ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯಿಂದ 70 ಕನ್ನಡ ರಾಜ್ಯೋತ್ಸವ ಆಚರಣೆ 

ದೊಡ್ಡಬಳ್ಳಾಪುರ : ಕ ನ್ನಡ ಭಾಷೆಯೂ ನಮ್ಮ ನಾಡಿನಲ್ಲಿ ಮನೆ ದೇವರಂತೆ ಆರಾಧಿಸಿ, ವರ್ಷವೀಡಿ ಸ್ಮರಿಸಬೇಕು. ಈ ಮೂಲಕ ಭಾಷೆಯ ಹೆಚ್ಚಿನ ಬಳಕೆ ಮತ್ತು ಉಳಿವಿಗೆ ಪ್ರತಿಯೊಬ್ಬ ಕನ್ನಡಿಗನು ಕಾರ್ಯೋನ್ಮುಖನಾಗಬೇಕು ಎಂದು ಹಿರಿಯ ಕನ್ನಡ ಪರ ಹೋರಾಟಗಾರ ರಾಜಘಟ್ಟ ರವಿ ಹೇಳಿದರು. ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಭಾನುವಾರ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಮತ್ತು ಸಂಘಟನೆಯ ೩ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 1963 ರಲ್ಲಿ ಮಾ.ರಾಮಮೂರ್ತಿ […]

Continue Reading

ಹೊಸ ವರ್ಷಾಚರಣೆ: ಜನವರಿ 1ರಿಂದ ಹೆಲ್ಕೆಟ್ ಕಡ್ಡಾಯ : ಸಂಚಾರಿ ಸುರಕ್ಷತಾ ಜಾಗೃತಿ ಜಾಥಾದಲ್ಲಿ ಡಿವೈಎಸ್‌ಪಿ ಪಾಂಡುರಂಗ ಎಚ್ಚರಿಕೆ

ದೊಡ್ಡಬಳ್ಳಾಪುರ: ಹೊಸ ವರ್ಷಾಚರಣೆ ಸಮಯದಲ್ಲಿ ರಾತ್ರಿ 12:30ರ ನಂತರ ಸಂಭ್ರಮಾಚರಣೆ ಅವಕಾಶವಿಲ್ಲ. ಪೊಲೀಸರ ಅನುಮತಿ ಇಲ್ಲದೆ ದೊಡ್ಡಮಟ್ಟದ ಸಂಭ್ರಮಚರಣೆ ಆಯೋಜಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್‌ಪಿ ಪಾಂಡುರಂಗ ಎಚ್ಚರಿಕೆ ನೀಡಿದ್ದಾರೆ. ಸಂಚಾರ ಸುರಕ್ಷತಾ ಸಪ್ತಾಹ ಪ್ರಯುಕ್ತ ಜಿಲ್ಲಾ ಪೊಲೀಸ್ ವತಿಯಿಂದ ನಗರದಲ್ಲಿ ನಡೆದ ಹೆಲೈಟ್ ಅರಿವು ಮತ್ತು ಉಚಿತ ಹೆಲೈಟ್ ಕಾರ್ಯಕ್ರಮದಲ್ಲಿ ವಿತರಣೆ ಮಾಡಿ ಮಾತನಾಡಿದರುಹೊಸ ವರ್ಷಾಚರಣೆ ವೇಳೆ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲೂ ಡಿ.31ರವರೆಗೆ ಬೈಕ್, ಕಾರು ಸೇರಿದಂತೆ ವಾಹನಗಳ ತಪಾಸಣೆ ಆರಂಭಿಸಲಾಗಿದೆ. ಕುಡಿದು […]

