ಬಾಶೆಟ್ಟಿಹಳ್ಳಿ : ಗಣೇಶ ವಿಸರ್ಜನೆಗೆ ಕೃತಕ ಹೊಂಡ ನಿರ್ಮಾಣ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮುಖ್ಯ ಆಡಳಿತ ಅಧಿಕಾರಿ ನರಸಿಂಹಮೂರ್ತಿ ಮನವಿ

Spread the love

ದೊಡ್ಡಬಳ್ಳಾಪುರ : ಪ್ರತಿ ಬಾರಿಯೂ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಾರ್ವಜನಿಕರು ಕೆರೆ ಕುಂಟೆಗಳ ಬಳಿ ಹೋಗಿ ಅಪಾಯಕ್ಕೆ ಸಿಲುಕುವುದು ಸರ್ವೇಸಾಮಾನ್ಯವಾಗಿದೆ ಇದನ್ನು ತಪ್ಪಿಸಲು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ವಿಶೇಷ ಕ್ರಮಕ್ಕೆ ಮುಂದಾಗಿದ್ದು. ಸಾರ್ವಜನಿಕರ ಅನುಕೂಲಕ್ಕಾಗಿ ಕೃತಕ ಗಣಪತಿ ವಿಸರ್ಜನಾ ಹೊಂಡ ನಿರ್ಮಿಸಲಾಗಿದೆ.

ಬಾಶೆಟ್ಟಿಹಳ್ಳಿ ಕೆರೆ ಪಕ್ಕದಲ್ಲಿ 11 ಗ್ರಾಮಗಳ ಗಣಪತಿ ವಿಸರ್ಜನೆಗಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಕೃತಕ ಹೋಂಡ ನಿರ್ಮಿಸಿದ್ದು, ಈ ವಿಸರ್ಜನಾ ಪ್ರಕ್ರಿಯೆಗೆ ಸತತ 9 ದಿನಗಳ ಕಾಲ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಲಾಗಿದೆ.

ಈ ಕುರಿತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಮುಖ್ಯ ಆಡಳಿತಾಧಿಕಾರಿ ನರಸಿಂಹಮೂರ್ತಿ ಮಾತನಾಡಿ ಸಾರ್ವಜನಿಕರ ಅನುಕೂಲಕ್ಕಾಗಿ ಕೃತಕ ಹೊಂಡ ನಿರ್ಮಾಣ ಮಾಡಲಾಗಿದೆ. ಮನೆಗಳಲ್ಲಿ ಕೂರಿಸುವ ಸಣ್ಣಪುಟ್ಟ ಗಣಪತಿಗಳ ವಿಸರ್ಜನೆಗೆ ಅನುಕೂಲ ಮಾಡುವ ಮಾಡುವ ನಿಟ್ಟಿನಲ್ಲಿ ಮನೆ ಮುಂಭಾಗಕ್ಕೆ ನಮ್ಮ ಪಟ್ಟಣ ಪಂಚಾಯಿತಿ ಟ್ರ್ಯಾಕ್ಟರ್ ತೆರಳಲಿದ್ದು, ಟ್ರ್ಯಾಕ್ಟರ್ ನಲ್ಲಿ ಮೊದಲೇ ಇರಿಸಲಾದ ನೀರು ತುಂಬಿದ ಡ್ರಮ್ ಗಳಲ್ಲಿ ನಮ್ಮ ಸಿಬ್ಬಂದಿ ಗಣಪತಿ ವಿಸರ್ಜನೆ ಮಾಡದಿದ್ದಾರೆ , ಅಲ್ಲದೆ ಮೆರವಣಿಗೆ ಮೂಲಕ ತರಲಾಗುವ ಗಣಪತಿಗಳನ್ನು ಕೆರೆಯ ಪಕ್ಕದಲ್ಲಿ ಕೃತಕವಾಗಿ ನಿರ್ಮಾಣ ಮಾಡಲಾಗಿರುವ ಹೊಂಡದಲ್ಲಿ ನಮ್ಮ ಸಿಬ್ಬಂದಿಗಳೇ ವಿಸರ್ಜನೆ ಮಾಡಲಿದ್ದಾರೆ ಎಂದರು . ಸಾರ್ವಜನಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಕಲ್ಪಿಸಿದ್ದು ಗಣಪತಿ ವಿಸರ್ಜನೆಗೆ ಬರುವ ಎಲ್ಲ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಸಾರ್ವಜನಿಕರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

Ad

 

Ad

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯ ಪ್ರಭಾರ ಆರೋಗ್ಯಧಿಕಾರಿ ಉಮಾಶಂಕರ್ ಮಾತನಾಡಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 11 ಗ್ರಾಮಗಳಲ್ಲಿ ಈಗಾಗಲೇ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ, ಅನುಮತಿ ನೀಡಲಾಗಿರುವ ಎಲ್ಲಾ ಗಣಪತಿಗಳನ್ನು ನಿಯಮಾನುಸಾರ ನಮ್ಮಲ್ಲಿ ವಿಸರ್ಜನೆ ಮಾಡಬೇಕೆಂದು ತಿಳಿಸಲಾಗಿದೆ. ಈ ಹೊಂಡದ ಬಳಿ ಸದಾ ನಮ್ಮ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದು , ಗಣಪತಿ ವಿಸರ್ಜನೆಗೆ ಬರುವ ಸಾರ್ವಜನಿಕರಿಗೆ ಸಹಾಯ ಮಾಡಲಿದ್ದಾರೆ ಅಲ್ಲದೆ ಗಣಪತಿ ವಿಸರ್ಜನೆಯನ್ನು ನಮ್ಮ ಸಿಬ್ಬಂದಿಗಳೇ ಮಾಡಲಿದ್ದಾರೆ , ಗಣಪತಿ ವಿಸರ್ಜನಾ ಕಾರ್ಯಕ್ಕಾಗಿ ನುರಿತ ಈಜುಗಾರರನ್ನು ಗುರುತಿಸಿ ಹೊಂಡದ ಬಳಿ ನೇಮಿಸಲಾಗಿದೆ , ಸಾರ್ವಜನಿಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

Ad

Ad

Leave a Reply

Your email address will not be published. Required fields are marked *

© 2026 Malnad TV. All Rights Reserved.