ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿವತಿಯಿಂದ 2025ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

ದೊಡ್ಡಬಳ್ಳಾಪುರ : ಪ್ರತಿವರ್ಷದ ಪರಂಪರೆಯಂತೆ ಈ ವರ್ಷವೂ ಕೂಡ ದಿನದ ಪ್ರಾಮುಖ್ಯತೆ ಹಾಗೂ ದಿನಾಂಕ ತಿಳಿಸುವ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಯುವ ಸಮಿತಿ ವತಿಯಿಂದ ಮಾಡಲಾಗಿದೆ ಎಂದು ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿ ಅಧ್ಯಕ್ಷ ಚಂದ್ರುಶೆಟ್ಟಿ ತಿಳಿಸಿದರು   ಗಾಣಿಗರ ಪೇಟೆಯ ಲಕ್ಷ್ಮೀ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಸೇವಾ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಿತಿಯು ಹಲವು ವರ್ಷಗಳಿಂದ ನಿರಂತರವಾಗಿ ಕ್ಯಾಲೆಂಡರ್ ಬಿಡುಗಡೆ ಮಾಡುವ ಮೂಲಕ ಸಮುದಾಯಕ್ಕೆ ಶುಭಾಶಯ ಕೋರುವುದಷ್ಟೇ […]

Continue Reading

ಎಸ್ ಎಂ ಹರೀಶ್ ಗೌಡ ರವರ ನೇತೃತ್ವದಲ್ಲಿ 2025ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ : 2028ರಲ್ಲಿ ನೆಡೆಯುವ ವಿಧಾನಸಭಾ ಚುನಾವಣೆಯ ಅಭ್ಯರ್ಥಿಯಾಗಿ ಹರೀಶ್ ಗೌಡ ಸ್ವಯಂ ಘೋಷಣೆ : ಚುನಾವಣೆ ಎದುರಿಸಲು ಸಿದ್ದರಾಗುವಂತೆ ಜೆಡಿಎಸ್ ಕಾರ್ಯಕರ್ತರಿಗೆ ಸಂದೇಶ

ದೊಡ್ಡಬಳ್ಳಾಪುರ : ತಾಲ್ಲೂಕಿನ ಹಲವು ಗಣ್ಯರು ಹಾಗೂ ಜೆಡಿಎಸ್ ಕಾರ್ಯಕರ್ತರ ಸಮ್ಮುಖದಲ್ಲಿ ವಾರ್ಷಿಕ ಸೇವಾ ಸಾಧನೆಗಳನ್ನ ಒಳಗೊಂಡಂತ 2025ನೇ ನೂತನ ವರ್ಷದ ಕ್ಯಾಲೆಂಡರ್ ನ್ನು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಎಂ.ಹರೀಶ್ ಗೌಡ ಬಿಡುಗಡೆ ಮಾಡಿದರು. ಶ್ಯಾಕಲದೇವನಪುರದಲ್ಲಿ ತಮ್ಮ ಸ್ವಗೃಹದ ಸಮೀಪ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಹಲವು ಗಣ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು ವೇದಿಕೆಯಲ್ಲಿ ಮಾಜಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಮತ್ತು ತಾಲ್ಲೂಕು ಜೆಡಿಎಸ್ […]

Continue Reading

ಸಿನಿಮಿಯಾ ಸ್ಟೈಲ್ ನಲ್ಲಿ ನೆಡೆದ ಕೊ*ಲೆ : ಹಣ ಕೊಡುವುದಾಗಿ ನಂಬಿಸಿ ಹ*ತ್ಯೆ ಮಾಡಿದ ಆರೋಪಿಗಳು ಅಂದರ್ : ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಮತ್ತು ತಂಡದ ಮಿಂಚಿನ ಕಾರ್ಯಾಚರಣೆ

ದೊಡ್ಡಬಳ್ಳಾಪುರ ಹೊರವಲಯದ ಇನ್ಫೋಸಿಟಿಯಲ್ಲಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಬೆಳಗಿನಂದಲೇ ನಿರಂತರವಾಗಿ ಸೋಕೋ ತಂಡದೊಂದಿಗೆ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದ್ದು , ಹತ್ಯೆಗಿಡಾದ ದೇವರಾಜು ಅವರ ಅಸ್ಥಿಪಂಜರ ತಾಲ್ಲೂಕಿನ ಮಧುರೆ ಕೆರೆಯಲ್ಲಿ ಪತ್ತೆಯಾಗಿದೆ. ಅ.17ರಂದು ಬಾಶೆಟ್ಟಿ ಹಳ್ಳಿ ನಿವಾಸಿ ದೇವರಾಜು(65ವರ್ಷ) ಕಾಣುತ್ತಿಲ್ಲವೆಂದು ಕುಟುಂಬಸ್ಥರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿ, ಕೊನೆಗೆ ಆರೋಪಿಗಳಾದ ರಾಜಕುಮಾರ್ ಮತ್ತು ಅನಿಲ್ ರನ್ನು ವಶಕ್ಕೆ ಪಡೆದು […]