Continue Reading

2100ನೇ ದಿನಕ್ಕೆ ಕಾಲಿಟ್ಟ ನಿರಂತರ ಅನ್ನದಾಸೋಹ ಕಾರ್ಯಕ್ರಮ 

ದೊಡ್ಡಬಳ್ಳಾಪುರ : ಸಮ ಸಮಾಜದ ನಿರ್ಮಾಣಕ್ಕಾಗಿ ದುಡಿಯುವ ಪ್ರತಿಯೊಬ್ಬರೂ ಮಾದರಿ. ಸಮಾಜದಿಂದ ನಾವೇನು ಪಡೆಯಬಹುದು ಎಂಬ ಯೋಚನೆಯೊಂದಿಗೆ ಮಾಡುವ ಸಮಾಜ ಸೇವಾಕಾರ್ಯಗಳೇ ಹೆಚ್ಚಾಗಿರುವ ಸಮಯದಲ್ಲಿ ಮಲ್ಲೇಶ್ ಮತ್ತು ತಂಡ ನಿಸ್ವಾರ್ಥ ಸೇವಕರಾಗಿ ಕಳೆದ 2100 ದಿನಗಳಿಂದ ನಿರ್ಗತಿಕರಿಗೆ,ವಯೋವೃದ್ದರಿಗೆ, ಹಸಿದವರಿಗೆ ನಿರಂತರ ಅನ್ನದಾಸೋಹ ನಡೆಸಿಕೊಂಡು ಬರುತ್ತಿದ್ದಾರೆ ಅವರ ತಂಡಕ್ಕೆ ಶುಭವಾಗಲಿ ಎಂದು ಚಿತ್ರನಟ ಅಹಿಂಸಾ ಚೇತನ್ ತಿಳಿಸಿದರು. ನಗರದ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ನಿರಂತರ ಅನದಾಸೋಹ ಸಮಿತಿಯ 2100ನೇ ದಿನದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ […]

Continue Reading

ಗುರುಕುಲ ಇಂಟರ್ನ್ಯಾಷನಲ್ ಶಾಲೆಯಲ್ಲಿ ಅದ್ದೂರಿ ವಾರ್ಷಿಕೋತ್ಸವ ಸಮಾರಂಭ 

ದೊಡ್ಡಬಳ್ಳಾಪುರ : ಪ್ರಸ್ತುತ ಸಾಲಿನ ಪರೀಕ್ಷೆಗಳು ಇನ್ನೇನು ಸಮೀಪಿಸುತ್ತಿವೆ. ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಹೆಚ್ಚಿನ ಗಮನವನ್ನು ಕೊಡುತ್ತಾ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬೈಲಾಂಜಿನಪ್ಪ ತಿಳಿಸಿದರು. ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಗುರುಕುಲ ಇಂಟರ್ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಬೇಕು, ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವು ನಮ್ಮ ಜಿಲ್ಲೆಯಲ್ಲಿಯೇ ಇರುವ ಕಾರಣ ಹೊರದೇಶಗಳಿಂದ ಬರುವ ಮಾದಕ ವಸ್ತುಗಳು ಶಾಲಾ ಕಾಲೇಜುಗಳ ಮಕ್ಕಳ ಕೈಗೆಸಿಗುವಂಥಾಗಿದೆ. […]

Continue Reading

ಮಹಾನಾಯಕ ಜೈ ಭೀಮ್ ಕ್ರಿಕೆಟ್ ಟೂರ್ನಿಮೆಂಟ್ ನಲ್ಲಿ ದೊಡ್ಡಬೆಳವಂಗಲ ಬಾಯ್ಸ್ 

  ದೊಡ್ಡಬಳ್ಳಾಪುರ : ಮಂಗಳೂರಿನ ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜನೆ ಮಾಡಲಾಗಿರುವ ಮಹಾನಾಯಕ ಜೈ ಭೀಮ್ ಕ್ರಿಕೆಟ್ ಟೂರ್ನಿಮೆಂಟ್ ನಲ್ಲಿ ದೊಡ್ಡಬೆಳವಂಗಲ ಯುವಕರ ತಂಡ ಜನವರಿ 2,3ಮತ್ತು 4ರಂದು ನೆಡೆಯುವ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ ಎಂದು ತಂಡದ ಮಾಲೀಕರಾದ ಮಹೇಶ್ ತಿಳಿಸಿದರು.   ಈ ಕುರಿತು ಮಾತನಾಡಿದ ಅವರು ದಲಿತ ಸಮುದಾಯಗಳ ಸಾಮಾಜಿಕ ಹಾಗೂ ಆರ್ಥಿಕತೆ ಸಮಾನತೆಗಾಗಿ ಇಂತಹ ಕ್ರೀಡಾ ಕೂಟಗಳು ಸಹಕಾರಿಯಾಗಲಿದೆ . ದಲಿತ ಸಮುದಾಯಗಳ ಅಭಿವೃದ್ಧಿಗಾಗಿ ವಿಧಾನಸಭಾ ಸಭಾಪತಿಗಳಾದ ಯು ಟಿ ಖಾದರ್ ರವರು ಕಲ್ಪಿಸಿರುವ […]

