13000 ಏನ್ ಪಿ ಎಸ್ ನೌಕರರ ಕುಟುಂಬಗಳಿಗೆ ಹಳೆ ಪಿಂಚಣಿ ಯೋಜನೆ ಜಾರಿಗೆ ಆದೇಶ

2006 ಏಪ್ರಿಲ್‌ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006 ರ ನಂತರ ನೇಮಕಾತಿಗೊಂಡ ರಾಜ್ಯ ಸರ್ಕಾರದ ಸುಮಾರು 13,000 ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಲಾಗಿದೆ. ಚುನಾವಣೆಗೂ ಪೂರ್ವದಲ್ಲಿ ಎನ್.ಪಿ.ಎಸ್ ನೌಕರರು ಮುಷ್ಕರು ಮಾಡುವ ವೇಳೆ ಸ್ಥಳಕ್ಕೆ ಭೇಟಿನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೇಡಿಕೆ ಈಡೇರಿಸುವ ಭರವಸೆಯನ್ನು ಕಾಂಗ್ರೆಸ್ ನಾಯಕರು ನೀಡಿದ್ದರು.   ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮಾರು 13,000 ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ […]

Continue Reading

ಫೂಟ್ ಪಾಥ್ ತುಂಬಿದ ಕಸದ ರಾಶಿ : ಗಮನ ಹರಿಸದ ಜನಪ್ರತಿನಿಧಿಗಳು

ದೊಡ್ಡಬಳ್ಳಾಪುರ ತಾಲ್ಲೂಕಿನ ಪಾಲನಜೋಗಿಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಎಲ್ಲೂ ನೋಡಿದರೂ ಕಸದ ರಾಶಿ ತುಂಬಿದೆ . ಗೌರಿಬಿದನೂರು ಹೆದ್ದಾರಿ ಮಾರ್ಗದ ಅಕ್ಕ ಪಕ್ಕದಲ್ಲಿ ಕಸ ತುಂಬಿದ್ದು ಸಾರ್ವಜನಿಕರು ಸಂಚರಿಸುವ ಪಾದಚಾರಿ ಮಾರ್ಗ ಕಸದಿಂದ ತುಂಬಿದೆ. ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.. ಪಾಲನಜೋಗಿಹಳ್ಳಿ ಪಾದಚಾರಿಗಳ ಮಾರ್ಗ ಸಂಪೂರ್ಣ ಕಸದಿಂದ ತುಂಬಿದ್ದು ಸಾರ್ವಜನಿಕರು ಹೆದ್ದಾರಿಯ ಮೇಲೆ ನಡೆದಾಡುವಂಥಾಗಿದೆ .ಈ ಕೂಡಲೇ ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆದ್ದು ಕಸದ ರಾಶಿಯನ್ನು ತೆರವುಗೊಳಿಸಿ ಸಾರ್ವಜನಿಕರು ಪಾದಚಾರಿ ಮಾರ್ಗ ಬಳಸಲು ಅನುವು ಮಾಡಿಕೊಡಬೇಕೆಂದು […]

Continue Reading

ಘಾಟಿ ಸುಬ್ರಮಣ್ಯ ದರ್ಶನ ಪಡೆದ ನಿರ್ಮಾಪಕ ಉಮಾಪತಿ ಗೌಡ: ” ಉಪಾಧ್ಯಕ್ಷ ” ಸಿನಿಮಾ ಕುರಿತು ಹೇಳಿದ್ದೇನು..?

