ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಮುರುಳಿ ಮೋಹನ್ ರವರ ತಾಯಿ ಲಕ್ಷ್ಮಮ್ಮ ನಿಧನ

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಮುರುಳಿ ಮೋಹನ್ ರವರ ತಾಯಿ ಲಕ್ಷ್ಮಮ್ಮ (80ವರ್ಷ ) ಸೋಮವಾರ ನಿಧನರಾಗಿದ್ದಾರೆ   ಮೃತರು ಮುರುಳಿ ಮೋಹನ ಸೇರಿದಂತೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ನೇತ್ರಗಳನ್ನು ಅಭಿಷೇಕ್ ನೇತ್ರಾಲಯಕ್ಕೆ ದಾನ ಮಾಡಲಾಗಿದ್ದು ದಿನಾಂಕ 30/9/2025 (ಇಂದು )ಮಂಗಳವಾರ ಬೆಳಿಗ್ಗೆ 10ಗಂಟೆಗೆ ಮುಕ್ತಿ ದಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.   ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, […]

Continue Reading

ಸಾರ್ವಜನಿಕರ ಸ್ವತ್ತನ್ನು ಉಳಿಸಿ : ಪಂಚಾಯತಿ ಅಧಿಕಾರಿಗಳಿಗೆ ಪ್ರಬುದ್ಧ ಕರ್ನಾಟಕ ಭೀಮಸೇನೆ ಮನವಿ

ದೊಡ್ಡಬಳ್ಳಾಪುರ : ತಾಲ್ಲೂಕಿನ ಪಾಲನಜೋಗಿಹಳ್ಳಿ ಗ್ರಾಮದಲ್ಲಿ ದಾಖಲಾತಿಗಳಿಲ್ಲದೆ, ಅಕ್ರಮ ಕಟ್ಟಡ ನಿರ್ಮಾಣ ಮಾಡಿಕೊಂಡು ಗ್ರಾಮಠಾಣದ ಸುಮಾರು ಜಾಗ ಒತ್ತುವರಿ ಮಾಡಿದ್ದಾರೆ ಆದರ ನಿಯಮಗಳ ಉಲ್ಲಂಘನೆ ಮಾಡಿ ಒತ್ತುವರಿ ಮಾಡಿದ್ದರು ಸೂಕ್ತ ಕ್ರಮ ಕೈಗೊಳ್ಳದೆ ಇರುವುದು ಸ್ಥಳೀಯ ಅಧಿಕಾರಿಗಳ ನಿರ್ಲಕ್ಷತೆ ತೋರುತ್ತಿದೆ ಎಂದು ಪ್ರಬುದ್ಧ ಕರ್ನಾಟಕ ಭೀಮ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಯು. ಮುನಿರಾಜು ಆರೋಪಿಸಿದರು.   ಭೂಕಬಳಿಕೆ ವಿರುದ್ಧ ಪಾಲನಜೋಗಿಹಳ್ಳಿಯಲ್ಲಿ ಪ್ರಬುದ್ಧ ಕರ್ನಾಟಕ ಭೀಮ ಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು ಗ್ರಾಮಠಾಣಾ ವ್ಯಾಪ್ತಿಯ ಸುಮಾರು […]

Continue Reading

ಅನ್ನದಾತರ ಸಂಕಷ್ಟಕ್ಕೆ ಬಿಜೆಪಿ ಸದಾ ಸ್ಪಂದನೆ: ಬಿ.ವೈ ವಿಜಯೇಂದ್ರ

ಬೀದರ್: ಬಿಜೆಪಿ ಪಕ್ಷವು ಅನ್ನದಾತರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತದೆ. ರೈತರ ಪರ ಧ್ವನಿಯಾಗಿ ನಾವು ಸದಾ ನಿಮ್ಮೊಟ್ಟಿಗಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ಭರವಸೆ ನೀಡಿದ್ದಾರೆ.   ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಪಿ. ಖಾಶೆಂಪುರ ಗ್ರಾಮದ ರೈತ ಮಹಿಳೆ ಶ್ರೀಮತಿ ಗಂಗಮ್ಮ ಅವರ ಪತಿ ಶಂಕರಾವ ಮಚ್ಚಕುರಿ ಅವರು ಇತ್ತೀಚೆಗೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಬಿ.ವೈ ವಿಜಯೇಂದ್ರ ಮತ್ತು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು […]