Continue Reading

ಕಾಂಗ್ರೆಸ್ ಇಲ್ಲ ಗ್ಯಾರಂಟಿನೂ ಇಲ್ಲ. ಗ್ಯಾರಂಟಿಗೆ ವಾರೆಂಟಿ ಮುಗಿದಿದೆ – ಶಾಸಕ ಧೀರಜ್ ಮುನಿರಾಜು 

  ದೊಡ್ಡಬಳ್ಳಾಪುರ : ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ 19 ಸ್ಥಾನಗಳಿಗೆ ಹಾಗೂ ದೊಡ್ಡಬಳ್ಳಾಪುರ ನಗರಸಭೆಯ 1 ವಾರ್ಡ್ ಗೆ ಸಂಬಂಧಿಸಿದಂತೆ ಡಿ. 21ರಂದು ನಡೆದ ಚುನಾವಣೆಯ ಫಲಿತಾಂಶ ಇಂದು (ಡಿ. 24 ) ರಂದು ಪ್ರಕಟವಾಗಿದ್ದು. ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.   ಫಲಿತಾಂಶ ಪ್ರಕಟವಾದ ಬಳಿಕ ಮಾಧ್ಯಮಗಳೊಂದಿಗೆ ಶಾಸಕ ಧೀರಜ್ ಮುನಿರಾಜು ಮಾತನಾಡಿ ಬಿಜೆಪಿ ಭದ್ರಕೋಟೆ ಬರೀ ಮಂಗಳೂರು, ಉತ್ತರ‌ ಕನ್ನಡ ಅಲ್ಲ, ಬೆಂಗಳೂರು ಹಾಗೂ ಸುತ್ತಮುತ್ತಲಿನ […]

Continue Reading

ಬಾಶೆಟ್ಟಿಹಳ್ಳಿ ಪ. ಪಂ. ಚುನಾವಣಾ ಫಲಿತಾಂಶ ಪ್ರಕಟ : ಮೇಲುಗೈ ಸಾಧಿಸಿದ ಬಿಜೆಪಿ  

ದೊಡ್ಡಬಳ್ಳಾಪುರ : ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು. 19 ವಾರ್ಡುಗಳ ಪೈಕಿ 14 ವಾರ್ಡ್ಗಳಲ್ಲಿ BJP (ಭಾರತೀಯ ಜನತಾ ಪಾರ್ಟಿ) ಜಯಗಳಿಸುವ ಮೂಲಕ ಜಯಭೇರಿಬಾರಿಸಿದೆ. ಮತದಾನ ಡಿ.21ರಂದು ನಡೆದಿದ್ದ ಚುನಾವಣೆಯ ಮತಎಣಿಕೆ ಕಾರ್ಯ ಇಂದು (ಡಿ.24)ರಂದು ನಗರದ ಶ್ರೀ ಕೊಂಗಡಿಯಪ್ಪ ಪ್ರೌಢಶಾಲೆಯಲ್ಲಿ ನಡೆಯಿತು. 19 ಸ್ಥಾನಗಳ ಪೈಕಿ ಬಿಜೆಪಿ 14, ಕಾಂಗ್ರೆಸ್ 3, ಜೆಡಿಎಸ್ 1, ಪಕ್ಷೇತರ 1 ಸ್ಥಾನಗಳಲ್ಲಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.   ವಿಜೇತರು ಮೆರವಣಿಗೆ ಮೂಲಕ ತಮಗೆ ಮತದಾನ ನೀಡಿದ ಪ್ರತಿಯೊಬ್ಬ […]