ದೊಡ್ಡಬಳ್ಳಾಪುರ : ನಾಳೆ ಚಿಕ್ಕಣ್ಣ ಅಭಿನಯದ ನೂತನ ಚಲನಚಿತ್ರ “ಉಪಾಧ್ಯಕ್ಷ “ಬಿಡುಗಡೆಯಾಗಲಿದೆ. ಈಗಾಗಲೇ ಒಳ್ಳೆಯ ರೈಟ್ಸ್ ದೊರೆಯುತ್ತಿದ್ದು .ಕನ್ನಡಿಗರ ಮನಸ್ಸು ಗೆಲ್ಲುವ ಭರವಸೆ ಇದೆ. ನಾಳೆ ಬೆಂಗಳೂರಿನ ತ್ರಿವೇಣಿ ಸೇರಿದಂತೆ ಹಲವು ಚಿತ್ರಮಂದಿರಗಳಿಗೆ ಭೇಟಿ ನೀಡಲಿದ್ದೇವೆ ಎಂದು ನಿರ್ಮಾಪಕ ಉಮಾಪತಿ ಗೌಡ ತಿಳಿಸಿದರು   ಚಿಕ್ಕಣ್ಣ ಅಭಿನಯದ ” ಉಪಾಧ್ಯಕ್ಷ ” ಚಲನಚಿತ್ರ ಬಿಡುಗಡೆಯ ಹಿನ್ನಲೆ ಇಂದು ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯಕ್ಕೆ ನಿರ್ಮಾಪಕ ಉಮಾಪತಿ ಗೌಡ ತಮ್ಮ ಸ್ನೇಹಿತರೊಂದಿಗೆ […]

Continue Reading

ಭಾರತ್ ಜೋಡೋ ಯಾತ್ರೆ ನಿಲ್ಲಿಸಿ ಬಿಜೆಪಿ ಗುಂಡಾ ವರ್ತನೆ : ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಕಾರ್ಯಕರ್ತರ ಅಗ್ರಹ

ದೊಡ್ಡಬಳ್ಳಾಪುರ: ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ನ್ಯಾಯಯಾತ್ರೆ’ ಮೇಲೆ ದಾಳಿ ಯತ್ನ ನಡೆಸಿದ ಅಸ್ಸಾಂ ಸರ್ಕಾರ ಹಾಗೂ ಬಿಜೆಪಿ ಕಾರ್ಯಕರ್ತರ ನಡೆ ಖಂಡಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ನಗರದ ತಾಲ್ಲೂಕು‌ ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.   ದೊಡ್ಡಬಳ್ಳಾಪುರ ಕ್ಷೇತ್ರದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ನಿಮಂತ್ ಬಿಸ್ವಾಸ್ ವಿರುದ್ಧ ಘೋಷಣೆ ಕೂಗಿದರು.   ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ […]

Continue Reading

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ವಿಶೇಷವಾಗಿ ಆಚರಿಸಿದ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ

ದೊಡ್ಡಬಳ್ಳಾಪುರ : ಹೆಣ್ಣು ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಹಾಗೂ ಕರ್ತವ್ಯ . ಸಮಾಜದಲ್ಲಿ ಹೆಣ್ಣು ನಿರ್ಭೀತಿಯಿಂದ ಜೀವಿಸುವ ವಾತಾವರಣದ ನಿರ್ಮಾಣವಾಗಬೇಕಿದೆ ನಮ್ಮ ಬಳಿಗೆ ಬರುವ ಸಾರ್ವಜನಿಕರಿಗೆ ಹೆಣ್ಣು ಮಕ್ಕಳ ಬಗ್ಗೆ ಅರಿವು ಮೂಡಿಸುವ ಕಾರ್ಯ ನಮ್ಮಿಂದಾಗಬೇಕು ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ರಮೇಶ್ ತಿಳಿಸಿದರು ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಸ್ಪತ್ರೆಯ ಸಿಬ್ಬಂದಿ” ಬೇಟಿ ಬಚಾವೋ ಬೇಟಿ ಪಡಾವೋ ” ಎಂಬ ಧ್ಯೇಯ ವಾಕ್ಯದೊಂದಿಗೆ 2024ರ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆಯನ್ನು ವಿಶೇಷವಾಗಿ […]

Continue Reading

X (ಎಕ್ಸ್ ) ಸಂದೇಶದ ಮೂಲಕ ಬಿಜೆಪಿ ಪೋಸ್ಟ್ : ಶ್ರೀ ರಾಮ ಮತ್ತು ಹಿಂದೂ ವಿರೋಧಿ ಕಾಂಗ್ರೆಸ್ ಎಂದು ಆರೋಪ

