ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. – ಕೆ ಮಂಜುನಾಥ್ ದೇವ್

ದೊಡ್ಡಬಳ್ಳಾಪುರ ( ವಿಜಯಮಿತ್ರ ): ಯುವಕರು ಪರಭಾಷೆಗಳ ವ್ಯಾಮೋಹ ಹೆಚ್ಚಾಗುತ್ತಿದೆ.. ಯುವಕರು ಮುಖ್ಯವಾಗಿ ಕನ್ನಡ ನಾಡು ನುಡಿ ನಮ್ಮ ಸಂಸ್ಕೃತಿಗೆ ಭಾಷೆ ವಿಷಯಗಳಿಗೆ ಗೌರವ ನೀಡಬೇಕು.ಕರ್ನಾಟಕದಲ್ಲಿ ಕನ್ನಡಿಗನಿಗೆ ಉದ್ಯೋಗ ಮೀಸಲಾತಿಯ ವಿಷಯವಾಗಿ ನಮ್ಮ ಹಕ್ಕು ನಮ್ಮ ಉದ್ಯೋಗ ಎಂಬ ಧ್ಯೇಯ ವಾಕ್ಯದೊಂದಿಗೆ ಅಕ್ಟೋಬರ್ 19 ರಂದು ಬೆಂಗಳೂರಿನಲ್ಲಿ ಬೃಹತ್ ಮಟ್ಟದ ಹೋರಾಟವನ್ನು ರೂಪಿಸಲಾಗಿದೆ ಎಂದು ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ ದೇವ ತಿಳಿಸಿದರು.     ಕನ್ನಡ ಜಾಗೃತಿ ವೇದಿಕೆಯ ಘಟಕದ ನೂತನ ಅಧ್ಯಕ್ಷರ ಪದಗ್ರಹಣ […]

Continue Reading

ಸುಳ್ಳು ಆರೋಪದ ವಿರುದ್ಧ ನ್ಯಾಯಕೋರಿ ಪೋಲೀಸ್ ಉಪಾಧೀಕ್ಷಕರಿಗೆ ಮನವಿ ಸಲ್ಲಿಕೆ

ದೊಡ್ಡಬಳ್ಳಾಪುರ ಸೆ. 30(ವಿಜಯಮಿತ್ರ): ಅಸತ್ಯವಾದ ಆರೋಪಮಾಡಿ ದೂರು ದಾಖಲಿಸಿರುವ ಬಗ್ಗೆ ದೊಡ್ಡಬಳ್ಳಾಪುರ ಉಪವಿಭಾಗ ಪೋಲೀಸ್ ಉಪಾಧೀಕ್ಷಕರಿಗೆ ಕೆಆರ್ ಎಸ್ ಪಕ್ಷದ ವತಿಯಿಂದ ಬಿ.ಶಿವಶಂಕರ್ ಹಾಗೂ ಸಂಗಡಿಗರು ಮನವಿ ಸಲ್ಲಿಸಿದರು. ನಂತರ ಕೆ ಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್ ಮಾಧ್ಯಮಗಳೊಂದಿಗೆ ಮಾತನಾಡಿ ಸೆಪ್ಟೆಂಬರ್ 24ರಂದು ನನ್ನ ಸ್ನೇಹಿತರು ನನಗೆ ಕರೆಮಾಡಿ ಈ ದಿನ ಮದ್ಯಾಹ್ನ 3-00 ಗಂಟೆಗೆ ತಾಲ್ಲೂಕು ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ತಿಳಿಸಿದರು ಇದಕ್ಕೆ ಸಂಬಂಧಪಟ್ಟಂತೆ ನಾನು ತಹಸೀಲ್ದಾರ್ ರವರ ಕಛೇರಿಗೆ ಭೇಟಿ ಮಾಡಿ […]