Continue Reading

ಡಿ.19 ರಿಂದ 25 ವರೆಗೆ ಉತ್ತಮ ಆಡಳಿತ ಸಪ್ತಾಹ-25 ಅಭಿಯಾನ

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಉತ್ತಮ ಆಡಳಿತ ಸಪ್ತಾಹ-2025 ಅಂಗವಾಗಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಪೋಸ್ಟರ್ ಬಿಡುಗಡೆಗೊಳಿಸಿದರು.   ನಂತರ ಮಾತನಾಡಿದ ಅವರು ಭಾರತ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಅಹವಾಲುಗಳು ಮತ್ತು ಪಿಂಚಣಿ ಸಚಿವಾಲಯದ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಅಹವಾಲುಗಳ ಇಲಾಖೆ (DARPG) ವತಿಯಿಂದ 2025 ರ ಡಿಸೆಂಬರ್ 19 ರಿಂದ 25 ರವರೆಗೆ “ಸುಶಾಸನ ಸಪ್ತಾಹ – ಪ್ರಷಾಸನ್ ಗಾಂವ್ ಕಿ ಓರೆ” ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.   ಈ ಅಭಿಯಾನದ […]

Continue Reading

ವಿಶೇಷ ದಿನಗಳನ್ನು ಅರ್ಥಪೂರ್ಣವಾಗಿ ಆಚರಿಸಿ : ಕಮಲ್ ಲೋಚನ್ ಸಾಹು

ದೊಡ್ಡಬಳ್ಳಾಪುರ :: ಕಮಲ್ ಲೋಚನ್ ಸಾಹು ರವರ ಹುಟ್ಟು ಹಬ್ಬದ ಅಂಗವಾಗಿ ನಿರ್ಗತಿಕ ಕಡುಬಡವರಿಗೆ, ವೃದ್ಧರಿಗೆ ಹಾಗೂ ಶಾಲಾ ಮಕ್ಕಳಿಗೆ ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ಅನ್ನದಾಸೋಹದ ಜೊತೆಗೆ ಹಣ್ಣು, ಸಿಹಿ ವಿತರಣೆ ಮಾಡಲಾಯಿತು ತಾಲೂಕಿನ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರಂತರ ಅನ್ನದಾಸೋಹ ಸಮಿತಿಯೋಟ್ಟಿಗೆ ಕಮಲ್ ಲೋಚನ್ ಸಾಹು ಕುಟುಂಬ ತಮ್ಮ ವಿಶೇಷ ದಿನವನ್ನು ಆಚರಿಸಿ ಕೊಂಡರು. ಮಲ್ಲೇಶ್ ಮತ್ತು ತಂಡ ನಡೆಸಿಕೊಂಡು ಬರುತ್ತಿರುವ ನಿರಂತರ ಅನ್ನದಾಸೋಹದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಅಲ್ಲದೇ ನಮ್ಮ ವಿಶೇಷ […]

Continue Reading

ಸರ್ಕಾರಿ ಗೋಮಾಳ ಜಾಗದ ಒತ್ತುವರಿ ತೆರವುಗೊಳಿಸಿ ಅಂಬೇಡ್ಕರ್ ಭವನ ನಿರ್ಮಿಸಿ – ಮಂಜುನಾಥ್ ರಾವಣ್ 

ದೊಡ್ಡಬಳ್ಳಾಪುರ : ತಾಲೂಕಿನ ತೂಬಗೆರೆ ಹೋಬಳಿಯ ಹಾಡೊನಹಳ್ಳಿ ಗ್ರಾಮದ ಸರ್ವೆ ನಂಬರ್ 89ರಲ್ಲಿ 31 ಗುಂಟೆ ಸರ್ಕಾರಿ ಗೋಮಾಳ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟುತ್ತಿರುವ ಕಟ್ಟಡವನ್ನು ತೆರವುಗೊಳಿಸಿ, ಸದರಿ ಜಾಗದಲ್ಲಿ ಅಂಬೇಡ್ಕ‌ರ್ ಭವನ ನಿರ್ಮಣಕ್ಕೆ ಮಾಡಬೇಕು ಎಂದು ಕರ್ನಾಟಕ ದಲಿತ ಸಂರಕ್ಷಣಾ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿ. ಮಂಜುನಾಥ್ ಅಗ್ರಹಿಸಿದರು. ತಾಲ್ಲೂಕಿನ ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮದ ಸರ್ವೇ ನಂಬರ್ 89ರಲ್ಲಿ 31 ಗುಂಟೆ, ಗೋಮಾಳ ಜಾಗವಿದ್ದು ಆ ಜಾಗವನ್ನು ಸರ್ಕಾರದ ಯಾವುದೇ ಅನುಮತಿ ಇಲ್ಲದೆ ಯಾವುದೇ […]

Continue Reading