ಸಮಾನತೆ ಸಂದೇಶ ಸಾರಿದ ಮಹಾನ್ ನಾಯಕ ಡಾ. ಬಿ.ಆರ್.ಅಂಬೇಡ್ಕರ್

Spread the love

ಶಿವಮೊಗ್ಗ: ಭಾರತದಲ್ಲಿನ ಬಹುತ್ವವುಳ್ಳ ಸಮಾಜದಲ್ಲಿ ಹೆಚ್ಚಿನವರು ಎಲ್ಲ ಕ್ಷೇತ್ರಗಳಲ್ಲಿ ಅಸಮಾನತೆಯಿಂದ ಬಳಲುತ್ತಿದ್ದರು. ಇಂತಹ ಕಾಲಘಟ್ಟದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಂತ ಶ್ರೇಷ್ಠ ಗ್ರಂಥವನ್ನು ರಚಿಸಿ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ ಮಹಾನ್ ನಾಯಕ ಎಂದು ಭಾರತ ಸ್ಕೌಟ್ ಅಂಡ್ ಗೈಡ್ಸ್ ನ ಜಿಲ್ಲಾ ಸ್ಕೌಟ್ ಆಯುಕ್ತರಾದ ಎಸ್ ಜಿ ಆನಂದ್ ಮಾತನಾಡಿದರು

 

ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್135ನೇ ಜಯಂತಿ ಅಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಸಂವಿಧಾನ ವ್ಯವಸ್ಥೆಯಿಂದ ಎಲ್ಲರಿಗೂ ಅವಕಾಶ ಸಿಗುತ್ತಿದ್ದು, ಉತ್ತಮ ಸಮಾಜ ರೂಪುಗೊಳ್ಳುವಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕುರಿತು ಹೆಚ್ಚಿನ ಅಧ್ಯಯನ ನಡೆಸಬೇಕು. ಅವರ ಕೃತಿಗಳನ್ನು ಯುವಜನತೆ ಅಧ್ಯಯನ ನಡೆಸಬೇಕು ಎಂದು ತಿಳಿಸಿದರು.

 

 

ಅಂಬೇಡ್ಕರ್ ಅವರು ಶೋಷಿತ ವರ್ಗದ ಧ್ವನಿಯಾಗಿದ್ದರು. ಲಂಡನ್‌ನಲ್ಲಿ ಅಧ್ಯಯನ ನಡೆಸಿದ ಅವರು ನಂತರ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡರು. ಸಮಸಮಾಜದ ಕನಸು ಕಂಡಂತಹ ಅಂಬೇಡ್ಕರ್ ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದರು ಎಂದು ಹೇಳಿದರು.

 

 

ಸ್ಕೌಟ್ ಕೇಂದ್ರ ಸಾನಿಕ ಆಯುಕ್ತರಾದ ಜಿ ವಿಜಯ ಕುಮಾರ್ ಅವರು ಮಾತನಾಡುತ್ತಾ. ಎಲ್ಲಾ ದೇಶದ ಸಂವಿದಾನ ಕ್ಕಿಂತ ನಮ್ಮ ದೇಶದ ಸಂವಿಧಾನ ತುಂಬಾ ವಿಶೇಷವಾದದ್ದು ಅಂಬೇಡ್ಕರ್ ಅವರ ತತ್ವ ಆದರ್ಶ ಗುಣಗಳು ಹಾಗೂ ಆಡಳಿತಾತ್ಮಕ ಧೋರಣೆಯನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಸ್ಥಾನಿಕ ಆಯುಕ್ತರಾದ ಮಲ್ಲಿಕಾರ್ಜುನ್ ಕಾನೂರು, ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರಯ್ಯ. ಎನ್ ಆರ್ ಚಂದ್ರಶೇಖರ್.. ರುದ್ರಪ್ಪ ಚೀಲೂರು ಎಂಎಲ್ ಶಾಂತಮ್ಮ. ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್ ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಗರಾಭಿವೃದ್ಧಿ ಮಂಡಳಿ, ಬೆಂಗಳೂರು ಡಾಕ್ಟರ್ ನಾಗೇಂದ್ರ ಹೊನ್ನಾಳಿ . ಚಂದ್ರಶೇಖರ್ ಗೋಣಿಗೆರೆ.. ಚಂದ್ರಶೇಖರ್ ಶಾಸ್ತ್ರಿಜಿಲ್ಲಾ ಸಂಸ್ಥೆಯ ಕೇಂದ್ರ ಕಚೇರಿಯ ಸಿಬ್ಬಂದಿಗಳು. ವಿವಿಧ ಶಾಲೆಯ ಸ್ಕೌಟ್ ಕ್ಲಬ್ ಗೈಡ್ ಬುಲ್ ಬುಲ್. ರೋವರ್ಸ್ ರೆಂಜರ್ಸ್ ಹಾಜರಿದ್ದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.