ಸತ್ಯಾಂಶ ತಿಳಿಯದೆ ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ – ಕಾಂಗ್ರೆಸ್ ಮುಖಂಡ ರುದ್ರಮೂರ್ತಿ

ಕೆಲ ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ನನ್ನ ವಿರುದ್ಧ ಆರೋಪ ಮಾಡಿ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ಮಾಡಲಾಗಿದೆ .ಮಾಡಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಸತ್ಯ ಅರಿತು ನಂತರ ಅರೋಪಿಸಬೇಕಿತ್ತು ಎಂದು ಕರ್ನಾಟಕ ದಲಿತ ಸಂಘರ್ಷ ಸೇನೆ ವತಿಯಿಂದ ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆ ಕುರಿತು ಸ್ಥಳೀಯ ಕಾಂಗ್ರೆಸ್ ಮುಖಂಡ ರುದ್ರಮೂರ್ತಿ ತಿಳಿಸಿದರು   ನವೆಂಬರ್ 29 ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಸಕ್ಕರೆ ಗೊಲ್ಲಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೂಚನಹಳ್ಳಿ ಗ್ರಾಮಕ್ಕೆ ಸೇರಿರುವ ಗ್ರಾಮಠಾಣಾ ಸ್ಥಳವನ್ನು ನಕಲಿ […]

Continue Reading

44 ವರ್ಷದ ವೆಂಕಟೇಶ್ ನೇಣಿಗೆ ಶರಣು: ನಗರ ಭಾಗದ ಕಚೇರಿ ಪಾಳ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ದೊಡ್ಡಬಳ್ಳಾಪುರ: ನಿರ್ಮಾಣ ಹಂತದ ಮನೆಯ ಶೌಚಾಲಯದಲ್ಲಿ ವ್ಯಕ್ತಿಯೊಬ್ಬ ವೈರ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಕಛೇರಿಪಾಳ್ಯದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.   ವೆಂಕಟೇಶ್(44) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಯಲಹಂಕದ ಲಕ್ಷ್ಮೀಪುರದಲ್ಲಿ ಮೃತರ ಹೆಂಡತಿ, ಮಕ್ಕಳು ವಾಸವಾಗಿದ್ದರು. ಮಗ್ಗದ ಕೆಲಸ‌ ಮಾಡಿಕೊಂಡು ಕಛೇರಿಪಾಳ್ಯದಲ್ಲಿಯೇ ವೆ‍ಂಕಟೇಶ್ ಮನೆ ಕಟ್ಟುತ್ತಿದ್ದರು.   ಗುರುವಾರ ಬೆಳಿಗ್ಗೆಯಿಂದಲೇ ಕೈಯಲ್ಲಿ ವೈರ್ ಹಿಡಿದುಕೊಂಡು ಓಡಾಡುತ್ತಿದ್ದರು. ಮಧ್ಯಾಹ್ನ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.   ನಗರ ಠಾಣೆ ಪೊಲೀಸರು ಸ್ಥಳಕ್ಕೆ […]

Continue Reading

ರೈತರ ಗೋಳು ಕೇಳುವವರಾರು …? : ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ , ಬೀರಸಂದ್ರ, ಬೈರದೆನಹಳ್ಳಿ, ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿ ಗ್ರಾಮಗಳಲ್ಲಿ 118-37ಗುಂಟೆ ವಿಸ್ತೀರ್ಣದ ಜಮೀನನ್ನು ಕೆ. ಐ. ಎ. ಡಿ. ಬಿ. ಕಾಯ್ದೆ ಅನ್ವಯ ಪರಿಹಾರ ನಿಗದಿ ಪಡಿಸಲು ದಿನಾಂಕ ನೆವೆಂಬರ್ 29 ರಂದು ನೆಡೆದ ಸಭೆಯ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿ ಇಂದು ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ಕರೆಯಲಾಗಿದ್ದು ಸಂಪರ್ಕ ರಸ್ತೆಯ ಹೆಸರಿನಲ್ಲಿ ರೈತರ ಫಲವತ್ತಾದ […]

Continue Reading

ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸುವುದೇ ನನ್ನ ಮುಖ್ಯ ಉದ್ದೇಶ – ಉದಯ್ ಸಿಂಗ್

ದೊಡ್ಡಬಳ್ಳಾಪುರ : ವಿಧಾನಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆ ಮುಂದಿನ ವರ್ಷ 2024 ರ ಜೂನ್ ನಲ್ಲಿ ನಡೆಯಲಿದ್ದು ಈ ಸಂಬಂಧ ಮತದಾರರ ನೋಂದಣಿ ಕಾರ್ಯ ನಡೆದು ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಸಿದ್ಧಪಡಿಸಿದೆ .ಮತದಾರರ ನೋಂದಣಿ ಪಟ್ಟಿ ಸೇರ್ಪಡೆಗೆ ಈವರೆಗೆ 67787 ಮಂದಿ ಪದವೀಧರರು ಸ್ವಯಂಪ್ರೇರಣೆಯಿಂದ ಅರ್ಜಿ ಸಲ್ಲಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ .ಎಂದು ಪದವೀಧರರ ಕ್ಷೇತ್ರದ ಅಭ್ಯರ್ಥಿ ಉದಯ್ ಸಿಂಗ್ ತಿಳಿಸಿದರು   ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ […]