Continue Reading

ಉಪನಿರ್ದೇಶಕರಿಗೆ ಅದ್ದೂರಿ ಬೀಳ್ಕೊಡುಗೆ : ವೇದಿಕೆಯ ಮೇಲೆ ಭಾವುಕರಾದ ಶಿಕ್ಷಕರು

ದೊಡ್ಡಬಳ್ಳಾಪುರ (ವಿಜಯಮಿತ್ರ ): ಶಾಲಾ ಶಿಕ್ಷಣ ಇಲಾಖೆಯಲ್ಲಿ ಉಪನಿರ್ದೇಶಕರಾಗಿ (ಆಡಳಿತ ) ಸೇವೆ ಸಲ್ಲಿಸಿ ಸೇವೆಯಿಂದ ವಯೋವೃದ್ದಿ ಗೊಂಡು ನಿವೃತ್ತಿ ಪಡೆದ ಕೃಷ್ಣಮೂರ್ತಿ ರವರಿಗೆ ಬೆಂಗಳೂರು ಗ್ರಾಮಾಂತರ ಶಿಕ್ಷಕರ ವೃಂದ ಹಾಗೂ ಸಹ ಸಿಬ್ಬಂದಿಗಳ ವತಿಯಿಂದ ಅದ್ದೂರಿ ಬೀಳ್ಕೊಡುಗೆ ಸಮಾರಂಭವನ್ನು ತಾಲ್ಲೂಕಿನ ಬೆಸೆಂಟ್ ಪಾರ್ಕಿನ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಕ ನಾರಾಯಣ ಸ್ವಾಮಿ ಮಾತನಾಡಿ ಸರ್ಕಾರಿ ಸೇವೆಯಲ್ಲಿ ಎಲ್ಲರಿಗೂ ನಿವೃತ್ತಿ ಎನ್ನುವುದು ಸರ್ವೇ ಸಾಮಾನ್ಯ ಆದರೆ ಕೃಷ್ಣಮೂರ್ತಿ ಸರ್ ನಿವೃತ್ತಿ ಹೊಂದುತ್ತಿರುವುದು ಒಬ್ಬ ದಕ್ಷ, […]

Continue Reading

R. L. ಜಾಲಪ್ಪ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ: 20ನೇ ವರ್ಷದ ಪದವಿ ಪ್ರಧಾನ ಸಮಾರಂಭ

ದೊಡ್ಡಬಳ್ಳಾಪುರ : ತಾಲ್ಲೂಕಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ R. L. ಜಾಲಪ್ಪ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ 20ನೇ ವರ್ಷದ ಪದವೀಧರರಿಗೆ ಪದವಿ ಪ್ರಧಾನ( graduation ceremony) ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಗಣ್ಯರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಪದವೀಧರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.   ನಂತರ ಕಾಲೇಜಿನ ಉಪಾಧ್ಯಕ್ಷ ಜೆ ರಾಜೇಂದ್ರ ಮಾತನಾಡಿ ನಮ್ಮ ವಿದ್ಯಾಸಂಸ್ಥೆಯು 2001ರಲ್ಲಿ ಆರಂಭವಾಗಿದ್ದು ನಿರಂತರ ಸಾವಿರಾರು ವಿದ್ಯಾರ್ಥಿಗಳಿಗೆ […]

Continue Reading

ದೊಡ್ಡಬಳ್ಳಾಪುರ l ನಗರಸಭೆ ಚುನಾವಣೆ : ನೂತನ ಅಧ್ಯಕ್ಷರಾಗಿ ಸುಮಿತ್ರ ಆನಂದ್: ಉಪಾಧ್ಯಕ್ಷರಾಗಿ ಮಲ್ಲೇಶ್ ಆಯ್ಕೆ

ದೊಡ್ಡಬಳ್ಳಾಪುರ: ನಗರಸಭೆ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನದ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬಿಜೆಪಿ – ಜೆಡಿಎಸ್ ಮೈತ್ರಿಗೆ ನಗರಸಭೆ ಚುಕ್ಕಾಣಿ ಹಿಡಿದಿದೆ. ಸೆ. 23 ರಂದು ನಗರದ ನಗರಸಭೆಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಅಧ್ಯಕ್ಷ ಸ್ಥಾನ ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ಪಾಲಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಕಮಲ-ದಳ ಮೈತ್ರಿಯಿಂದ ಸ್ಪರ್ಧಿಸಿದ್ದ ಸುಮಿತ್ರ ಆನಂದ್ (ಬಿಜೆಪಿ) ಅವರಿಗೆ ಸಂಸದ ಮತ್ತು ಶಾಸಕ ಇಬ್ಬರ ಮತ ಸೇರಿ 23 ಮತಗಳು ದೊರೆತಿದ್ದು.ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರೂಪಿಣಿ ಮಂಜುನಾಥ್ ರವರಿಗೆ 10 ಮತಗಳು […]

