*ಎಂ.ಆರ್.ಪಿ ದರಕ್ಕಿಂತ ಅಧಿಕ ಶುಲ್ಕ ಪಡೆದ ಚಿಂತ್ರಮಂದಿರಗಳಿಗೆ ದಂಡ : ನಗರದ ವೈಭವ್, ಸೌಂದರ್ಯ ಮಹಲ್ ಚಿತ್ರಮಂದಿರಗಳಿಗೆ ನೋಟಿಸ್ ಜಾರಿ *

ದೊಡ್ಡಬಳ್ಳಾಪುರ (ವಿಜಯಮಿತ್ರ ಮಾ.1): ಬೆಂ.ಗ್ರಾಮಾಂತರ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದೊಡ್ಡಬಳ್ಳಾಪುರ ನಗರದ ವೈಭವ್ ಚಿತ್ರಮಂದಿರ ಹಾಗೂ ಸೌಂದರ್ಯ ಮಹಲ್ ಚಿತ್ರಮಂದಿರಗಳಿಗೆ 10,000 ರೂಪಾಯಿ ದಂಡವನ್ನು ವಿಧಿಸಿದೆ. ಚಿತ್ರಮಂದಿರದಲ್ಲಿ ನೀರಿನ ಬಾಟಲಿ ಮತ್ತು ಚಿಪ್ಸ್ ಖರೀದಿಸಿದ ಗ್ರಾಹಕನಿಗೆ ಎಂ.ಆರ್.ಪಿ ದರಕ್ಕಿಂತ 40 ರೂ ಅಧಿಕ ಶುಲ್ಕವನ್ನು ಪಡೆದಿದಕ್ಕೆ ಈ ದಂಡವನ್ನು ವಿಧಿಸಲಾಗಿದೆ. ಆಯೋಗವು ಹೆಚ್ಚುವರಿಯಾಗಿ ಪಡೆದಿದ್ದ 40 ರೂಪಾಯಿಗಳನ್ನು ಮರುಪಾವತಿ ಮಾಡುವಂತೆ, ಪರಿಹಾರವಾಗಿ 5000 ರೂಪಾಯಿಗಳನ್ನು ಹಾಗೂ ಪ್ರಕರಣದ ಖರ್ಚನ್ನು 5000 […]

Continue Reading

*ಜಲ ಜೀವನ್ ಮಿಷನ್ ಕಾಮಗಾರಿ ಪೂರ್ಣಗೊಳಿಸಿ: ಸಂಸದ ಬಿ.ಎನ್.ಬಚ್ಚೇಗೌಡ*

ಬೆಂಗಳೂರು ಗ್ರಾಮಾಂತರ ಜಿಲ್ಲೆ ( ವಿಜಯಮಿತ್ರ ಸುದ್ದಿ ): ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದೆ. ಜಿಲ್ಲೆಯಲ್ಲಿ ಬರಗಾಲ ಉಂಟಾಗಿದ್ದು ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಅಗತ್ಯ ಕ್ರಮ ಕೈಗೊಂಡು ಜಲ ಜೀವನ್ ಮಿಷನ್ ಕಾಮಗಾರಿ ಪೂರ್ಣಗೊಳಿಸಿ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ಎನ್.ಬಚ್ಚೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿ ಅವರು […]

Continue Reading

ಗ್ರಾಮ ಪಂಚಾಯಿತಿ ಹಣ ದುರ್ಬಳಕೆ : ಹೊನ್ನಾವರ ಪಿಡಿಓ ಶಶಿದರ್ ಅಮಾನತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆ : ನೆಲಮಂಗಲ ಮೂಲದ ಪಿಡಿಓ ಶಶಿದರ್ ರವರು ಪ್ರಸ್ತುತ ದೊಡ್ಡಬಳ್ಳಾಪುರ ಹೊನ್ನಾವರ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಗ್ರಾಮ ಪಂಚಾಯಿತಿ ಹಣ ದುರ್ಬಳಕೆ ಆರೋಪದಲ್ಲಿ ಶಿಸ್ತು ಕ್ರಮಕ್ಕೆ ಗುರಿಯಾಗಿ ಅಮಾನತ್ತು ಗೊಂಡಿದ್ದಾರೆ. ಇನ್ನೂ ನೆಲಮಂಗಲ ತಾಲ್ಲೂಕಿನ ಟಿ.ಬೇಗೂರು ಗ್ರಾಮಪಂಚಾಯಿತಿಯಲ್ಲಿ ಲಕ್ಷಾಂತರ ರೂಪಾಯಿ ಸರ್ಕಾರದ ಹಣ ದುರುಪಯೋಗ ಮಾಡಿರುವ ಆರೋಪಕೂಡ ಇವರ ಮೇಲಿದ್ದು ಸಾಮಾಜಿಕ ಹೋರಾಟಗಾರ ಗಂಗಾಧರ್ ಟಿ ಜಿ ರವರು ನೀಡಿದ್ದ ದೂರನ್ನು ಆದರಿಸಿ ಪಿಡಿಓ ಶಶಿಧರ್ ಗ್ರಾಮ ಪಂಚಾಯಿತಿ ಹಣ ದುರ್ಬಳಕೆ ಮಾಡಿರುವುದು […]

Continue Reading

ದೊಡ್ಡಬಳ್ಳಾಪುರ ಹೊರವಲಯದಲ್ಲಿದೆ ಪಿಯುಸಿ ಪರೀಕ್ಷಾ ಕೇಂದ್ರ : ಬಸ್ ಸೌಲಭ್ಯಇಲ್ಲದ ಕಾರಣ 2 ಕಿ.ಮೀ ನಡೆದು ಹೋಗವ ಪರೀಕ್ಷಾರ್ಥಿಗಳು

ದೊಡ್ಡಬಳ್ಳಾಪುರ : ರಾಜ್ಯದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು. ಪರೀಕ್ಷಾರ್ಥಿಗಳು ತುಂಬಾ ಉತ್ಸಾಹದಿಂದ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ.   ದೊಡ್ಡಬಳ್ಳಾಪುರ ತಾಲ್ಲೂಕಿನ ಮಾದಗೊಂಡನ ಹಳ್ಳಿ ರಸ್ತೆಯಲ್ಲಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿ ಯೂ ಸಿ ಪರೀಕ್ಷಾ ಕೇಂದ್ರವಾಗಿದ್ದು. ಈ ಬಾರಿ ಬರೋಬ್ಬರಿ 641ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ಈ ಕೇಂದ್ರ ತಲುಪಲು ಸರಿಯಾದ ಬಸ್ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸವೇ ಸರಿ. ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕು ಎಂಬ ಆತುರದಲ್ಲಿ ವಿದ್ಯಾರ್ಥಿಗಳ ಪರದಾಟ […]

Continue Reading