Continue Reading

ಡಾ.ಮನಮೋಹನ್ ಸಿಂಗ್ ರಾಜಕೀಯ ಜೀವನ ಕುರಿತು ಒಂದಿಷ್ಟು ಮಾಹಿತಿ

2004 ರಿಂದ 2014 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ಅವರು ಈ ವರ್ಷದ ಆರಂಭದಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು. ಸಿಂಗ್ ಅವರು ಮೇ 22, 2004 ರಂದು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು ಮತ್ತು 2009ರಲ್ಲಿ ಅದೇ ದಿನಾಂಕದಂದು ಮತ್ತೊಮ್ಮೆ ಪ್ರಧಾನಿಯಾಗಿ 2 ನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ್ದರು.   ಸಿಂಗ್ ಅವರ ರಾಜಕೀಯ ಜೀವನು 1991ರಲ್ಲಿ ಅವರು ರಾಜ್ಯಸಭೆಗೆ ಪ್ರವೇಶಿಸಿದಾಗ ಪ್ರಾರಂಭವಾಯಿತು. ಕೇವಲ ನಾಲ್ಕು ತಿಂಗಳ ನಂತರ, ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ […]

Continue Reading

ಸದೃಢ ಆರ್ಥಿಕತೆಯ ನಿರ್ಮಾತೃ ಡಾ.ಮನಮೋಹನ್ ಸಿಂಗ್ : ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಮಾಜಿ ಪ್ರಧಾನಿಗೆ ಗೌರವ ನುಡಿನಮನ

ದೊಡ್ಡಬಳ್ಳಾಪುರ: ಗುರುವಾರ ರಾತ್ರಿ‌ ನಿಧನರಾದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನುಡಿನಮನ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಶುಕ್ರವಾರ ನಡೆಯಿತು. ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನ‌ ಸಲ್ಲಿಸಿ, ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು.   ಶ್ರೀ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ‌.ರಾಜೇಂದ್ರ ಮಾತನಾಡಿ, ದೇಶದ ಆರ್ಥಿಕತೆಗೆ ಚೇತರಿಕೆಯ ಚೈತನ್ಯವನ್ನು ನೀಡಿ ಪ್ರಗತಿಗೆ ಮುನ್ನುಡಿ ಬರೆದ ಮನಮೋಹನ್ ಸಿಂಗ್ ಅವರು ಜಾಗತೀಕರಣ, ಉದಾರೀಕರಣ […]

Continue Reading

ಮೊಬೈಲ್ ರಿಪೇರಿ & ಸೇವೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಮೊಬೈಲ್ ರಿಪೇರಿ & ಸೇವೆ ಕುರಿತ 30 ದಿನಗಳ ಉಚಿತ ತರಬೇತಿಯು ಜನವರಿ 03 ರಿಂದ ಪ್ರಾರಂಭವಾಗಲಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.   ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ನ್ನು ಕಡ್ಡಾಯವಾಗಿ […]

Continue Reading

ಜನವರಿ ಮಾಹೆಯಿಂದ ಇದುವರೆಗೂ 48 ದೌರ್ಜನ್ಯ ಪ್ರಕರಣಗಳು ದಾಖಲು : ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ತ್ವರಿತ ವಿಲೇವಾರಿಗೆ ಕ್ರಮ: ಅಪರ ಜಿಲ್ಲಾಧಿಕಾರಿ ಅಮರೇಶ್. ಹೆಚ್

ಬೆಂ.ಗ್ರಾ.ಜಿಲ್ಲೆ, ಡಿ. 26 : ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ವಿಳಂಬ ತೋರದೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.   ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ 2024ನೇ ಕ್ಯಾಲೆಂಡರ್ ವರ್ಷದ 4ನೇ ತ್ರೈಮಾಸಿಕ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   ಬೆಂಗಳೂರು […]

Continue Reading

ದೊಡ್ಡಬಳ್ಳಾಪುರ : ಸಬ್ ರಿಜಿಸ್ಟರ್ ಕಚೇರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ದಿಡೀರ್ ಭೇಟಿ : ಇಲ್ಲಿದೆ ಸಂಪೂರ್ಣ ಮಾಹಿತಿಗಾಗಿ