Continue Reading

ನಕಲಿ ದಾಖಲಾತಿ ಸೃಷ್ಟಿಸಿ ಭೂಕಂಬಳಿಕೆ ಆರೋಪ : ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೆಡಿಎಸ್ಎಸ್ ಮನವಿ

ದೊಡ್ಡಬಳ್ಳಾಪುರ: ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಬೂಚನಹಳ್ಳಿ ಗ್ರಾಮದ ಗ್ರಾಮ ಠಾಣಾ ಜಾಗವನ್ನು ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿಕೊಂಡು, ಭೂ ಕಬಳಿಕೆ ಮಾಡಲಾಗಿದೆ ಎಂದು ಆರೋಪಿಸಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರ ಪತಿ ರುದ್ರಮೂರ್ತಿ ಹಾಗೂ ಬೋಗಸ್ ಇ ಖಾತಾ ಮಾಡಿಕೊಡಲಾಗಿದೆ ಎಂಬ ಆರೋಪದ ಮೇಲೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪಿಡಿಒ ಮುನಿರಾಜು ರವರ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸ್ಥಳೀಯ ಗ್ರಾಮಸ್ಥರ ಸಹಯೋಗದೊಂದಿಗೆ ನಡೆಸಲಾಯಿತು ಗ್ರಾಮ […]

Continue Reading

‘ಸ್ಪೆಷಲ್ ಜ್ಯೂರಿ ಅವಾರ್ಡ್ ‘ ಪ್ರಶಸ್ತಿಯನ್ನು ನೆಚ್ಚಿನ ನಟ ಶಂಕರ್ ನಾಗ್ ರವರಿಗೆ ಅರ್ಪಿಸಿದ ನಟ ನಿರ್ದೇಶಕ ರಿಷಬ್ ಶೆಟ್ಟಿ

ಹೊಂಬಾಳೆ ಫಿಲಂಸ್‍ ನಿರ್ಮಾಣದ, ರಿಷಭ್‍ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಚಿತ್ರವು ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.ಮಂಗಳವಾರ, ಗೋವಾದಲ್ಲಿ ಮುಕ್ತಾಯವಾದ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಭ್‍ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಶಸ್ತಿಗೆ ಭಾಜನವಾಗಿದೆ. ಈ ಪ್ರಶಸ್ತಿಯನ್ನು ನಟ , ನಿರ್ದೇಶಕ ರಿಷಬ್ ಶೆಟ್ಟಿ, ತಮ್ಮ ನೆಚ್ಚಿನ ನಟ, ನಿರ್ದೇಶಕ ಶಂಕರ್ ನಾಗ್ ಅವರಿಗೆ ಅರ್ಪಿಸಿದ್ದಾರೆ. ಈ ಪ್ರಶಸ್ತಿಯು […]

Continue Reading

ಬಗೆಹರಿಯದ ಟ್ರಾಫಿಕ್ ಸಿಗ್ನಲ್ ಸಮಸ್ಯೆ : ದಿನನಿತ್ಯ ವಾಹನ ಸವಾರರ ಪರದಾಟ

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರವಾಸಿ ಮಂದಿರ ಮುಂಭಾಗದ ಟ್ರಾಫಿಕ್ ಸಿಗ್ನಲ್ ಹಲವು ತಿಂಗಳು ಗಳಿಂದ ಕೆಟ್ಟು ನಿಂತಿದ್ದು ವಾಹನ ಸವಾರರ ಗೋಳು ಕೆಳದಂಥಾಗಿದೆ ನಾಲ್ಕು ರಸ್ತೆಗಳನ್ನು ಒಳಗೊಂಡಿರುವ ಈ ವೃತ ದಲ್ಲಿ ಅತಿಯಾದ ವಾಹನಗಳು ಚಲಿಸುವ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು ಬೆಳಗಿನ ಸಮಯದಲ್ಲಿ ಶಾಲೆಗೆ ಹೋಗುವ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಬೇಗ ಹೋಗಬೇಕೆನ್ನುವ ಅತುರದಲ್ಲಿ ವಾಹನ ಸವಾರರು ರಸ್ತೆಯ ನಿಯಮಗಳನ್ನು ಗಾಳಿಗೆ ತೂರಿ ಅಡ್ಡಾದಿಡ್ಡಿ ವಾಹನ ಚಲಾಯಿಸಲು ಮುಂದಾಗಿದ್ದು ಪಾದಚಾರಿ […]

