 2026 Malnad TV. All Rights Reserved.