ದೊಡ್ಡಬಳ್ಳಾಪುರ : ಸಬ್ ರಿಜಿಸ್ಟರ್ ಕಛೇರಿಗೆ ಡಿ. 26 ರಂದು ದಿಡೀರ್ ಭೇಟಿ ಕೊಟ್ಟ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.   ತಾಲೂಕಿನ ಸಬ್ ರಿಜಿಸ್ಟರ್ ಕಛೇರಿಯಲ್ಲಿ ಸಾಕಷ್ಟು ಸಾರ್ವಜನಿಕರಿಂದ ದೂರುಗಳನ್ನು ಬರುತ್ತಿರುವ ಹಿನ್ನಲೆ ಇಂದು ಬೆಳಗ್ಗೆ ಕಂದಾಯ ಸಚಿವರಾದ ಕೃಷ್ಣಬೈರೇಗೌಡರು ಕಛೇರಿಗೆ ಭೇಟಿ ನೀಡಿದರು, ಕಛೇರಿ ಪ್ರಾರಂಭದ ಸಮಯ ಬೆಳಗ್ಗೆ 10 ಗಂಟೆಗೆ ಬಂದಿದ್ದರು, ಆದರೆ ಕಚೇರಿಯಲ್ಲಿ ಒಬ್ಬರು ಇಬ್ಬರು ಬಿಟ್ಟರೆ ಬೇರೆ ಯಾವ ಸಿಬ್ಬಂದಿಯೂ […]

Continue Reading

ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಉತ್ತಮಗೊಳಿಸಲು 20 ಅಂಶಗಳ ಕಾರ್ಯಕ್ರಮವನ್ನು ರೂಪಿಸಿದೆ – ಪದ್ಮಾವತಿ

ಪ್ರತಿಯೊಬ್ಬ ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ಮತ್ತು ಜೀವನದಲ್ಲಿ ಯಶಸ್ಸಿಗೆ ಶಿಕ್ಷಣ ಬಹಳ ಮುಖ್ಯ ಪಾತ್ರ ವಹಿಸುತ್ತದೆ  ಎಂದು  ವೈದ್ಯೆ ಡಾ. ಕೆ.ಎಂ.ವೇದಾಮಣಿ ತಿಳಿಸಿದರು.   ಅವರು ದೊಡ್ಡಬಳ್ಳಾಪುರ ನಗರದ ಮಾಂಗಲ್ಯ ಕಲ್ಯಾಣ ಮಂಟಪದಲ್ಲಿ ಸಹ್ಯಾದ್ರಿ ಮತ್ತು ಜ್ಞಾನಗಂಗಾ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.  ಶಿಕ್ಷಣದ ಮಹತ್ವವನ್ನು ಅರಿತವರು ವಿದ್ಯಾರ್ಥಿಗಳಿಗೆ   ಶಿಸ್ತು ಅವರಲ್ಲಿ  ಸಕಾರಾತ್ಮಕ  ಬೆಳವಣಿಗೆ ಸಹಕಾರಿ ಆಗುತ್ತದೆ.  ಮಕ್ಕಳನ್ನು  ಸುಶಿಕ್ಷಿತಗೊಳಿಸುವಲ್ಲಿ  ಪೋಷಕರ ಪಾತ್ರ ಮಹತ್ವದಾಗಿರುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ವಿನಯವು ಬಹುಮುಖ್ಯವಾಗಿರುತ್ತದೆ.   […]

Continue Reading

ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ತ್ರೈಮಾಸಿಕ ಕೆಪಿಡಿ ಸಭೆಯಲ್ಲಿ ಕಾಣದ ಸರ್ಕಾರಿ ಅಧಿಕಾರಿಗಳು: ಇಲಾಖೆ ಅಧಿಕಾರಿಗಳ ಕುರ್ಚಿ ಖಾಲಿ ಖಾಲಿ

ದೊಡ್ಡಬಳ್ಳಾಪುರ : ಕೆಪಿಡಿ ಸಭೆಗೆ ಬಾರದೆ ಕೈಕೊಟ್ಟ ಅಧಿಕಾರಿಗಳು, ಹಲವು ಇಲಾಖೆಗಳ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ, ಸಭೆಯಲ್ಲಿ ಅಧಿಕಾರಿಗಳ ಕುರ್ಚಿ, ಖಾಲಿ ಖಾಲಿ ಗ್ರಾಮದ ಕೆಪಿಡಿ ಸಭೆ ಎಂದರೆ ಇಲಾಖೆಯ ಅಧಿಕಾರಿಗಳಿಗೆ ಗೌರವ ಇಲ್ಲವೇ ಎಂದು ಪ್ರಶ್ನಿಸುತ್ತಿರುವ ಗ್ರಾಮ ಪಂಚಾಯತಿ ಸದಸ್ಯರು   ಹೌದು ತಾಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2024 25 ನೇ ಸಾಲಿನ ಮೂರನೇ ತ್ರೈಮಾಸಿಕ ಕೆಪಿಡಿ ಸಭೆಯನ್ನು ಆಯೋಜನೆ ಮಾಡಲಾಗಿದ್ದು, ಸಭೆಯಲ್ಲಿ ಅಧಿಕಾರಿಗಳೇ ಕಾಣುತ್ತಿಲ್ಲ, ಸುಮಾರು 25ಕ್ಕೂ ಅಧಿಕ ಇಲಾಖೆಗಳಿಗೆ […]

Continue Reading