Continue Reading

ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿ ಚುನಾವಣೆ : ನೂತನ ಅಧ್ಯಕ್ಷರಾಗಿ ಶಶಿಕಲಾ ನಾಗರಾಜು ಆಯ್ಕೆ

ದೊಡ್ಡಬಳ್ಳಾಪುರ ಸೆ. 23( ವಿಜಯ ಮಿತ್ರ ) : ತಾಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ನಿರಂತರ ಪೈಪೋಟಿ ನಡುವೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭಾಗ್ಯಮ್ಮ 12 ಮತಗಳನ್ನು ಪಡೆದೆರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಶಿಕಲಾ ನಾಗರಾಜು 12 ಮತಗಳನ್ನು ಪಡೆದರು. ಎರಡು ಪಕ್ಷದ ಅಭ್ಯರ್ಥಿಗಳು ಸಮ ಮತಗಳನ್ನು ಪಡೆದ ಕಾರಣ ಲಾಟರಿ ಮೂಲಕ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಯಿತು. ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶಶಿಕಲಾ ನಾಗರಾಜು […]

Continue Reading

ದೊಡ್ಡಬಳ್ಳಾಪುರ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ : ತಾಲೂಕು ಅಧ್ಯಕ್ಷರಾಗಿ ಕೆ ವಿ ನಾಗರಾಜು ಅಧಿಕಾರ ಸ್ವೀಕಾರ

ದೊಡ್ಡಬಳ್ಳಾಪುರ ಸೆ. 20( ವಿಜಯಮಿತ್ರ ) : ಸ್ವಚ್ಛ ಪ್ರಾಮಾಣಿಕ ಜನಪರ ರಾಜಕಾರಣಕ್ಕಾಗಿ ನಮ್ಮನ್ನು ಬೆಂಬಲಿಸಿ ಸಾವಿರಾರು ನೂತನ ಸದಸ್ಯರು ಕೆ ಆರ್ ಎಸ್ ಪಕ್ಷ ಸೇರುತ್ತಿದ್ದಾರೆ. ಇದು ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆಡೆದಿದ್ದು, ನೂತನ ಪದಾಧಿಕಾರಿಗಳ ಬರುವಿಕೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವಶಂಕರ್ ತಿಳಿಸಿದರು. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ವತಿಯಿಂದ ತಾಲ್ಲೂಕಿನ ಕೆ […]

Continue Reading

ಹಾಲು ಉತ್ಪಾದಕರ ಅಭಿವೃದ್ಧಿಯೇ ನಮ್ಮ ಮುಖ್ಯ ಉದ್ದೇಶ – ಬಿ. ಸಿ. ಆನಂದ್

ದೊಡ್ಡಬಳ್ಳಾಪುರ ಸೆ 20 ( ವಿಜಯಮಿತ್ರ ) : ತಾಲೂಕಿನ ಹಾಲು ಉತ್ಪಾದಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿವರ್ಷ 25 ಲಕ್ಷ ರೂಪಾಯಿಗಳನ್ನು ಮೀಸಲಿಟ್ಟಿದ್ದು. ಅನಾರೋಗ್ಯಕ್ಕೆ ತುತ್ತಾದರೈತರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಬಮುಲ್ ನಿರ್ದೇಶಕ ಬಿ ಸಿ ಆನಂದ್ ತಿಳಿಸಿದರು. ಶುಕ್ರವಾರ ಲಿಂಗನಹಳ್ಳಿಯಲ್ಲಿ ನೆಡೆದ ಹಾಲು ಉತ್ಪದಕರಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು ಹಾಲು ಉತ್ಪಾದಕ ರೈತರಿಗೆ ಉತ್ತಮ ಸೇವೆ ಸಲ್ಲಿಸಲು ನಮ್ಮ ಸಹಕಾರ ಸಂಘ ಸದಾ ಸಿದ್ಧವಿರುತ್ತದೆ. ರೈತರ […]