Continue Reading

ಅಡ್ಡಾದಿಡ್ಡಿ ವಾಹನ ನಿಲುಗಡೆ : ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಸಾರ್ವಜನಿಕ ಆಸ್ಪತ್ರೆ

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಮುಂಬಾಗ ದ್ವಿಚಕ್ರ ವಾಹನಗಳ ನಿಲುಗಡೆಯ ತಾಣವಾಗಿ ಮಾರ್ಪಟ್ಟಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದಲ್ಲಿ ನಿರ್ಮಾಣಗೊಂಡು ಸೇವೆಸಲ್ಲಿಸುತ್ತಿರುವ ಸರ್ಕಾರಿ ತಾಯಿ ಮತ್ತು ಮಗುವಿನ ಆಸ್ಪತ್ರೆ (ಸಾರ್ವಜನಿಕ ಆಸ್ಪತ್ರೆ) ಯಲ್ಲಿ ಸುಸರ್ಜಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ತಾಲ್ಲೂಕಿನ ಹಲವು ಭಾಗಗಳಿಂದ ಚಿಕಿತ್ಸೆಗಾಗಿ ಆಸ್ಪತ್ರೆ ಧಾವಿಸುವ ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನ , ಕಾರು,ಆಟೋ , ಇನ್ನಿತರ ವಾಹನಗಳನ್ನು ಆಸ್ಪತ್ರೆಯ ಮುಂಭಾಗ ಅಡ್ಡಾದಿಡ್ಡಿ ನಿಲುಗಡೆ ಮಾಡುವ ಕಾರಣ ತುರ್ತು […]

Continue Reading

ಮಗ ವೇಣುಗೋಪಾಲ್ ಕನವರಿಕೆಯಲ್ಲಿ ಹಿರಿಜೀವ : ಕೊನೆಗಾಲದಲ್ಲಿ ಮಗನನ್ನು ನೋಡುವ ಬಯಕೆ

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆಯ ನಿವಾಸಿ ರಾಮಕೃಷ್ಣಪ್ಪ, ಅವರಿಗೆ ವೇಣುಗೋಪಾಲ್ ಎಂಬ ಮಗನಿದ್ದ, ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ, ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕೆಂದು 15 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ, ಮನೆ ಬಿಟ್ಟು ಹೋದಾಗ 22 ವರ್ಷಯ ಯುವಕ ವೇಣುಗೋಪಾಲ್, ಕಳೆದೆ 15 ವರ್ಷಗಳಿಂದ ಇಂದಲ್ಲಾ ನಾಳೆ ಮನೆಗೆ ಬಂದೇ ಬರುತ್ತಾನೆಂಬ ನಂಬಿಕೆಯಲ್ಲಿ ರಾಮಕೃಷ್ಣಪ್ಪ ಕಾಯುತ್ತಿದ್ದರು. ರಾಮಕೃಷ್ಣಪ್ಪನವರ ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ, ಹಾಸಿಗೆಯಲ್ಲಿ ಮಗ ವೇಣುಗೋಪಾಲನನ್ನ ಕನವರಿಸುತ್ತಿದ್ದಾರೆ, […]

Continue Reading

ಡಿಫ್ರೆಂಟ್ ಲುಕ್ಕಲ್ಲಿ ರಿಷಬ್ : ಕಾಂತಾರ ಅಧ್ಯಾಯ ೧ ಪೋಸ್ಟರ್ ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ಹಾಗೂ ಭಾರತೀಯ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರ ಮಾಡಿರುವ ಕಮಾಲ್ ನಮಗೆಲ್ಲ ತಿಳಿದಿದೆ ಆದರೆ ಈಗ ವಿಚಿತ್ರವಾದ ಪೋಸ್ಟರ್ ನೊಂದಿಗೆ ಕೈಯಲ್ಲಿ ತ್ರಿಶೂಲ ಹಿಡಿದು ರಗಡ್ ಲುಕ್ ಅಲ್ಲಿ ರಿಷಬ್ ಕಾಣಿಸಿಕೊಂಡಿದ್ದಾರೆ   ಹೊಂಬಾಳೆ ಫಿಲಂಸ್ ಬ್ಯಾನರ್ ನ ಅಡಿಯಲ್ಲಿ ತಯಾರಾಗುತ್ತಿರುವ ಕಾಂತಾರ ಅಧ್ಯಾಯ ಒಂದು ಹಲವಾರು ವಿಶೇಷತೆಗಳನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ   ಏಳು ಭಾಷೆಯಲ್ಲಿ ಪ್ರದರ್ಶನ ಕಾಣಲಿರುವ ಈ ಚಿತ್ರಕ್ಕಾಗಿ ಸಕ್ಕತ್ ತಾಲಿಮು ನಡೆಸಿರುವ ರಿಷಬ್ […]

Continue Reading