Continue Reading

ವಿವಿಧ ಕಾಮಗಾರಿಗಳಿಗೆ ತಾಲೂಕಿನ ಶಾಸಕ ಧೀರಜ್ ಮುನಿರಾಜು ಅವರ ಅಮೃತಹಸ್ತದಿಂದ ಚಾಲನೆ

ದೊಡ್ಡಬಳ್ಳಾಪುರ : ಸುಮಾರು 60 ಲಕ್ಷ ಅನುದಾನದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮವನ್ನು ವೀರಭದ್ರನ ಪಾಳ್ಯ ಹಾಗೂ ಕನಕದಾಸ ನಗರದಲ್ಲಿ ನೆರವೇರಿಸಲಾಗಿದೆ ಎಂದು ನಗರಸಭೆ ಸದಸ್ಯ ಶಿವ.ಎಂ (ಶಿವರಾಜ್ )ತಿಳಿಸಿದರು. ನಗರದ 12ನೇ ವಾರ್ಡ್ ನ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಹಾಗು ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದು ನಮ್ಮ ವಾರ್ಡಿಗೆ ಸುವರ್ಣ ದಿನವಾಗಿದ್ದು, ಮಾದರ ಚೆನ್ನಯ್ಯ ಹೆಬ್ಬಾಗಿಲು , ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ, ಸ್ಥಳೀಯ ಗ್ರಂಥಾಲಯದ […]

Continue Reading

ನೆನೆಗುದ್ದಿಗೆ ಬಿದ್ದಿದ್ದ ಗ್ರಂಥಾಲಯಕ್ಕೆ ಮರು ಜೀವ : ನೂತನ ಗ್ರಂಥಾಲಯ ಉದ್ಘಾಟನೆ

ಸ್ಥಳೀಯ ವಿದ್ಯಾರ್ಥಿಗಳು ಓದುಗರ ಅನುಕೂಲಕ್ಕಾಗಿ ನಗರದ 12ನೇ ವಾರ್ಡ್ ನಲ್ಲಿ 1200ಕ್ಕೂ ಅಧಿಕ ಪುಸ್ತಕ ಭಂಡಾರ ಹೊಂದಿರುವ ಸುಸಜ್ಜಿತ ಗ್ರಂಥಾಲಯವನ್ನು ಲೋಕಾರ್ಪಣೆ ಮಾಡಲಾಯಿತು.   ಸ್ಥಳೀಯ ಶಾಸಕ ಧೀರಜ್ ಮುನಿರಾಜು ನಗರಸಭಾ ಅಧ್ಯಕ್ಷ ಸುಮಿತ್ರ ಆನಂದ್ , ಸ್ಥಳೀಯ ನಗರಸಭಾ ಸದಸ್ಯ ಶಿವ.ಎಂ (ಶಿವರಾಜ್ ), ಹಾಗೂ ಎಲ್ಲಾ ನಗರಸಭೆ ಸದಸ್ಯರು, ಗಣ್ಯರ ಜೊತೆಗೂಡಿ ನೂತನ ಗ್ರಂಥಾಲಯವನ್ನು ಉದ್ಘಾಟಿಸಿದರು. ಈ ಕುರಿತು ಸ್ಥಳೀಯ ಮುಖಂಡರು ಹಾಗೂ ವಕೀಲರಾದ ನಾಗೇಂದ್ರ ಮಾತನಾಡಿ ವಿದ್ಯೆಎಂಬುದು ಕಳವು ಮಾಡಲಾಗದ ಸಂಪತ್ತು, ಹಾಗಾಗಿ […]