ಉದ್ದೇಶಪೂರ್ವಕವಾಗಿ ಹಿಂದೂಗಳನ್ನು ಪ್ರಚೋದಿಸುವ ಮತ್ತು ಅವರ ಆಳವಾದ ನಂಬಿಕೆಗಳಿಗೆ ಸವಾಲು ಹಾಕುವ ಮೂಲಕ ಕಾಂಗ್ರೆಸ್ 500 ವರ್ಷಗಳ ಹೋರಾಟ ಮತ್ತು ನೋವಿನ ಗಾಯಗಳನ್ನು ಆಳಗೊಳಿಸುತ್ತಿದೆ ಎಂದು ರಾಜ್ಯ ಬಿಜೆಪಿ ಎಕ್ಸ್ (ಟ್ವಿಟ್) ಮಾಡಿದೆ.   ತಮ್ಮ ಎಕ್ಸ್ ಖಾತೆಯಲ್ಲಿ ಹಲವು ಅಂಶಗಳನ್ನು ಬರೆದುಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ನೇರ ಆರೋಪ ಮಾಡಿದೆ   ಪ್ರಮುಖ ಅಂಶಗಳು ಇಂತಿವೆ :   ▪️ ಪ್ರಭು ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನಿಸುವುದು. ▪️ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸುವ ಮೂಲಕ […]

Continue Reading

ಗಾಂಧೀಜಿ ಕುರಿತು ಪ್ರಬಂಧ ಸ್ಪರ್ಧೆ : ಶಿಕ್ಷಣ ಸಚಿವರಿಗೆ ಪತ್ರ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ

“21ನೆ ಶತಮಾನದ ಆತಂಕಗಳು ಮತ್ತು ಗಾಂಧೀಜಿಯವರ ವಿಚಾರಗಳು ಪ್ರತಿಪಾದಿಸುವ ಪರಿಹಾರಗಳು” ಎಂಬ ವಿಷಯದ ಕುರಿತಾದ ಪ್ರಬಂಧ ಸ್ಪರ್ಧೆ ನೆಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ.   ಪ್ರತಿ ಶಾಲೆಗಳ 6ನೆ ತರಗತಿ ನಂತರದ ವಿದ್ಯಾರ್ಥಿಗಳಿಗೆ ( ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ಕಾಲೇಜು, ವಿಶ್ವವಿದ್ಯಾಲಯಗಳ ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ವರೆಗೆ, ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸುವುದರಿಂದ ಗಾಂಧೀಜಿಯವರನ್ನು ಅರಿತುಕೊಳ್ಳಲು ಇನ್ನೂ […]

Continue Reading

ರೈತರಿಗೆ ಅನುಕೂಲವಾಗುವ ರಸ್ತೆಗೆ ರೈತರಿಂದಲೇ ಅಡ್ಡಿ : ಸರ್ಕಾರಿ ನಕಾಶೆ ರಸ್ತೆ ಬದಲು ಪಥ ಬದಲಾವಣೆಯ ರಸ್ತೆ ನಿರ್ಮಾಣ

ದೊಡ್ಡಬಳ್ಳಾಪುರ ತಾಲೂಕಿನ ಲಕ್ಷ್ಮೀದೇವಿಪುರ ಗ್ರಾಮದಲ್ಲಿ ನಕಾಶೆ ರಸ್ತೆ ಬಿಡಲು ಒಪ್ಪದ ರೈತರಿಗೆ ಮನವೊಲಿಸಿ, ಪಥ ಬದಲಾವಣೆ ರಸ್ತೆಯನ್ನು ಕಂದಾಯ ಇಲಾಖೆ ವತಿಯಿಂದ ಮಾಡಲಾಯಿತು ಕೆಲಕಾಲ ರೈತರ ನಡುವೆ ಮಾತಿನ ಚಕಮಕಿ ನಡೆಯಿತು . ರೈತರ ಜಟಾಪಟಿಯಿಂದ ಬೇಸತ್ತ ಕಂದಾಯ ಇಲಾಖೆ ಅಧಿಕಾರಿಗಳು ಪಥ ಬದಲಾವಣೆ ರಸ್ತೆ ಕುರಿತು ಮಾಹಿತಿ ನೀಡಿ ರೈತರ ಮನವೋಲಿಸಿದ್ದಾರೆ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಹರಸಾಹಸ ಮಾಡುವ ಮೂಲಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು ಪ್ರಾಥಮಿಕ ಹಂತ ಮುಗಿಸಿದ್ದಾರೆ. ಸ್ಥಳೀಯ ರೈತರಾದ ನಾಗರಾಜ್ ಮಾತನಾಡಿ ನಮ್ಮದು […]