Continue Reading

*ಅಂಗನವಾಡಿ ಶಿಕ್ಷಕಿಯರಿಂದ ಪೋಷಣ್ ಮಾಸಚಾರಣೆ : ಪೌಷ್ಟಿಕ ಆಹಾರ ಕುರಿತು ಅಗತ್ಯ ಮಾಹಿತಿ ರವಾನೆ*

ದೊಡ್ಡಬಳ್ಳಾಪುರ ಸೆ 20 ( ವಿಜಯಮಿತ್ರ ) : ಪೋಷಣ್ ಅಭಿಯಾನದ ಅಡಿಯಲ್ಲಿ ಪೋಷಣ್ ಮಾಸಚಾರಣೆ ಮಾಡುವ ಮೂಲಕ ಪೌಷ್ಟಿಕ ಆಹಾರದ ಮಹತ್ವವನ್ನು ತಿಳಿಸಲಾಗುತ್ತದೆ,ತಾವು ಸೇವಿಸುವ ಆಹಾರದಲ್ಲಿ ಕಾರ್ಬೋಹೈಡ್ರೇಟ್ಸ್, ವಿಟಮಿನ್ಸ್,ಪ್ರೋಟೀನ್ಸ್ ಖನಿಜಾಂಶ, ಲವಣಾಂಶ,ನೀರು ಒಳಗೊಂಡಂತ ಸಮತೋಲನ ಆಹಾರವನ್ನು ಸೇವಿಸುವ ಕುರಿತು ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮ ಇದಾಗಿದ್ದು. ಈ ಸಾರ್ವಜನಿಕರು ಪೌಷ್ಟಿಕ ಆಹಾರದ ಉಪಯೋಗವನ್ನು ಅರಿಯುವ ಮೂಲಕ ಉತ್ತಮ ಪೋಷಕಾಂಶವುಳ್ಳ ಆಹಾರ ಸೇವಿಸುವಂಥಾಗಲಿ ಎಂಬುದೇ ನಮ್ಮ ಉದ್ದೇಶ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು […]

Continue Reading

*ದೊಡ್ಡಬಳ್ಳಾಪುರ : ನಗರಸಭಾ ಪೌರಯುಕ್ತರನ್ನು ಭೇಟಿ ಮಾಡಿದ ರಾಜ್ಯವಿ-ಕರವೇ : ನಗರದಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡುವಂತೆ ಕೋರಿ ಮನವಿ ಸಲ್ಲಿಕೆ*

ದೊಡ್ಡಬಳ್ಳಾಪುರ : ನಗರದ ವಾರ್ಡ್‌ಲ್ಲೂ (ಇ)ಖಾತೆ ಆಂದೋಲನ ಮತ್ತು ಸ್ವಚ್ಛತೆ, ನೈರ್ಮಲ್ಯ ಕಾಪಾಡುವಂತೆ ಹಾಗೂ ನಗರದ ವಾಣಿಜ್ಯ ಮಳಿಗೆಗಳ ಪರವಾನಿಗೆ ಕೊಡುವಾಗ ಕನ್ನಡ ನಾಮಫಲಕ ಕಡ್ಡಾಯ ಮಾಡುವಂತೆ ಕೋರಿ ನಗರಸಭಾ ಪೌರಯುಕ್ತರಿಗೆ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಕುರಿತು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಎ. ನಂಜಪ್ಪ ಮಾತನಾಡಿ ನಗರದಲ್ಲಿ ಪ್ರತಿ ವಾಣಿಜ್ಯ ಮಳಿಗೆಗಳು ಹಾಗೂ ಅಂಗಡಿಗಳು ವ್ಯಾಪಾರ ಮಾಡಲು ದೃಢೀಕರಣ ಕೊಡುವ ನಗರಸಭೆ ಅದರಲ್ಲಿ ಶೇಕಡಾ 60%ರಷ್ಟು ಕನ್ನಡ ಅಕ್ಷರದಲ್ಲಿ […]

Continue Reading