Continue Reading

ಲಿಂಗನಹಳ್ಳಿ ಆಂಜನೇಯ ದೇಗುಲ ಸ್ವಚ್ಚತಾ ಕಾರ್ಯ : ಶ್ರಮದಾನ ಮಾಡಿದ ಗ್ರಾಮಸ್ಥರು

ದೊಡ್ಡಬಳ್ಳಾಪುರ : ತಾಲ್ಲೂಕಿನ ಲಿಂಗನಹಳ್ಳಿ ಗ್ರಾಮದ ಪ್ರಸಿದ್ದ ಆಂಜನೇಯ ದೇಗುಲದ ಸ್ವಚ್ಚತಾ ಕಾರ್ಯವನ್ನು ಲಿಂಗನಹಳ್ಳಿ ಗ್ರಾಮಸ್ಥರು ದೊಡ್ಡಬಳ್ಳಾಪುರ ದೇವಾಲಯಗಳ ಸ್ವಚ್ಚತಾ ಸಮಿತಿಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಯಿತು.   ಲಿಂಗನಹಳ್ಳಿ ಎಂ ಪಿ ಸಿ ಎಸ್ ಅಧ್ಯಕ್ಷ ನಂಜಮರಿಯಪ್ಪ ನೇತೃತ್ವದಲ್ಲಿ ನೆಡೆದ ದೇವಾಲಯ ಸ್ವಚ್ಛತಾ ಕಾರ್ಯಕ್ಕೆ ತಾಲ್ಲೂಕಿನ ಹಲವು ಪ್ರಮುಖರು ಭಾಗವಹಿಸಿ ಶ್ರಮದಾನ ಮಾಡಿದರು.   ದೊಡ್ಡಬಳ್ಳಾಪುರ ದೇವಾಲಯಗಳ ಸ್ವಚ್ಚತಾ ಸಮಿತಿ ವತಿಯಿಂದ ಕೊನಘಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯ ಲಿಂಗನಹಳ್ಳಿ ಗ್ರಾಮದಲ್ಲಿ ಸ್ವಚ್ಛತೆ ಕಾಣದ ಪುರಾತನ ಆಂಜನೇಯ ದೇವಾಲಯವನ್ನು ಸ್ವಚ್ಛತೆ ಮಾಡಲಾಯಿತು.ಬೆಳೆದು […]

Continue Reading

ದೊಡ್ಡಬಳ್ಳಾಪುರ ರಾಮ್ ಕೆ.ರಾಮಾಂಜಿನಪ್ಪ ರಾಜ್ಯಕ್ಕೆ ಪ್ರಥಮ : ಒಂದು ನಿಮಿಷದ ಒಳಗೆ 400ಮೀಟರ್ ಓಟ

ರಾಜ್ಯ ಮಟ್ಟದ 400ಮೀಟರ್ ಓಟದ ಸ್ಪರ್ಧೆಯಲ್ಲಿ ತುಮಕೂರು ಜಿಲ್ಲೆಯ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಯ ದೊಡ್ಡಬಳ್ಳಾಪುರ ರಾಮ್ ಕೆ.ರಾಮಾಂಜಿನಪ್ಪ ಒಂದು ನಿಮಿಷದ ಒಳಗಾಗಿ 400ಮೀಟರ್ ಅಂತರವನ್ನು ಕ್ರಮಿಸುವ (ಓಡಿ) ಮೂಲಕ ರಾಜ್ಯಕ್ಕೆ ಪ್ರಥಮ ಸ್ಪರ್ಧಿಯಾಗಿ ರೆಕಾರ್ಡ್ ಮಾಡಿದ್ದಾರೆ.   ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಟಕ ರಾಜ್ಯ ದೈಹಿಕ ಶಿಕ್ಷಕರ ಸಂಘ (ರಿ)ಬೆಂಗಳೂರು ಜಿಲ್ಲಾ ಘಟಕ ದಕ್ಷಿಣ ಆಳ್ವಾಸ್ […]

Continue Reading

ನಗರ ದೇವತೆ ಮುತ್ಯಾಲಮ್ಮ ದೇವಿಗೆ ನವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ

ನವರಾತ್ರಿ ಹಬ್ಬದ ಪ್ರಯುಕ್ತ ನಗರ ದೇವತೆ ಮುತ್ಯಾಲಮ್ಮ ದೇವಿಗೆ ಶ್ರೀ ಮುತ್ಯಾಲಮ್ಮ ಸೇವಾದತ್ತಿ ಟ್ರಸ್ಟ್ ವತಿಯಿಂದ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಮುತ್ಯಾಲಮ್ಮ ಸೇವಾದತ್ತಿ ಟ್ರಸ್ಟ್ ನ ಕಾರ್ಯಾಧ್ಯಕ್ಷ ಡಿ ಎನ್ ತಿಮ್ಮರಾಜು ಮಾತನಾಡಿ ದೊಡ್ಡ ನಂಜುಂಡಪ್ಪ ಹಾಗೂ ಕುಟುಂಬಸ್ಥರ ವತಿಯಿಂದ ಈ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ದೇವಿಗೆ ವಿಶೇಷವಾಗಿ ಅರಿಶಿನ ಕುಂಕುಮದಿಂದ ಅಲಂಕಾರ ಮಾಡಿದ್ದು, ದೇವಾಲಯಕ್ಕೆ ಬರುವ ನೂರಾರು ಭಕ್ತಾದಿಗಳು ತಾಯಿ ದರ್ಶನ ಪಡೆದು ಕಣ್ತುಂಬಿಕೊಳ್ಳುತ್ತಿದ್ದಾರೆ ಎಂದರು.   […]

Continue Reading

ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ನುಡಿನಮನ‌ ಕಾರ್ಯಕ್ರಮ

ಕನ್ನಡ ಓದುಗರ ಸಂಖ್ಯೆಯನ್ನು ಕಾದಂಬರಿಗಳ ಮೂಲಕ ಹೆಚ್ಚಿಸಿದವರು ಎಸ್.ಎಲ್.ಭೈರಪ್ಪ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಘಟನಾ ಕಾರ್ಯದರ್ಶಿ ರಾಜಘಟ್ಟ ರವಿ ತಿಳಿಸಿದರು.   ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ನಡೆದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ನುಡಿನಮನ‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಎಸ್.ಎಲ್.ಭೈರಪ್ಪ ಅವರು ತಮ್ಮ ಪ್ರತಿಯೊಂದೂ ಕಾದಂಬರಿ ಬರೆಯುವುದಕ್ಕೆ ನಡೆಸುತ್ತಿದ್ದ ಪೂರ್ವ ತಯಾರಿ, ವ್ಯಾಪಕ ಅಧ್ಯಯನ, ಸಂಚಾರ ಗಮನಾರ್ಹವಾದುದು. ಸುದೀರ್ಘ ಕಾಲ ಭೈರಪ್ಪನವರ ಕಾದಂಬರಿಗಳು […]

Continue Reading

ಅಕ್ಟೋಬರ್ 2 ರಂದು ನಡೆಯಲಿದೆ ಹಳ್ಳಿಕಾರ್ ರಾಸುಗಳ ಫ್ಯಾಷನ್ ಶೋ

ಹಳ್ಳಿಕಾರ್ ತಳಿಯನ್ನು ಉಳಿಸುವ ನಿಟ್ಟಿನಲ್ಲಿ ಅಕ್ಟೋಬರ್ 2 ರಂದು ತಾಲ್ಲೂಕಿನ ತೂಬಗೆರೆ ಹೋಬಳಿಯ ದೊಡ್ಡತಿಮ್ಮನಹಳ್ಳಿ ಗ್ರಾಮದ ಶ್ರೀ ಸಪ್ಪಲಮ್ಮ ದೇವಿ ದೇವಾಲಯದ ಬಳಿ ಹಳ್ಳಿಕಾರ್ ಫ್ಯಾಷನ್ ಶೋ ಆಯೋಜನೆ ಮಾಡಲಾಗಿದೆ ಎಂದು ನವಕರ್ನಾಟಕ ಯುವ ಶಕ್ತಿ ವೇದಿಕೆ ತಿಳಿಸಿದೆ.   ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಹಳ್ಳಿಕಾರ್ ಫ್ಯಾಷನ್ ಶೋ ಕುರಿತು ನವಕರ್ನಾಟಕ ಯುವ ಶಕ್ತಿ ವೇದಿಕೆ ಮುಖಂಡರು ಮಾಹಿತಿ ನೀಡಿದರು.ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಒಟ್ಟಾರೆ ಒಂದು ಹಳ್ಳಿಕಾರ್ ತಳಿಯ ಜೋಡಿಯನ್ನು “ಚಾಂಪಿಯನ್’ ಎಂದು ಆಯ್ಕೆ […]

Continue Reading