Continue Reading

ದೀಪೋತ್ಸವ ಮಾಡುವ ಮೂಲಕ ರಾಮೋತ್ಸವದ ಆಚರಣೆ

ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಶ್ರೀ ರಾಮ ದೇವರಿಗೆ ದೀಪ ಬೆಳಗುವ ಮೂಲಕ ಈ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ . ಅಯೋಧ್ಯೆ ಆಚರಣೆಯನ್ನು ಗ್ರಾಮಗಳಲ್ಲಿ ಗ್ರಾಮಸ್ಥರು ಸೃಷ್ಟಿಸಿದ್ದಾರೆ ಎಂದರೆ ತಪ್ಪಾಗಲಾರದು ಎಂದು ಟಿ ಹೊಸಹಳ್ಳಿ ಹಾಗೂ ಸುನಘಟ್ಟಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ್ ತಿಳಿಸಿದರು ಗ್ರಾಮಗಳಲ್ಲಿ ಟ್ರ್ಯಾಕ್ಟರ್ ನಲ್ಲಿ ಶ್ರೀರಾಮರ ಭಾವಚಿತ್ರವನ್ನು ಮೆರವಣಿಗೆ ಮಾಡುವ ಮೂಲಕ ರಾಮೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು ಗ್ರಾಮದಲ್ಲಿ ಪ್ರತಿ ಮಹಿಳೆಯರು ದೀಪ ಬೆಳಗಿಸಿ ರಾಮದೇವರಿಗೆ ಆರತಿ ಮಾಡುವ ಮೂಲಕ ಅಯೋಧ್ಯೆ […]

Continue Reading

ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಲಂಚದ ಆರೋಪ : ಚಿಕಿತ್ಸೆ ನೀಡಲು 50 ರೂಪಾಯಿ ಕೊಟ್ಟೆ ಎಂದ ಸಾರ್ವಜನಿಕರ ಆರೋಪ

ಒಂದು ಇಂಜೆಕ್ಷನ್ ನೀಡಿ ರೂ.50 ಪಡೆದು ಸರಿಹೋಗುತ್ತೆ ಮನೆಗೆ ಹೋಗಿ ಎಂದು ಆರೋಗ್ಯ ಸಿಬ್ಬಂದಿ ಹೇಳಿದರು ಆದರೆ ಮನೆಗೆ ಹೋದ ನಂತರ ಸಮಸ್ಯೆ ಉಲ್ಬಣವಾಗಿದೆ ಮತ್ತೆ ಆಸ್ಪತ್ರೆಗೆ ಬಂದಿದ್ದೇವೆ ಆದರೆ ನಮ್ಮನ್ನು ಸ್ಪಂದಿಸುವವರು ಯಾರು ಇಲ್ಲ ಆರೋಗ್ಯ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ಊದ್ನಳ್ಳಿ ಗ್ರಾಮದ ಗ್ರಾಮಸ್ಥ ಶಿವಕುಮಾರ್ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ ಸಂಜೆಯಿಂದ ತಡರಾತ್ರಿಯಾದರೂ ಆಸ್ಪತ್ರೆಯ ಸಿಬ್ಬಂದಿ ಸ್ಪಂದಿಸಿಲ್ಲ 15 ಕಿ.ಮೀ ಗಳ ದೂರದಿಂದ ಆಸ್ಪತ್ರೆಗೆ ಬಂದಿದ್ದು […]

Continue Reading